Compensation Amount: ಮನೆಯಲ್ಲಿ ಹಸು ಮತ್ತು ಮೇಕೆ ಸಾಕುವವರಿಗೆ ಹೊಸ ನಿಯಮ, ಗುಡ್ ನ್ಯೂಸ್ ನೀಡಿದ ಕಾಂಗ್ರೆಸ್ ಸರ್ಕಾರ.
ಮನೆಯಲ್ಲಿ ಹಸ , ಮೇಕೆ/ಕುರಿಗಳನ್ನು ಸಾಕುವವರಿಗೆ ಸರ್ಕಾರದಿಂದ ಪರಿಹಾರಧನ ಘೋಷಣೆ.
Compensation Amount For Accidental Death Of Domestic Animals: ಮನೆಯಲ್ಲಿ ಹಸು ಹಾಗು ಕುರಿ/ಮೇಕೆ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಒಂದು ಮಹತ್ವದ ಯೋಜನೆ ಜಾರಿಗೆ ಬಂದಿದೆ. ಹಲವಾರು ಜನರು ಹಸು, ಮೇಕೆ /ಕುರಿಗಳನ್ನು ಸಾಕುತ್ತಾರೆ. ಇವುಗಳನ್ನು ಖರೀದಿಸುವಾಗ ಸಂಘ ಸಂಸ್ಥೆ, ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುತ್ತಾರೆ.
ಹಸು, ಮೇಕೆ /ಕುರಿ ಗಳು ಅನಾರೋಗ್ಯ ಅಥವಾ ಇತರ ಕಾರಣಗಳಿಂದ ಮರಣ ಹೊಂದುತ್ತದೆ. ಇದರಿಂದಾಗಿ ಸಾಕಾಣಿಕೆ ಮಾಡುವವರಿಗೆ ಬಹಳ ನಷ್ಟವಾಗುತ್ತದೆ. ಅದ್ದುದರಿಂದ ಸರ್ಕಾರ ಒಂದು ಉತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯನ್ನು ಸಾಕಾಣಿಕೆ ಮಾಡುವವರು ಸದುಪಯೋಗ ಪಡಿಸಿಕೊಳ್ಳಬೇಕು.

ಸರ್ಕಾರದ ಅನುಗ್ರಹ ಯೋಜನೆ ಜಾರಿಯಾಗಿದೆ
ಹಸು,ಕುರಿ/ಮೇಕೆ ಸಾಕಾಣಿಕೆ ಮಾಡುವವರಿಗೆ 2023-24ನೇ ಸಾಲಿನಲ್ಲಿ ಅನುಗ್ರಹ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಆಕಸ್ಮಿಕ ಮರಣ ಹೊಂದಿದ ಆಡು ಮತ್ತು ಕುರಿಗಳಿಗೆ ಪ್ರತಿಯೊಂದಕ್ಕೆ ಗರಿಷ್ಟ ರೂ.5,000/-ದಂತೆ ಹಾಗೂ ದನ ಮತ್ತು ಎಮ್ಮೆಗಳಿಗೆ ಗರಿಷ್ಟ ರೂ.10,000/-ದಂತೆ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದೆ .ಮೃತಪಟ್ಟ ಜಾನುವಾರುವಿನ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳೀಯ ಪಶುವೈದ್ಯರಿಂದ ದೃಢೀಕರಿಸಿದ ನಂತರವೇ ಯೋಜನೆಯ ಸೌಲಭ್ಯವನ್ನು ಪಡೆಯಬಹುದೆಂದು ಈ ಮೂಲಕ ತಿಳಿಸಿದೆ.
ಮರಣ ಹೊಂದಿದ ಹಸು, ಕುರಿ/ಮೇಕೆಗಳ ಮರಣೋತ್ತರ ಪರೀಕ್ಷೆ ಕಡ್ಡಾಯ
ಮೊದಲನೇದಾಗಿ ಮರಣ ಹೊಂದಿದ ಹಸು, ಕುರಿ/ಮೇಕೆಗಳ ಶವ ಪರೀಕ್ಷೆ ಮಾಡಿಸಬೇಕು ಮತ್ತು ಶವಪರೀಕ್ಷೆ ನಂತರದ ಭಾವಚಿತ್ರಗಳಲ್ಲಿ ಫಲಾನುಭವಿ ಮತ್ತು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಇರುವ ಜಿ.ಪಿ.ಆರ್.ಎಸ್ ಭಾವಚಿತ್ರಗಳನ್ನು ತೆಗೆದು ಶವ ಪರೀಕ್ಷೆ ನಡೆಸಿದ ಪಶುವೈದ್ಯರು ಧೃಢೀಕರಿಸುವುದು.
ಮರಣೋತ್ತರ ವರದಿಯಲ್ಲಿ ಫಲಾನುಭವಿಯ ಪೂರ್ಣ ವಿಳಾಸ, ಕುರಿ/ಮೇಕೆಗಳು ಮರಣಿಸಿದ ದಿನಾಂಕ, ಶವ ಪರೀಕ್ಷೆ ದಿನಾಂಕ, ಕುರಿ/ಮೇಕೆ ವಯಸ್ಸು, ಪರಿಹಾರ ವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ ಮರಣಿಸಿದ್ದಕ್ಕೆ ಸೂಕ್ತ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸುವುದು.

ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆ ಹಾಗು ಇನ್ನಿತರ ದಾಖಲೆಗಳು ಅಗತ್ಯ
ಮರಣೋತ್ತರ ವರದಿ, ಫೋಟೋಗಳು, ಫಲಾನುಭವಿ ಅರ್ಜಿ, ಆಧಾರ್ ಲಿಂಕ್ ಬ್ಯಾಂಕ್ ಖಾತೆ ಮತ್ತು ಮುಂಗಡ ಹಣ ಸಂದಾಯ ರಶೀದಿಯಲ್ಲಿ ಫಲಾನುಭವಿಗಳ ಸಹಿ, ಪೂರ್ಣ ವಿಳಾಸ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ತಪ್ಪದೇ ವೋಚರ್‌ಗಳನ್ನು ದೃಢೀಕರಿಸಿ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳಿಗೆ ಸಲ್ಲಿಸುವುದು. ತಾಲ್ಲೂಕು ಪರಿಶೀಲನಾ ಸಮಿತಿ ವರದಿಯನ್ನು ಪ್ರತಿ ತಿಂಗಳಿಗೆ ಒಂದರಂತೆ ಪ.ಜಾ/ ಪ.ಪಂ/ಸಾಮಾನ್ಯ ವರ್ಗಾವಾರು ಪ್ರತ್ಯೇಕವಾಗಿ ತಯಾರಿಸಿ ಸಲ್ಲಿಸುವುದು.
ವಲಸೆ ಬಂದು ಮರಣ ಹೊಂದಿದ ಕುರಿ/ಮೇಕೆಗಳ ಬಗ್ಗೆ ಪರಿಶೀಲನೆ
ತಾಲ್ಲೂಕು ಸಹಾಯಕ ನಿರ್ದೇಶಕರು | ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಇವರು ಬೇರೆ ಜಿಲ್ಲೆಗಳಿಂದ ವಲಸೆ ಬಂದು ಮರಣ ಹೊಂದಿದ ಕುರಿ/ಮೇಕೆಗಳಿಗೆ ಪ್ರತ್ಯೇಕ ತಾಲ್ಲೂಕು ಸಮಿತಿ ವರದಿ ತಯಾರಿಸಿ ದಾಖಲಾತಿಗಳನ್ನು ಜಿಲ್ಲಾ ಉಪನಿರ್ದೇಶಕರು (ಆಡಳಿತ), ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ಮೂಲಕ ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳಿಗೆ ಸಲ್ಲಿಸುವುದು.
ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳು ಬೇರೆ ಜಿಲ್ಲೆಗಳಿಂದ ವಲಸೆ ಬಂದು ಮರಣಿಸಿದ ಕುರಿ/ಮೇಕೆಗಳ ಪರಿಹಾರಧನದ ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಫಲಾನುಭವಿಗಳ ಮೂಲ ಜಿಲ್ಲೆಗಳ ನಿಗಮದ ಜಿಲ್ಲಾ ಅನುಷ್ಟಾನಾಧಿಕಾರಿಗಳಿಗೆ ಸಲ್ಲಿಸಿ ಧೃಢೀಕರಣ ಪಡೆಯುವುದು.

ನಿರ್ದಿಷ್ಟ ಪರಿಶೀಲನೆಯೊಂದಿಗೆ ಪರಿಹಾರಧನ ನೀಡಲಾಗುತ್ತದೆ
ನಿಗಮದ ಜಿಲ್ಲಾ ಅನುಷ್ಠಾನಾಧಿಕಾರಿಗಳು ಪರಿಹಾರಧನದ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಪರಿಹಾರ Hinglin ವ್ಯಾಪ್ತಿಗೆ ಬರುವ ಪ್ರಕರಣಗಳಿಗೆ ಮಾತ್ರ ಬಿಲ್ಲುಗಳನ್ನು ತಯಾರಿಸಿ, ಪರಿಹಾರಧನದ ಲೆಕ್ಕ ಶೀರ್ಷಿಕೆ:2403-00-104- 0-12(101-ಸಾಮಾನ್ಯ) 422-ಪರಿಶಿಷ್ಟ ಜಾತಿ, 423-ಪರಿಶಿಷ್ಟ ಪಂಗಡವಾರು ಸಂಬಂಧಪಟ್ಟ ದಾಖಲಾತಿಗಳೊಂದಿಗೆ ನಿಗಮದ ಕೇಂದ್ರ ಕಛೇರಿಗೆ ಸಲ್ಲಿಸುವುದು. ಈ ರೀತಿಯಾಗಿ ಎಲ್ಲ ದಾಖಲೆಗಳನ್ನು ಸಂಬಂಧ ಪಟ್ಟ ಇಲಾಖೆಗೆ ನೀಡಿ ಸರಕಾರದಿಂದ ಯೋಜನೆಯಡಿ ಹಣ ಪಡೆಯಬಹುದು. ಈ ಯೋಜನೆಯು ಹಲವಾರು ಸಾಕಾಣಿಕೆದಾರರಿಗೆ ಬಹಳ ಉಪಯುಕ್ತವಾಗಲಿದೆ.