Card To Card: ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಮೂಲಕ ಹೇಗೆ ಪಾವತಿ ಮಾಡುವುದು, ಇಲ್ಲಿದೆ ಮಾಹಿತಿ..

ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇನ್ನೊಂದು ಕ್ರೆಡಿಟ್ ಕಾರ್ಡ್ ಮೂಲಕ ಮಾಡಬಹುದು.

Credit Card Balance Transfer To Another Credit Card: ಕ್ರೆಡಿಟ್ ಕಾರ್ಡ್ ಬಳಕೆ ಈಗ ಸರ್ವೇ ಸಾಮಾನ್ಯವಾಗಿದೆ . ಹೆಚ್ಚಿನ ಸಂಖ್ಯೆಯಲ್ಲಿ ಕ್ರೆಡಿಟ್ ಕಾರ್ಡ್ ಗ್ರಾಹಕರು ಇದ್ದು ಈ ಮೂಲಕ ಕ್ರೆಡಿಟ್ ಕಾರ್ಡ್ ಅನೇಕ ಆಫರ್ ಗಳನ್ನೂ ಆಗಾಗ್ಗೆ ನೀಡುತ್ತಿರುತ್ತದೆ.

ಕೆಲವು ಸಂದರ್ಭದಲ್ಲಿ ಹಣವಿಲ್ಲದಿದ್ದರೂ ವಸ್ತುಗಳನ್ನು ಪರ್ಚೇಸ್ ಮಾಡಲು ಮತ್ತು ಬಿಲ್‌ಗಳನ್ನು ಪೇ ಮಾಡಲು ಕ್ರೆಡಿಟ್ ಕಾರ್ಡ್ ತುಂಬಾ ಹೆಲ್ಪ್ ಆಗುತ್ತೆ. ದುಬಾರಿ ವಸ್ತುಗಳನ್ನು ಒಂದೇ ಬಾರಿಗೆ ಖರೀದಿಸಲು ನಿಮ್ಮ ಬಳಿ ಸಾಕಷ್ಟು ಹಣವಿಲ್ಲದಿದ್ದಾಗ ಇ.ಎಮ್.ಐ ಮೂಲರ ಖರೀದಿ ಮಾಡಲು ಕ್ರೆಡಿಟ್ ಕಾರ್ಡ್ ಸಹಾಯವಾಗುತ್ತೆ.

Credit Card Latest Update
Image Credit: Indusind

ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇನ್ನೊಂದು ಕ್ರೆಡಿಟ್ ಕಾರ್ಡ್‌ನ ಸಹಾಯದಿಂದ ಪಾವತಿಸಲು ಸಾಧ್ಯವೇ

ಕ್ರೆಡಿಟ್ ಕಾರ್ಡ್ ಕಷ್ಟದ ಟೈಮ್‌ನಲ್ಲಿ ತುಂಬಾ ಹೆಲ್ಪ್ ಆದರೂ ಸಹ ನಿಮ್ಮ ಕ್ರೆಡಿಟ್ ಕಾರ್ಡ್‌ನ ಬಿಲ್‌ನ್ನು ನೀವು ಸಮಯಕ್ಕೆ ಸರಿಯಾಗಿ ಪೇಮೆಂಟ್ ಮಾಡುವುದು ಸಹ ತುಂಬಾ ಇಂಪಾರ್ಟೆಂಟ್ ಆಗಿದೆ. ಇಲ್ಲದಿದ್ದರೆ ನೀವು ಕಾರ್ಡ್ ನೀಡಿದ ಸಂಸ್ಥೆಗಳಿಂದ ರೇಟ್ ಆಫ್ ಇಂಟ್ರೆಸ್ಟ್ ಮತ್ತು ಲೇಟ್ ಪೇಮೆಂಟ್‌ಗಾಗಿ ಹೆಚ್ಚಿನ ಮೊತ್ತದ ದಂಡವನ್ನು ಕಟ್ಟಬೇಕಾದಿತು.

ಈ ಸಂದರ್ಭದಲ್ಲಿ ಹೆಚ್ಚಿನ ಮಂದಿಗೆ ಒಂದು ಸಂಶಯ ಕಾಡುವುದು ಸಾಮಾನ್ಯವಾಗಿದ್ದು ಅದೇನೆಂದರೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇನ್ನೊಂದು ಕ್ರೆಡಿಟ್ ಕಾರ್ಡ್‌ನ ಸಹಾಯದಿಂದ ಪಾವತಿಸಲು ಸಾಧ್ಯವೇ ಎಂಬುದು. ಹೆಚ್ಚಿನ ಕ್ರೆಡಿಟ್ ಕಾರ್ಡ್ ಸಂಸ್ಥೆಗಳು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸುವ ಸೌಲಭ್ಯವನ್ನು ಒದಗಿಸುವುದಿಲ್ಲ.

ಈ ರೀತಿಯ ಸೌಲಭ್ಯವನ್ನು ನೀಡುವ ಒಂದೆರಡು ಕ್ರೆಡಿಟ್ ಕಾರ್ಡ್ ವಿತರಕರು ಇದ್ದರೂ ಸಹ ಅದನ್ನು ಪಡೆದುಕೊಳ್ಳುವುದರಿಂದ ಹೆಚ್ಚುವರಿ ಶುಲ್ಕಗಳು ಮತ್ತು ಹೆಚ್ಚಿನ ಬಡ್ಡಿ ಶುಲ್ಕಗಳು ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

Credit Card Balance Transfer To Another Credit Card
Image Credit: Other Source

ಬ್ಯಾಲೆನ್ಸ್ ವರ್ಗಾವಣೆ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ ಮಾಡಬಹುದು

ಮುಂಗಡವಾಗಿ ಕ್ಯಾಶ್ ಪಡೆಯುವ ಮೂಲಕ, ಇ-ವ್ಯಾಲೆಟ್ ಅನ್ನು ಬಳಸುವ ಮೂಲಕ, ಬ್ಯಾಲೆನ್ಸ್ ವರ್ಗಾವಣೆ ಮೂಲಕ ಕ್ರೆಡಿಟ್ ಕಾರ್ಡ್ ