CM Siddaramaiah: ಗ್ರಾಮೀಣ ಭಾಗದ ಜನರಿಗೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ, ಹೊಸ ಯೋಜನೆ ಆರಂಭ.

ಸಿದ್ದರಾಮಯ್ಯ ಸರ್ಕಾರದಿಂದ ಗ್ರಾಮೀಣ ಜನರ ಅನುಕೂಲಕ್ಕಾಗಿ ಇನ್ನೊಂದು ಹೊಸ ಯೋಜನೆ.

CM Siddaramaiah Koosina Mane Yojana: ಈ ವರ್ಷದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಲವು ಯೋಜನೆಗಳನ್ನು ಈಗಾಗಲೇ ಜಾರಿಗೆ ತರುತ್ತಿದ್ದಾರೆ. ಅದರಲ್ಲೂ ಯಾವುದೇ ಯೋಜನೆಗಳನ್ನು ಜಾರಿಗೆ ತಂದರೂ ಸಹ ಅದರಲ್ಲಿ ಬಡವರ ಪರವಾಗಿಯೇ ಇರಲಿದೆ.

ಐದು ಗ್ಯಾರಂಟಿಗಳು ಕೂಡ ಅದೇ ದಿಕ್ಕಿನಲ್ಲಿ ಸಾಗುತ್ತಿವೆ. ಇದೀಗ ಮತ್ತೊಂದು ಯೋಜನೆಯನ್ನು ಜಾರಿಗೆ ತರಲು ಹೊರಟಿದ್ದಾರೆ. ಈ ಯೋಜನೆಯು ಗ್ರಾಮೀಣ ಜನರ ಒಳಿತಿಗಾಗಿ ಜಾರಿತರುವ ಯೋಜನೆಯಾಗಿದೆ. ಸದ್ಯ ಗ್ರಾಮೀಣ ಭಾಗದ ಜನರಿಗಾಗಿ ಸಿದ್ದರಾಮಯ್ಯ ಅವರು ಇನ್ನೊಂದು ಹೊಸ ಯೋಜನೆಯನ್ನ ಜಾರಿಗೆ ತಂದಿದ್ದಾರೆ ಎಂದು ಹೇಳಬಹುದು. 

CM Siddaramaiah Koosina Mane Yojana
Image Credit: Oneindia

ಗ್ರಾಮೀಣ ಜನರ ಬದುಕನ್ನು ಬೆಳಗುವ ಉದ್ದೇಶ

ಗ್ರಾಮೀಣ ಭಾಗದ ಜನರಿಗಾಗಿ ಕೂಸಿನ ಮನೆಯನ್ನು ಲೋಕಾರ್ಪಣೆ ಮಾಡಲು ಹೊರಟಿರುವ ಬಗ್ಗೆ ಕಾಂಗ್ರೆಸ್ ತನ್ನ ಅಕೌಂಟ್ ನಲ್ಲಿ ತಿಳಿಸಿದೆ. ಇದು ಶಿಶುಪಾಲನ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಾಗಿದೆ. ಗ್ರಾಮೀಣ ಜನರ ಬದುಕನ್ನು ಹಸನಾಗಿಸುವ ಗುರಿಯನ್ನು ನಮ್ಮ ಸರ್ಕಾರ ತಲುಪುವುದು ನಿಶ್ಚಿತ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ಅದೆಷ್ಟೋ ಕೂಲಿ ಕಾರ್ಮಿಕರ ಮಕ್ಕಳಿಗೆ ಈ ಶಿಶುಪಾಲನ ಕೇಂದ್ರದಿಂದ ಸಹಾಯವಾಗಲಿದೆ.

ಕೂಸಿನ ಮನೆ ಲೋಕಾರ್ಪಣೆ

ಗ್ರಾಮೀಣ ಭಾಗದ ಜನತೆಗೆ ಮತ್ತೊಂದು ವಿಶಿಷ್ಠ ಯೋಜನೆ ರೂಪಿಸಿದೆ ನಮ್ಮ ಸರ್ಕಾರ. ನರೇಗಾ ಕೂಲಿ ಕಾರ್ಮಿಕರು, ಗ್ರಾಮೀಣ ಮಹಿಳೆಯರಿಗೆ ಸ್ವಾವಲಂಭಿ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನೆರವಾಗಲು ಸಚಿವ @PriyankKharge ಅವರ ನೇತೃತ್ವದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ವತಿಯಿಂದ 4000 ಗ್ರಾಮ ಪಂಚಾಯತಿಗಳಲ್ಲಿ “ಕೂಸಿನ ಮನೆ” ಶಿಶುಪಾಲನಾ ಕೇಂದ್ರಗಳನ್ನು ಲೋಕಾರ್ಪಣೆಗೊಳಿಸಲಾಗುತ್ತಿದೆ.

Leave A Reply

Your email address will not be published.