Home Loan: ಯಾವ ಬ್ಯಾಂಕುಗಳಲ್ಲಿ ಅತೀ ಕಡಿಮೆ ಬಡ್ಡಿಗೆ ಗೃಹಸಾಲ ಸಿಗುತ್ತದೆ, ಇಲ್ಲಿದೆ ನೋಡಿ ಆ 5 ಬ್ಯಾಂಕುಗಳು.

ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲಗಳನ್ನು ನೀಡುವ ಐದು ಬ್ಯಾಂಕ್ ಬಗ್ಗೆ ತಿಳಿಯಿರಿ

Housing Loan Interest Rate: ಪ್ರತಿಯೊಬ್ಬ ವ್ಯಕ್ತಿಯು ಸ್ವಂತ ಮನೆ ಹೊಂದುವ ಕನಸು ಕಟ್ಟಿರುತ್ತಾನೆ . ಹೊಸ ಮನೆ ಕಟ್ಟಿಸುವುದಾಗಲೀ ಅಥವಾ ಸ್ವಂತ ಮನೆ ಖರೀದಿಸುವುದಾಗಲೀ ಸುಲಭದ ವಿಷಯವಲ್ಲ. ಇದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ.

ಎಲ್ಲರ ಬಳಿಯೂ ಮನೆಗೆ ಬೇಕಾದ ಪೂರ್ಣ ಮೊತ್ತ ಇರುವುದಿಲ್ಲ. ಅಂತಹ ಜನರು ಗೃಹ ಸಾಲವನ್ನು ಅವಲಂಬಿಸುತ್ತಾರೆ. ಪ್ರಸ್ತುತ ಇತರ ಸಾಲಗಳಿಗೆ ಹೋಲಿಸಿದರೆ ಗೃಹ ಸಾಲಗಳು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಿಗುತ್ತವೆ. ಆದರೆ ಬ್ಯಾಂಕ್‌ಗಳಿಂದ ಬ್ಯಾಂಕ್‌ಗಳಿಗೆ ಬಡ್ಡಿ ದರ, ಪ್ರಕ್ರಿಯೆ ಶುಲ್ಕ ಭಿನ್ನವಾಗಿರುತ್ತವೆ.

SBI Home Loan Interest Rate
Image Credit: News18

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (SBI)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆಗಿದ್ದು, ಗೃಹ ಸಾಲವನ್ನು ಕನಿಷ್ಠ ಬಡ್ಡಿಯಲ್ಲಿ ನೀಡುತ್ತದೆ . ಬ್ಯಾಂಕ್‌ ಪ್ರಸ್ತುತ ವಾರ್ಷಿಕ ಶೇ. 8.60 ಯಿಂದ ಶೇ. 9.45ರಷ್ಟು ಬಡ್ಡಿಯಲ್ಲಿ ಗೃಹ ಸಾಲವನ್ನು ನೀಡುತ್ತದೆ. ಅಲ್ಲದೆ ಎಸ್‌ಬಿಐ ಗೃಹ ಸಾಲದ ಮೇಲೆ ಶೇ. 0.17 ರಷ್ಟು ಪ್ರೊಸೆಸಿಂಗ್‌ ಫೀ (ಪ್ರಕ್ರಿಯೆ ಶುಲ್ಕ) ಅನ್ನು ವಿಧಿಸುತ್ತದೆ.

HDFC Bank Home Loan Interest Rate
Image Credit: Livemint

ಎಚ್‌ಡಿಎಫ್‌ಸಿ ಬ್ಯಾಂಕ್(HDFC BANK)

ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಎಚ್‌ಡಿಎಫ್‌ಸಿ ಪ್ರಸ್ತುತ ಗೃಹ ಸಾಲಗಳ ಮೇಲೆ ವಾರ್ಷಿಕ ಕನಿಷ್ಠ ಶೇ. 8.50ರಷ್ಟು ಬಡ್ಡಿ ವಿಧಿಸುತ್ತಿದೆ. ಈ ಬಡ್ಡಿ ದರವು ವೇತನ ಪಡೆಯುವ ಉದ್ಯೋಗಿಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಅನ್ವಯಿಸುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹೇಳಿದೆ.

