Chetan Ahimsa: ಭಾರತ ತಂಡದ ಸೋಲಿಗೆ ಮೀಸಲಾತಿ ಕಾರಣ, ವಿವಾದಕ್ಕೆ ಕಾರಣವಾಯಿತು ನಟ ಚೇತನ್ ಅಹಿಂಸಾ ಮಾತು.
ಭಾರತ ತಂಡದ ಸೋಲಿನ ಬಗ್ಗೆ ಟ್ವೀಟ್ ಮಾಡಿದ ಚೇತನ್ ಅಹಿಂಸಾ.
Chetan Ahimsa Tweet About Team India: ನವೆಂಬರ್ 19 ರಂದು ನಡೆದ ಭಾರತ ಹಾಗು ಆಸ್ಟೇಲಿಯಾ ನಡುವಿನ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಆಸ್ಟೇಲಿಯಾ ಗೆದ್ದು ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ಆದರೆ ಭಾರತೀಯ ತಂಡ ಹೀನಾಯವಾಗಿ ಸೋತಿದ್ದು, ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಬಹಳ ನಿರೀಕ್ಷೆ ಇದ್ದ ಈ ಪಂದ್ಯ ಒನ್ ಸೆಡ್ ಆಗಿ ಭಾರತ ಸೋತಿದ್ದು ಭಾರತೀಯರ ಇನ್ನಷ್ಟು ನೋವಿಗೆ ಕಾರಣವಾಗಿದೆ ಎನ್ನಬಹುದು. ಕೋಟಿ ಕೋಟಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಕನಸು ನುಚ್ಚುನೂರಾಗಿದೆ. ಈ ಸಲ ಖಂಡಿತ ವಿಶ್ವಕಪ್ ಭಾರತದ ಪಾಲಾಗತ್ತೆ ಎಂದು ಎಲ್ಲರೂ ನಂಬಿದ್ದರು, ತಾಯ್ನಾಡಲ್ಲಿ ಸೊತ್ತಿದ್ದು, ಇನ್ನಷ್ಟು ಬೇಸರಕ್ಕೆ ಕಾರಣವಾಗಿದೆ. ಈ ಸೋಲಿನ ನಂತರ ನಟ ಚೇತನ್ ನೀಡದ ಹೇಳಿಕೆ ಕ್ರಿಕೆಟ್ ಪ್ರೇಮಿಗಳ ಕೋಪಕ್ಕೆ ಕಾರಣವಾಗಿದೆ.
ನಟ ಚೇತನ್ ನೀಡಿದ ಅಹಿಂಸಾ ಹೇಳಿಕೆ
ವಿಶ್ವಕಪ್ ಸೋತ ನೋವಿನಲ್ಲಿದ ಅಭಿಮಾನಿಗಳಿಗೆ ನಟ ಚೇತನ್ (Chetan Ahimsa) ಮಾತು ಅಚ್ಚರಿಗೆ ಕಾರಣವಾಗಿದೆ. ಚಂದನವನದ ನಟ ಮತ್ತು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ನಟ ಚೇತನ್ ಅಹಿಂಸಾ ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ ಘಟಿಸುವ ಬೆಳವಣಿಗೆಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರಹದ ರೂಪದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ಭಾರತ ವಿಶ್ವಕಪ್‌ನಲ್ಲಿ ಸೋತ ಬಳಿಕವೂ ತಮ್ಮ ಕಾಮೆಂಟ್ ದಾಟಿಸಿದ್ದಾರೆ.
ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಖಂಡಿತಾ ವಿಶ್ವಕಪ್ ಗೆಲ್ಲುತ್ತಿತ್ತು
ನಟ ಚೇತನ್ ಆಗಾಗ ಒಂದಲ್ಲ ಒಂದು ವಿಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರ ಹೇಳಿಕೆ ಏನೆಂದರೆ ‘ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು..’ ಎಂದು ಚೇತನ್ ಟ್ವೀಟ್ ಮಾಡಿದ್ದಾರೆ.
