Comb Business: ಮನೆಯಲ್ಲೇ ಆರಂಭಿಸಿ ಬಾಚಣಿಕೆ ಬಿಸಿನೆಸ್, ಹೂಡಿಕೆ ಕಡಿಮೆ ಮತ್ತು ಕೈತುಂಬಾ ಲಾಭ.

ಮನೆಯಲ್ಲಿ ಕುಳಿತು ಸುಲಭವಾಗಿ ಆರಂಭಿಸಿ ಬಾಚಣಿಕೆ ವ್ಯವಹಾರ.

Comb Business Tip: ಹೆಚ್ಚಿನ ಜನರು ಸ್ವಂತ ಉದ್ಯೋಗ ಮಾಡಲು ಬಯಸುತ್ತಾರೆ. ಸ್ವಂತ ವ್ಯವಹಾರವನ್ನು ಮಾಡಲು ಬಂಡವಾಳ ಮತ್ತು ಲಾಭದ ಬಗ್ಗೆ ಮಾಹಿತಿ ತಿಳಿದಿರಬೇಕು. ಯಾವುದೇ ವ್ಯವಹಾರವನ್ನು ಪ್ರಾರಂಭಿಸುವ ಮುನ್ನ ಲಾಭ ನಷ್ಟದ ಬಗ್ಗೆ ಲೆಕ್ಕಾಚಾರ ಹಾಕಬೇಕಾಗುತ್ತದೆ.

ಎಲ್ಲರು ಕೂಡ ಸ್ವಂತ ವ್ಯವಹಾರವನ್ನು ಮಾಡುವಾಗ ಯಾವ ಉದ್ಯೋಗವನ್ನು ಮಾಡುವುದು ಎನ್ನುದರ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ನೀಡುವ ವ್ಯವಹಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.

Start a combing business at home
Image Credit: Wikihow

ಪ್ರತಿನಿತ್ಯ ಬಳಸುವ ಈ ವಸ್ತುವಿಗೆ ಮಾರುಕಟ್ಟೆಯಲ್ಲಿದೆ ಬಾರಿ ಬೇಡಿಕೆ
ಸಾಮಾನ್ಯವಾಗಿ ಪ್ರತಿನಿತ್ಯ ಬಳಸುವ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆಯಿರುತ್ತದೆ. ನಿತ್ಯ ಬಳಕೆಯ ವಸ್ತುಗಳನ್ನು ಮಾರಾಟ ಮಾಡಿ ಅಥವಾ ನಿತ್ಯ ಬಳಕೆಯ ವಸ್ತುಗಳನ್ನು ತಯಾರಿಸುವ ವ್ಯವಹಾರವನ್ನು ಮಾಡಿದರೆ ಹೆಚ್ಚಿನ ಲಾಭವನ್ನು ಗಳಿಸಬಹುದು. ನಿತ್ಯ ಬಳಕೆಯ ವಸ್ತುವೆಂದರೆ ಬಾಚಣಿಗೆ. ಈ ಬಾಚಣಿಕೆಯನ್ನು ಎಲ್ಲರು ಕೊಡ ಬಳಸುತ್ತಾರೆ.

ತಮ್ಮ ಕೂದಲನ್ನು ಅಲಂಕರಿಸಲು ಬಾಚಣಿಕೆಯನ್ನು ಬಳಸುತ್ತಾರೆ. ಪುರುಷರು, ಮಕ್ಕಳು, ಮಹಿಳೆಯರು ಎಲ್ಲರು ಕೂಡ ಬಾಚಣಿಕೆಯ ಲಾಭ ಪಡೆಯುತ್ತಾರೆ. ಈ ಬಾಚಣಿಕೆಯ ಬಿಸಿನೆಸ್ ನಿಂದ ಕೂಡ ಉತ್ತಮ ಆದಾಯವನ್ನು ಗಳಿಸಬಹುದು. ಬಾಚಿಣಿಕೆಗಳು ಕೂಡ ವಿವಿಧ ರೀತಿಯಲ್ಲಿ ಇರುತ್ತದೆ. ಬಾಚಣಿಕೆ ಮಾಡಲು ಹೆಚ್ಚಿನ ಬಂಡವಾಳದ ಅಗತ್ಯ ಇರುವುದಿಲ್ಲ. ಕಡಿಮೆ ಹೂಡಿಕೆಯಲ್ಲಿಯೇ ಈ ವ್ಯವಹಾರವನ್ನು ಮಾಡಬಹುದು.

