Poultry Farming: ಕೋಳಿ ಫಾರಂ ಬಿಸಿನೆಸ್ ಮಾಡಿದರೆ ಪ್ರತಿ ತಿಂಗಳು ಎಷ್ಟು ಲಾಭ ಗಳಿಸಬಹುದು, ಇಲ್ಲಿದೆ ಸಂಪೂರ್ಣ ಮಾಹಿತಿ.

ನೀವು ಸ್ವಂತ ವ್ಯವಹಾರದ ಬಗ್ಗೆ ಯೋಚಿಸುತ್ತಿದ್ದರೆ ಈ ಉದ್ಯೋಗದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Poultry Farming Business Profit: ದೇಶದಲ್ಲಿ ಹೆಚ್ಚಿನ ಜನ ಸ್ವಂತ ಉದ್ಯಮವನ್ನು ನೆಡೆಸಿ ಜೀವನವನ್ನು ಸಾಗಿಸುತ್ತಾರೆ. ಸ್ವಂತ ಉದ್ಯಮವನ್ನು ನೆಡೆಸಲು ಸರ್ಕಾರ ಸಹಾಯಧನವನ್ನು ನೀಡುತ್ತದೆ. ಸ್ವಂತ ಉದ್ಯೋಗಗಳಲ್ಲಿ ಕೋಳಿ ಸಾಕಾಣಿಕೆ ಕೂಡ ಒಂದಾಗಿದೆ. ಇದೀಗ ನೀವು ಕೋಳಿ ಫಾರ್ಮ್ (Poultry Farm)ನಿಂದ ನೀವು ದೊಡ್ಡ ಮಟ್ಟದ ಹಣವನ್ನು ಗಳಿಸಬಹುದಾಗಿದೆ.

Chicken Farm Business Profit
Image Credit: Poultryworld

ಸ್ವಂತ ಉದ್ಯಮ ಮಾಡುವವರಿಗೆ ಅಗತ್ಯ ಮಾಹಿತಿ
ಎಲ್ಲರಿಗೂ ತಿಳಿದಿರುವಂತೆ ಮೊಟ್ಟೆಯನ್ನು ಹೆಚ್ಚಿನ ಪ್ರೊಟೀನ್ ಮೂಲ ಎಂದು ಪರಿಗಣಿಸಲಾಗಿತ್ತದೆ ಹಾಗೇ ಇದನ್ನು ಹೆಚ್ಚಿನ ಜನರು ಸೇವಿಸುತ್ತಾರೆ. ಭಾರತದಲ್ಲಿ ಇದಕ್ಕೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸ್ವಂತ ವ್ಯವಹಾರದ ಬಗ್ಗೆ ಯೋಚಿಸುತ್ತಿದ್ದರೆ ಮೊಟ್ಟೆ ಕೃಷಿ ಉತ್ತಮವಾಗಿದೆ. ಇದು ರೈತರಿಗೆ ಹಾಗೂ ಯುವಕರಿಗೆ ಉತ್ತಮವಾದ ವ್ಯಾಪಾರವಾಗಿದೆ.

ಕೋಳಿ ಸಾಕಾಣೆಯ ಸರಿಯಾದ ಮಾರ್ಗ ಫಾರ್ಮ್
ಕೋಳಿ ಫಾರ್ಮ್ ಆರಂಭಿಸಲು ಸರ್ಕಾರ ನಿಮಗೆ ಸಹಾಯಧನವನ್ನು ನೀಡುತ್ತದೆ. ಈ ಉದ್ಯೋಗ ಆರಂಭಿಸುವ ಮೊದಲು ವೆಚ್ಚಗಳ ಲೆಕ್ಕಪತ್ರವನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ. ಕೋಳಿ ಫಾರ್ಮ್ ಗಳನ್ನು ತೆರೆಯಲು ಸರ್ಕಾರದ ಹಲವು ಯೋಜನೆಗಳಿವೆ. ನೀವು ಬ್ಯಾಂಕ್ ನಿಂದ ಬೇಕಾದರೂ ಸಾಲವನ್ನ ಪಡೆಯಬಹುದು. ಇದರಿಂದ ಕೋಳಿ ಫಾರ್ಮ್ ಆರಂಭಿಸುವ ವೆಚ್ಚ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಗೇ ಸರ್ಕಾರ ನಿಮಗೆ 35 ಪ್ರತೀಶತದಷ್ಟು ಸಬ್ಸಿಡಿಯನ್ನು ನೀಡುತ್ತದೆ.

