Gruha Lakshmi: ಈ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರಲ್ಲ, ಸರ್ಕಾರ ಸ್ಪಷ್ಟನೆ.
ಇಂತಹ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಅರ್ಹರಲ್ಲ.
Gruha Lakshmi Money: ಕಾಂಗ್ರೆಸ್ (Congress) ಸರಕಾರ ಅಧಿಕಾರಕ್ಕೆ ಬರುವ ಮುನ್ನ 5 ಗ್ಯಾರಂಟಿ ಗಳನ್ನೂ ಘೋಷಣೆ ಮಾಡಿತ್ತು ಅದರಲ್ಲಿ ಗೃಹ ಲಕ್ಷ್ಮಿ ಯೋಜನೆ ಒಂದಾಗಿದೆ. ಗೃಹ ಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತಿ ಮನೆಯ ಮಹಿಳೆಯರಿಗೆ 2000 ಹಣ ನಿಡುದಾಗಿ ಘೋಷಣೆ ಮಾಡಿತ್ತು.
ಸರ್ಕಾರ ಮೊದಲು ಈ ಯೋಜನೆಯ ಬಿಡುಗಡೆಯ ದಿನಾಂಕವನ್ನು ಆಗಸ್ಟ್ 15 ಕ್ಕೆ ನಿಗದಿ ಪಡಿಸಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆಯ ದಿನಾಂಕವನ್ನು ಆಗಸ್ಟ್ 30 ಕ್ಕೆ ಮುಂದೂಡಲಾಯಿತು. ಇದೀಗ ರಾಜ್ಯದ ಮಹಿಳೆಯರ ಖಾತೆಗೆ ನಾಳೆ (ಆಗಸ್ಟ್ 30 ) ಹಣ ಜಮಾ ಆಗಲಿದೆ.
ಇಂತಹ ಮಹಿಳೆಯರಿಗೆ ಗೃಹ ಲಕ್ಷ್ಮಿಯ 2000 ಹಣ ಸಿಗಲ್ಲ
ಆಗಸ್ಟ್ 30 ರಂದು ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಹಾಕುವ ಕೆಲಸ ಮಾಡಲಾಗುತ್ತದೆ ಎಂದು ಸರ್ಕಾರ ಈಗಾಗಲೇ ಹೇಳಿಕೆ ನೀಡಿತ್ತು. ಈ ಹೇಳಿಕೆಯಂತೆ ಅರ್ಹ ಫಲಾನುಭವಿಗಳ ಖಾತೆಗೆ ನಾಳೆ ಹಣ ಜಮಾ ಆಗುತ್ತದೆ. ಆದರೆ ಇಂತಹ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಪಡೆಯುವ ಭಾಗ್ಯ ಇಲ್ಲ. ಇದೀಗ ಯಾವ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ 2000 ಹಣ ಪಡೆಯುವ ಭಾಗ್ಯ ಇಲ್ಲ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಈ ಮಹಿಳೆಯರ ಖಾತೆಗೆ ನಾಳೆ ಗೃಹ ಲಕ್ಷ್ಮಿ ಯೋಜನೆಯ ಹಣ ಜಮಾ ಆಗುದಿಲ್ಲ
*ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ ಈ ಯೋಜನೆಯ ಹಣ ಸಿಗುವುದಿಲ್ಲ.
*ವೈಟ್ ಬೋರ್ಡ್ ಕಾರ್ ಹೊಂದಿರುವ ಕುಟುಂಬದ ಮಹಿಳೆಯರಿಗೆ 2000 ಹಣ ಸಿಗಲ್ಲ.
*ಸರ್ಕಾರೀ ಹುದ್ದೆಯಲ್ಲಿರುವವರಿಗೆ ಹಾಗೆ ಪೆನ್ಷನ್ ಪಡೆಯುವ ಮಹಿಳೆಯರಿಗೆ ಗೃಹ ಲಕ್ಷ್ಮಿಯ ಹಣ ದೊರೆಯುದಿಲ್ಲ.
*ಆದಾಯ ತೆರಿಗೆ ಪಾವತಿ ಮಾಡುವ ಕುಟುಂಬದ ಮಹಿಳೆಯರಿಗೆ ಈ ಯೋಜನೆಯ ಹಣ ಸಿಗಲ್ಲ.
*ಏಳು ಎಕ್ಕರೆಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಕುಟುಂಬದ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಯ ಹಣ ಸಿಗುವುದಿಲ್ಲ.