ICICI Bank Home Loan Interest Rate
Image Credit: Thequint

ಐಸಿಐಸಿಐ ಬ್ಯಾಂಕ್(ICICI BANK )

ಖಾಸಗಿ ವಲಯದ ಮತ್ತೊಂದು ಪ್ರಮುಖ ಬ್ಯಾಂಕ್‌ ಐಸಿಐಸಿಐ ಪ್ರಸ್ತುತ ಗೃಹ ಸಾಲಗಳ ಮೇಲೆ ವಾರ್ಷಿಕ ಶೇ. 9.25 ರಿಂದ ಶೇ. 9.90 ವರೆಗೆ ಬಡ್ಡಿ ವಿಧಿಸುತ್ತಿದೆ. ಇಲ್ಲಿ ಕೂಡ ಬಡ್ಡಿದರಗಳು ಅರ್ಜಿದಾರರ ಸಿಬಿಲ್‌ ಸ್ಕೋರ್ ಮತ್ತು ಸಾಲದ ಅವಧಿಯನ್ನು ಆಧರಿಸಿದೆ. CBIL 750 ಕ್ಕಿಂತ ಹೆಚ್ಚು ಇರುವವರಿಗೆ ಬಡ್ಡಿದರವು ಶೇ. 9ಕ್ಕಿಂತ ಕಡಿಮೆ ಇರುತ್ತದೆ ಮತ್ತು ಸಿಬಿಲ್‌ ಸ್ಕೋರ್‌ 750ಕ್ಕಿಂತ ಕಡಿಮೆಯಿದ್ದರೆ ಬಡ್ಡಿ ದರವು ಶೇ. 9.25ರಿಂದ ಶೇ. 9.90 ರ ನಡುವೆ ಇರುತ್ತದೆ ಎಂದು ಬ್ಯಾಂಕ್ ತಿಳಿಸಿದೆ.

Kotak Mahindra Bank Home Loan Interest Rate
Image Credit: Hindustantimes

ಕೋಟಕ್ ಮಹೀಂದ್ರಾ ಬ್ಯಾಂಕ್(KOTAK MAHINDRA BANK )

ದೇಶದ ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಕೋಟಕ್ ಮಹೀಂದ್ರಾ ಬ್ಯಾಂಕ್ ಪ್ರಸ್ತುತ ಗೃಹ ಸಾಲಗಳ ಮೇಲೆ ವಾರ್ಷಿಕ ಶೇ. 8.75 ರಿಂದ ಶೇ. 9.35ರಷ್ಟು ಬಡ್ಡಿ ವಿಧಿಸುತ್ತಿದೆ. ಈ ಬಡ್ಡಿ ದರಗಳು ವೇತನ ಪಡೆಯುವ ಉದ್ಯೋಗಿಗಳಿಗೆ ಮತ್ತು ಸ್ವಯಂ ಉದ್ಯೋಗಿಗಳಿಗೆ ಅನ್ವಯಿಸುತ್ತವೆ ಎಂದು ಬ್ಯಾಂಕ್ ಹೇಳಿದೆ.

IDFC First Bank Home Loan Interest Rate
Image Credit: Bqprime

ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್ (IDFC FIRST BANK )

ಖಾಸಗಿ ವಲಯದ ಬ್ಯಾಂಕ್ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಪ್ರಸ್ತುತ ಗೃಹ ಸಾಲಗಳ ಮೇಲೆ ವಾರ್ಷಿಕ ಶೇ. 8.85 ರಿಂದ ಶೇ. 9.25 ರವರೆಗೆ ಬಡ್ಡಿ ವಿಧಿಸುತ್ತಿದೆ. ಈ ರೀತಿಯಾಗಿ ಹಲವು ಬ್ಯಾಂಕ್ ಗಳು ಅವುಗಳ ನಿಯಮಗಳಿಗೆ ಅನುಗುಣವಾಗಿ ಗ್ರಹ ಸಾಲವನ್ನು ನೀಡುತ್ತದೆ.

Leave A Reply

Your email address will not be published.