Chicken Farm Business latest update
Image Credit: E-Krishiuasb

ಕೋಳಿ ಸಾಕಾಣಿಕೆಯನ್ನು ಕೋಳಿಗಳೊಂದಿಗೆ ಪ್ರಾರಂಭಿಸಬೇಕು. 35 ಗ್ರಾಂ ತೂಕದ ಒಂದು ಮರಿ ಗೆ ಸುಮಾರು 5-6 ರೂಪಾಯಿ ಇರುತ್ತದೆ. ನಾಲ್ಕು ತಿಂಗಳು ಮರಿಗಳನ್ನು ಆರೈಕೆ ಮಾಡಬೇಕು. ಇದಾದ ನಂತರ ಮರಿಗಳು 16 ವಾರಗಳಲ್ಲಿ ವಯಸ್ಕ ಆಗುತ್ತದೆ ಹಾಗೇ ಮೊಟ್ಟೆ ಇಡಲು ಪ್ರಾರಂಭೀಸುತ್ತದೆ. ಒಂದು ಕೋಳಿ ತನ್ನ 72 ವಾರಗಳ ಜೀವಿತವಧಿಯಲ್ಲಿ 360 ಮೊಟ್ಟೆಗಳನ್ನು ಇಡುತ್ತದೆ.

ಈ ಕೋಳಿಗಳು 2-3 ವರ್ಷಗಳ ವರೆಗೆ ಬದುಕುತ್ತದೆ. ಹಾಗೇ ಇದರ ಆರೈಕೆಗಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇದರಲ್ಲಿ ಸ್ವಚ್ಛತೆ, ಚುಚ್ಚುಮದ್ದು, ಆಹಾರ ಎಲ್ಲವೂ ಸೇರುತ್ತದೆ. ಒಂದು ಕೋಳಿ ಮೊಟ್ಟೆ ಇಡಲು 110 ಗ್ರಾಂ ಆಹಾರವನ್ನು ತಿನ್ನುತ್ತದೆ. ಒಂದು ಕೋಳಿಗೆ ಸುಮಾರು 0.8 ಚದರ ಅಡಿ ಜಾಗ ಬೇಕಾಗುತ್ತದೆ. ಇದರಿಂದ ನಿಮಗೆ ಸ್ತಳಾವಕಾಶದ ಕಲ್ಪನೆ ಸಿಗುತ್ತದೆ.

Chicken Farm Business Profit
Image Credit: Quora

ಕೋಳಿ ಸಾಕಾಣಿಕೆಯಿಂದ ಬರುವ ಆದಾಯ
ಕೋಳಿ ಮೊಟ್ಟೆಯನ್ನು ತಯಾರಿಸಲು 3.50 ರಿಂದ 4 ರೂಪಾಯಿ ವರೆಗೆ ಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ 5 ರಿಂದ 10 ರೂಪಾಯಿ ವರೆಗೆ ಇರುತ್ತದೆ. ಮೊಟ್ಟೆಗಳ ಬೆಲೆ ಕೋಳಿ ಜಾತಿಯ ಮೇಲೆ ಅವಲಂಭಿತವಾಗಿರುತ್ತದೆ. ಮಾಮೂಲಿ ಕೋಳಿ ಹೊರತು ಪಡಿಸಿ ಖಡಕ್ ನಾಥ್ ಕೋಳಿ ಮೊಟ್ಟೆಗೆ 30 ರೂಪಾಯಿ ಇದೆ.

ಒಂದು ಅಂದಾಜಿನ ಪ್ರಕಾರ 50,000 ಹೂಡಿಕೆಯಲ್ಲಿ ಕೋಳಿ ಪಾರಂ ಪ್ರಾರಂಭಿಸಿದರೆ ನೀವು ಪ್ರತಿ ತಿಂಗಳು 3 ಲಕ್ಷದ ವರೆಗೆ ಆದಾಯವನ್ನು ಗಳಿಸಬಹುದಾಗಿದೆ. ಕೋಳಿ ಫಾರ್ಮ್ ಸ್ಟಾರ್ಟ್ ಮಾಡಿದ ಕೂಡಲೇ ಹಣ ಸಿಗುವುದಿಲ್ಲ ಆದರೆ ಕೋಳಿ ಮೊಟ್ಟೆ ಇಡಲು ಪ್ರಾರಂಭಿಸಿದಾಗ ನೀವು ದಿನಕ್ಕೆ 6,000 ದಿಂದ 10,000 ವರೆಗೆ ಗಳಿಸಬಹುದು. ಮೊಟ್ಟೆ ಸಿಗದಿದ್ದರೂ ಕೋಳಿಗಳಿಗೆ ಉತ್ತಮ ಬೆಲೆ ಸಿಗುತ್ತದೆ.

Leave A Reply

Your email address will not be published.