Comb Business Tips
Image Credit: Ebay

ಮನೆಯಲ್ಲೇ ಆರಂಭಿಸಿ ಬಾಚಣಿಕೆ ಬಿಸಿನೆಸ್
ಮನೆಯಲ್ಲಿ ಕೂಡ ಬಾಚಣಿಕೆ ವ್ಯವಹಾರವನ್ನು ಆರಂಭಿಸಬಹುದು. ಪ್ಲಾಸ್ಟಿಕ್ ಕಣಗಳಾದ ಪಾಲಿಪ್ರೊಪಿಲೀನ್ ಅನ್ನು ಖರೀದಿ ಮಾಡಬೇಕಾಗುತ್ತದೆ. ಇಂಡಿಯಾಮಾರ್ಟ್, ಪ್ಲಾಸ್ಟ್ ಮಾರ್ಟ್ ಅಥವಾ ಅಲಿಬಾಬಾದಂತಹ ವೆಬ್‌ಸೈಟ್‌ನಲ್ಲಿ ಇದು ಸಿಗುತ್ತೆ. ಕೆಜಿಗೆ 50 ರಿಂದ 100 ರೂಪಾಯಿಗೆ ಸಿಗುತ್ತೆ. ಅರೆ ಸ್ವಯಂಚಾಲಿತ ಅಥವಾ ಸ್ವಯಂಚಾಲಿತ ಹೈಡ್ರಾಲಿಕ್ ಇಂಜೆಕ್ಷನ್ ಮೋಲ್ಡಿಂಗ್ ಯಂತ್ರದ ಅವಶ್ಯಕತೆ ಇರುತ್ತದೆ. ಈ ಯಂತ್ರದ ಬೆಲೆ 2 ರಿಂದ 10 ಲಕ್ಷ ರೂಪಾಯಿ ಆಗಿದೆ.

ಬಾಚಣಿಕೆ ವ್ಯವಹಾರವನ್ನು ಮಾಡಲು ಎಷ್ಟು ಬಂಡವಾಳದ ಅಗತ್ಯವಿದೆ
ಸ್ಕ್ರ್ಯಾಪ್ ಗ್ರೈಂಡರ್ ಯಂತ್ರ ಅಗತ್ಯವಿದೆ. ಈ ಮಷಿನ್‌ 50,000 ರಿಂದ 2 ಲಕ್ಷ ರೂಪಾಯಿಯಲ್ಲಿ ಲಭ್ಯವಾಗುತ್ತದೆ. ಬಫಿಂಗ್, ಪಾಲಿಶಿಂಗ್, ಹಾಟ್ ಸ್ಟಾಂಪಿಂಗ್ ಮೆಷಿನ್ ಅಗತ್ಯವಿದೆ. ಇವುಗಳ ಬೆಲೆ 1 ಲಕ್ಷ ರೂ. ಆಗಿದೆ. ಕನಿಷ್ಠ 2000 ಚದರ ಅಡಿ ಜಾಗದಲ್ಲಿ ಈ ಬಿಸಿನೆಸ್ ಅನ್ನು ಆರಂಭಿಸಬಹುದು. ಆರಂಭದಲ್ಲಿ ಬಾಚಣಿಕೆ ವ್ಯವಹಾರವನ್ನು ಆರಂಭಿಸಲು ಸುಮಾರು 10 ಲಕ್ಷದ ಅವಶ್ಯಕತೆ ಇರುತ್ತದೆ. ನಂತರ ಈ ವ್ಯವಹಾರದಿಂದ ಲಕ್ಷ ಲಕ್ಷ ಹಣವನ್ನು ಗಳಿಸಬಹುದು.

Leave A Reply

Your email address will not be published.