Vehicle Subsidy: ವಾಹನ ಖರೀದಿ ಮಾಡುವವರಿಗೆ 3 ಲಕ್ಷ ರೂ ಉಚಿತ, ಸರ್ಕಾರದ ಇನ್ನೊಂದು ಘೋಷಣೆ.

ವಾಹನಗಳ ಖರೀದಿಗೆ ಕಾಂಗ್ರೆಸ್ ಸರ್ಕಾರದಿಂದ ಬಿಗ್ ಸಬ್ಸಿಡಿ.

Vehicle Purchase Subsidy: ಕರ್ನಾಟಕದಲ್ಲಿ CM ಸಿದ್ದರಾಮಯ್ಯ ರವರು ಒಂದು ಬಿಗ್ ಆಫರ್ ಅನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈಗಾಗಲೇ ತುಂಬಾ ಯೋಜನೆಗಳನ್ನು ಕರ್ನಾಟಕದ ಜನರಿಗೆ ಕಾಂಗ್ರಸ್ ಸರ್ಕಾರ ನೀಡಿದ್ದು, ಈಗ ಇನ್ನೊಂದು ಯೋಜನೆ ಜಾರಿಗೆ ತಂದಿದೆ ಅದೇನೆಂದರೆ ಅಲ್ಪಸಂಖ್ಯಾತ ಸಮುದಾಯದವರಿಗೆ ವಾಹನ ಖರೀದಿಗೆ 3 ಲಕ್ಷ ರೂಪಾಯಿ ಸಬ್ಸಿಡಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿದೆ.

vehicle purchase subsidy latest update
Image Credit: Economictimes

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಿಗೆ ಬಿಗ್ ಆಪರ್
ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರು ತಮ್ಮ ಆಯ್ಕೆಯ ಆಟೋ ರಿಕ್ಷಾ, ಟ್ಯಾಕ್ಸಿ ಅಥವಾ ಮೂರು ನಾಲ್ಕು ಚಕ್ರದ ಗೂಡ್ಸ್​ ವಾಹನವನ್ನು ಖರೀದಿಸಿದಾಗ ಆ ವಾಹನ ಮೊತ್ತದ ಶೇಕಡಾ 50 ರಷ್ಟು ಸಬ್ಸಿಡಿ ಅಥವಾ 3 ಲಕ್ಷ ರೂಪಾಯಿ ವರೆಗೆ ಸಬ್ಸಿಡಿ ಸಿಗಲಿದೆ. ಅಲ್ಲದೇ ಉಳಿದ ಮೊತ್ತಕ್ಕೆ ಸರ್ಕಾರವು ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅವರಿಗೆ ಸಹಾಯ ಮಾಡುತ್ತದೆ.

ಈ ಯೋಜನೆಯಡಿ ಅರ್ಜಿ ಹಾಕಲು ಬೇಕಾಗುವ ಮುಖ್ಯ ಅರ್ಹತೆಗಳು
ಯೋಜನೆಯ ಅರ್ಜಿದಾರರು ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಹಾಗು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು, 18 ರಿಂದ 55 ವರ್ಷದವರಾಗಿರಬೇಕು, ವಾರ್ಷಿಕ ಆದಾಯವು 4.5 ಲಕ್ಷಕ್ಕಿಂತ ಕಡಿಮೆ ಇರಬೇಕು, ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು ಈ ಎಲ್ಲ ನಿಯಮಗಳಿಗೆ ಬದ್ಧರಾಗಿರುವವರು ಈ ಯೋಜನೆಯ ಫಲಾನುಭವಿಗಳಾಗಬಹುದು ಎಂದಿದ್ದಾರೆ.

Congress Government Vehicle Purchase Subsidy
Image Credit: Jagran

ಸರ್ಕಾರದಿಂದ 3 ಲಕ್ಷ ಸಹಾಯಧನ
“ಚಾಲಕ ಚಾಲಕನಾಗಿ ಉಳಿಯಬಾರದು. ವಾಹನದ ಮಾಲೀಕರೂ ಆಗಬೇಕು. ಅವನು ತನ್ನ ಆಯ್ಕೆಯ 8 ಲಕ್ಷದ ವರೆಗಿನ ಮೌಲ್ಯದ ನಾಲ್ಕು ಚಕ್ರದ ವಾಹನವನ್ನು ಖರೀದಿಸಬಹುದು. ಸರ್ಕಾರವು 3 ಲಕ್ಷ ಸಹಾಯಧನವನ್ನು ನೀಡುತ್ತದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ. ಹಾಗು ನಾವು ಸಾಲಕ್ಕೂ ಸಹಾಯ ಮಾಡುತ್ತೇವೆ.

ಅವರು ಕಾರಿನ ಮೌಲ್ಯದ 10% ಮುಂಗಡ ಪಾವತಿಯನ್ನು ಮಾಡಬೇಕಾಗುತ್ತದೆ. ಉದಾಹರಣೆಗೆ, ಕಾರಿನ ಮೌಲ್ಯವು 8 ಲಕ್ಷ ರೂ ಆಗಿದ್ದರೆ, ಅವರು 80,000 ಆರಂಭಿಕ ಪಾವತಿಯನ್ನು ಮಾಡಬೇಕಾಗುತ್ತದೆ. ನಾವು 3 ಲಕ್ಷ ಸಬ್ಸಿಡಿ ನೀಡುತ್ತೇವೆ. ಉಳಿದ ಮೊತ್ತಕ್ಕೆ ಬ್ಯಾಂಕ್‌ ಸಾಲ ನೀಡಲು ಸಹಾಯ ಮಾಡುತ್ತೇವೆ. ಹಿಂದಿನ ಸಿದ್ದರಾಮಯ್ಯನವರ ಆಡಳಿತದಲ್ಲಿ ಈ ಯೋಜನೆ ಇತ್ತು. ಬಿಜೆಪಿ ಅದನ್ನು ತೆಗೆದುಹಾಕಿದೆ” ಎಂದು ಹೇಳಿದರು.

Leave A Reply

Your email address will not be published.