CM Siddaramaiah: ಮಹಿಳೆಯರಿಗಾಗಿ ಇನ್ನೊಂದು ಹೊಸ ಯೋಜನೆಗೆ ಜಾರಿಗೆ ತಂದ ಸಿದ್ದರಾಮಯ್ಯ, ನವರಾತ್ರಿ ಉಡುಗೊರೆ.
ರಾಜ್ಯದಲ್ಲಿ ಮಹಿಳೆಯರ ಪ್ರಗತಿ ಕುರಿತು ಸರಕಾರದ ಚಿಂತನೆ, ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿ.
CM Siddaramaiah Latest Scheme For Ladies: ಕರ್ನಾಟಕದಲ್ಲಿ CM ಸಿದ್ದರಾಮಯ್ಯ (Siddaramaiah) ಅವರ ಆಡಳಿತ ಪ್ರಾರಂಭ ಆದಾಗಿನಿಂದ ಯೋಜನೆಗಳ ಮೇಲೆ ಯೋಜನೆಗಳು ಜಾರಿಗೆ ಬರುತ್ತಲೇ ಇದೆ. ಚುನಾವಣೆಯ ಸಂದರ್ಭದಲ್ಲಿ 05 ಗ್ಯಾರೆಂಟಿ ಯೋಜನೆಯ ಭರವಸೆ ನೀಡಿದ ಕಾಂಗ್ರೆಸ್ ಪಕ್ಷ ಅದರಲ್ಲಿ 04 ಯೋಜನೆಗಳನ್ನು ಜಾರಿಗೆ ತಂದಿದೆ.
04 ಯೋಜನೆಯಲ್ಲಿ ಎರಡು ಯೋಜನೆ ಮಹಿಳೆಯರಿಗಾಗಿಯೇ ಮೀಸಲಿದೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸರ್ಕಾರೀ ಬಸ್ಸುಗಳಲ್ಲಿ ಪ್ರಯಾಣ ಮಾಡಬಹುದಾಗಿದೆ. ಗ್ರಹಾಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯ ಖಾತೆಗೆ 2,000 ರೂಪಾಯಿ ಜಮೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯರ ಪ್ರಗತಿಗಾಗಿ ಇನ್ನು ಹೊಸ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಹೊರ ಬೀಳುತ್ತಿದೆ.

ಮಹಿಳೆಯರ ಏಳಿಗೆಯ ಕಡೆ ಸರಕಾರದ ನಿಲುವು
ನವರಾತ್ರಿ ಹಬ್ಬದ ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರು ನಾರಿಶಕ್ತಿಯ ಪ್ರತೀಕ ಹಾಗು ಹಬ್ಬದ ವಿಶೇಷತೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ , ಮಹಿಳೆಯರ ಆರ್ಥಿಕ ಶಕ್ತಿಗಾಗಿ ಸರ್ಕಾರ ಜಾರಿಗೆ ತಂದಿರುವ ಮತ್ತೊಂದು ಯೋಜನೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಸ್ತ್ರೀಯರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವಲಯದಲ್ಲಿ ಪರಿಪೂರ್ಣವಾಗಿ ತೊಡಗಿಸಿಕೊಂಡಾಗ ಮಾತ್ರ ದೇಶದ ಆರ್ಥಿಕ ಅಭಿವೃದ್ಧಿಯ ವೇಗ ಹೆಚ್ಚಿರುತ್ತದೆ. ಇದಕ್ಕಾಗಿ ಸ್ತ್ರೀಯರು ಉದ್ಯಮ, ಕೈಗಾರಿಕೆ, ಸೇವಾ ವಲಯದಲ್ಲಿ ಭಾಗವಹಿಸುವುದು ಅತಿ ಮುಖ್ಯ ಎಂದಿದ್ದಾರೆ.

ಸ್ತ್ರೀ ಸ್ವಾವಲಂಬನೆಗೆ ಹೆಚ್ಚಿನ ಪ್ರಾಮುಖ್ಯತೆ
ಅಷ್ಟೇ ಅಲ್ಲದೆ CM ಸಿದ್ದರಾಮಯ್ಯ ಅವರು ತನ್ನ ಟ್ವೀಟ್ ನಲ್ಲಿ ಸ್ತ್ರೀ ಸ್ವಾವಲಂಬನೆಗಾಗಿ 100 ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸಿ, ಅವುಗಳನ್ನು ಮಹಿಳಾ ಸಹಕಾರಿ ಸ್ವಸಹಾಯ ಸಂಘಗಳ ಮೂಲಕ ನಿರ್ವಹಣೆಗೆ ವಹಿಸಲು ಕ್ರಮ ಹಾಗೂ ಪೆಟ್ರೋಲ್ ಬಂಕ್‌ಗಳ ಸ್ಥಾಪನೆಗೆ ಭೂಮಿ, ತರಬೇತಿ, ಪರವಾನಗಿ ಸೇರಿದಂತೆ ಅಗತ್ಯ ಬೆಂಬಲ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದೇವೆ.’ ಎಂದು ತಿಳಿಸಿದ್ದಾರೆ.
, ‘ಸ್ತ್ರೀಶಕ್ತಿ ಆರಾಧನೆಯ ಈ ನವರಾತ್ರಿ ಹಬ್ಬದ ಸಂದರ್ಭದಲ್ಲಿ ನಮ್ಮ ಸರ್ಕಾರವು ಸ್ತ್ರೀಸಬಲೀಕರಣಕ್ಕೆ ಬದ್ಧವಾಗಿ ಶ್ರಮಿಸುತ್ತಿದೆ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ.’ ಎಂದಿದ್ದಾರೆ. ಹೀಗೆ ಟ್ವೀಟ್ ಮೂಲಕ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ತಿಳಿಸಿದ್ದಾರೆ.