Milk Info: ಹಸುವಿನ ಹಾಲು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸ ಏನು…? ಸುಲಭವಾಗಿ ಕಂಡುಹಿಡಿಯಿರಿ.

ಹಸು ಮತ್ತು ಎಮ್ಮೆ ಹಾಲಿನ ನಡುವಿನ ವ್ಯತ್ಯಾಸ ಏನು...?

Cow And Buffalo Milk: ದಿನನಿತ್ಯ ಹಾಲು ಕುಡಿಯುವವರು ಈ ವಿಚಾರಗಳನ್ನು ತಿಳಿದುಕೊಳ್ಳಿ, ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ದಿನ ಒಂದು ಲೋಟ ಹಾಲು ಕುಡಿಯುವುದು ಉತ್ತಮ. ಆದರೆ ಯಾವ ಹಾಲು ಕುಡಿದರೆ ಯಾವ ಪ್ರಯೋಜನ ಸಿಗುತ್ತದೆ ಎನ್ನವುದು ಬಹಳ ಮುಖ್ಯ.ಇದರಲ್ಲಿ ಹಸು ಹಾಲು ಮತ್ತು ಎಮ್ಮೆ ಹಾಲು ಎಂಬ ಎರಡು ಆಯ್ಕೆ ನೀವು ನೋಡಬಹುದು.

ಹಾಲು ಪೋಷಕಾಂಶವಿರುವ ಆಹಾರ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೆಗೆ ದಿನಾ ಹಾಲು ಕುಡಿಯುವುದು ಒಳ್ಳೆಯದು. ಹಸುವಿನ ಹಾಲು ಹಾಗೂ ಎಮ್ಮೆ ಹಾಲನ್ನು ಹೆಚ್ಚಾಗಿ ನಾವು ಬಳಸುತ್ತೇವೆ ಇದರಲ್ಲಿ ಯಾವುದು ಉತ್ತಮ ಎಂದು ಇಲ್ಲಿ ತಿಳಿಯೋಣ.

Cow Milk
Image Credit: Istockphoto

ಹಸುವಿನ ಹಾಲು ನಮ್ಮ ಆರೋಗ್ಯವನ್ನು ಹೇಗೆ ಕಾಪಾಡುತ್ತದೆ ತಿಳಿಯಿರಿ

ಹಸುವಿನ ಹಾಲು ಬೇಗನೆ ಜೀರ್ಣವಾಗುವುದು. ಎಮ್ಮೆ ಹಾಲಿಗಿಂತ ಹಸುವಿನ ಹಾಲಿನಲ್ಲಿ ವಿಟಮಿನ್ ಎ ಅಧಿಕವಿದೆ, ವಿಟಮಿನ್‌ ಎ ಕಣ್ಣುಗಳ ಆರೋಗ್ಯಕ್ಕೆ, ಮೂಳೆಗಳ ಬೆಳವಣಿಗೆಗೆ, ರೋಗ ನಿರೋಧಕ ಶಕ್ತಿ ಹೆಚ್ಚಲು ತುಂಬಾನೇ ಅವಶ್ಯಕ. ಆದ್ದರಿಂದ ಮಕ್ಕಳಿಗಾದರೆ ಹಸುವಿನ ಹಾಲು ತುಂಬಾನೇ ಒಳ್ಳೆಯದು.

ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಮಂದವಿರುತ್ತದೆ, ಆದ್ದರಿಂದ ಬೇಗನೆ ಜೀರ್ಣವಾಗುವುದಿಲ್ಲ. ಅದರಲ್ಲೂ ಕೆಲವರಿಗೆ ಎಮ್ಮೆ ಹಾಲು ಕುಡಿದರೆ ಅಜೀರ್ಣ ಸಮಸ್ಯೆ ಉಂಟಾಗುವುದು. ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಕೊಲೆಸ್ಟ್ರಾಲ್ ತುಂಬಾ ಕಡಿಮೆ. ಕೊಲೆಸ್ಟ್ರಾಲ್ ಹೆಚ್ಚಾದರೆ ಕೊಬ್ಬಿನಂಶ ಹೆಚ್ಚಾಗುವುದು. ಇದರಿಂದ ಹೃದಯಾಘಾತದ ಅಪಾಯ ಹೆಚ್ಚು.

ಹೃದಯ ಸಮಸ್ಯೆ ಇರುವವರು ಎಮ್ಮೆ ಹಾಲಿಗಿಂತ ಹಸುವಿನ ಹಾಲು ಕುಡಿಯುವುದು ಒಳ್ಳೆಯದು. ಹಸುವಿನ ಹಾಲಿನಲ್ಲಿ ಎಮ್ಮೆ ಹಾಲಿಗಿಂತ ಪ್ರೊಟೀನ್‌, ಕೊಬ್ಬು, ಕಾರ್ಬೋಹೈಡ್ರೇಟ್ಸ್ ಎಲ್ಲವೂ ಸಮ ಪ್ರಮಾಣದಲ್ಲಿ ಇರುತ್ತದೆ.ಹಸುವಿನ ಹಾಲಿನಲ್ಲಿ ಕ್ಯಾಲೋರಿ ತುಂಬಾನೇ ಕಡಿಮೆ ಇದೆ. ಆದ್ದರಿಂದ ತೂಕ ಇಳಿಕೆಯ ಡಯಟ್‌ ಮಾಡುವವರೆಗೆ ಹಸುವಿನ ಹಾಲು ಒಳ್ಳೆಯದು.

Buffalo Milk
Image Credit: Factssa

ಎಮ್ಮೆ ಹಾಲಿನಲ್ಲಿ ಈ ಪ್ರಯೋಜನಗಳಿವೆ

ಎಮ್ಮೆ ಹಾಲಿನಲ್ಲಿ ಕೋವಾ, ಮೊಸರು, ಪನ್ನೀರ್, ಮಲೈ ಇವುಗಳನ್ನು ಮಾಡಲು ಒಳ್ಳೆಯದು. ಎಮ್ಮೆ ಹಾಲು ಹಸುವಿನ ಹಾಲಿಗಿಂತ ಹೆಚ್ಚು ಸಮಯ ಇಡಬಹುದು. ಎಮ್ಮೆ ಹಾಲು ಬೇಗನೆ ಹಾಳಾಗುವುದಿಲ್ಲ, ಆದರೆ ಹಸುವಿನ ಹಾಲನ್ನು 1-2 ದಿನದೊಳಗೆ ಬಳಸಬೇಕು, ಇಲ್ಲದಿದ್ದರೆ ಹಾಲು ಒಡೆದು ಹೋಗುತ್ತದೆ. ಹಾಲಿನಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಇದನ್ನು ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.

ಹಾಲಿನಲ್ಲಿ ಕ್ಯಾಲ್ಸಿಯಂಶ ಅಧಿಕವಿದೆ, ಆದ್ದರಿಂದ ಹಲ್ಲು ಹಾಗೂ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.ಎಮ್ಮೆ ಹಾಲು ಕುಡಿದರೆ ತುಂಬಾ ಚೆನ್ನಾಗಿ ನಿದ್ದೆ ಬರುತ್ತದೆ, ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಹಸುವಿನ ಹಾಲಿಗಿಂತ ಎಮ್ಮೆ ಹಾಲು ಕುಡಿದರೆ ಕಣ್ಣಿಗೆ ಚೆನ್ನಾಗಿ ನಿದ್ದೆ ಹತ್ತುವುದು.ಹಾಲಿನಲ್ಲಿ ವಿಟಮಿನ್ ಡಿ ಇದೆ, ಕ್ಯಾಲ್ಸಿಯಂ ಹೀರಿಕೊಳ್ಳಲು ವಿಟಮಿನ್ ಡಿ ಅವಶ್ಯಕ.

ಇದರಲ್ಲಿರುವ ವಿಟಮಿನ್ ಬಿ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಸಹಕಾರಿ. ಹಾಲನ್ನು ಮಕ್ಕಳಿಗೆ ನೀಡುವುದರಿಂದ ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಗರ್ಭಣಿಯರು ಎಮ್ಮೆ ಹಾಲನ್ನು ಕುಡಿಯುವುದರಿಂದ ಅವರ ಶರೀರದ ಆರೋಗ್ಯಕ್ಕೆ ಒಳ್ಳೆಯದು, ಭ್ರೂಣದ ಬೆಳವಣಿಗೆಗೂ ಒಳ್ಳೆಯದು.

 

Leave A Reply

Your email address will not be published.