ಮೀಸಲಾತಿ ಟ್ವಿಟ್‌ಗೂ ಮುನ್ನ ಇನ್ನೊಂದು ಟ್ವೀಟ್ ಮಾಡಿದ್ದ ಚೇತನ್ ಅಹಿಂಸಾ, ‘ಭಾರತೀಯ ಕ್ರಿಕೆಟಿಗರು ಇಂದು ಚೆಂಡನ್ನು ಎಸೆಯಬಹುದು/ ಹಿಡಿಯಬಹುದು/ ಹೊಡೆಯಬಹುದು ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. 100+ ವರ್ಷಗಳ ಹಿಂದೆ, ಪಲ್ವಾಂಕರ್ ಬಾಲೂ- ಧಾರವಾಡ ಮೂಲದ ಬೌಲರ್ ಮತ್ತು ಭಾರತದ 1ನೇ ದಲಿತ ಕ್ರಿಕೆಟಿಗ- ಬಾಬಾಸಾಹೇಬ್ ಅವರ ಕಾರ್ಯಕರ್ತ ಮತ್ತು ಪರಿಚಯಸ್ಥರಾಗಿದ್ದರು.. ಭಾರತಕ್ಕೆ ಸಮಾಜವನ್ನು ಕಾಳಜಿ ವಹಿಸುವ ಕ್ರಿಕೆಟಿಗರು ಅಗತ್ಯವಿದೆ- ಹಣ ಮತ್ತು ವೈಭವವಲ್ಲ’ ಎಂದು ಅವರು ಬರೆದಿದ್ದರು.
In wake of India’s loss in the World Cup final, Chetan Ahimsa says ‘Indian cricket team needs reservations’
‘If Indian cricket team had reservations, India would have easily won the World Cup’, he tweets#WorldCup https://t.co/w5jrwmFqdh pic.twitter.com/cJSvGC2mKi
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) November 19, 2023
ನಟ ಚೇತನ್ ಟ್ವೀಟ್ ಗಳಿಗೆ ಪ್ರತಿಕ್ರಿಯೆ
ನಟ ಚೇತನ್ ಹೀಗೆಲ್ಲಾ ಟ್ವಿಟ್ ಮಾಡುತ್ತಿದ್ದಂತೆ, ಸಾಕಷ್ಟು ಮಂದಿ ಅವರ ವಿರುದ್ಧ ಕಾಮೆಂಟ್ ಪಾಸ್ ಮಾಡಿದ್ದಾರೆ. Chetan Ahimsa ಅವರನ್ನು ಮನೋರೋಗಿಗೆ ಹೋಲಿಕೆ ಮಾಡಿದ್ದಾರೆ. ಸುಮ್ನೆ ಅಮೆರಿಕಕ್ಕೆ ಹೋಗಿಬಿಡು ಗುರು ಇರಬೇಡ ಇಲ್ಲಿ ಎಂದೂ ಕಮೆಂಟ್ ಮಾಡಿದ್ದಾರೆ.
ಚೇತನ್ ಸರ್ ಯಾಕೆ ಇಂಥ ಅಭಿಪ್ರಾಯ ಬಂತು..ಇಲ್ಲಿ ಆ ವಿಚಾರ ಯಾಕೆ. ಸುಮ್ಮನೆ ಅಸಂಬದ್ಧ ವಿಚಾರವನ್ನ ಹೇಳಿ ಯಾಕೆ ಬೇರೆಯವರ ನಾಲಗೆಗೆ ಆಹಾರ ಆಗ್ತಾ ಇದ್ದೀರಿ.ಯಾವುದೇ ಕ್ರೀಡೆಯಲ್ಲಾಗಲಿ ಆಯ್ಕೆಯ ವಿಷಯದಲ್ಲಿ ಪ್ರಭಾವ ಬೀರುವ ಕಾಣದ ಕೈಗಳಿರುವುದು ಹೊಸತೇನಲ್ಲ ಅಥವಾ ಅದೇನು ಆಶ್ಚರ್ಯಪಡುವ ವಿಷಯವೇನೂ ಅಲ್ಲ, ಆದರೆ ಕ್ರೀಡೆಯಲ್ಲೂ ಮೀಸಲಾತಿ ಬಯಸುವ ಮನಸ್ಥಿತಿಯುಳ್ಳವರು ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯವನ್ನು ಅವಮಾನಿಸುವ ಮನಸ್ಸುಳ್ಳವರು ಎಂದಿದ್ದಾರೆ .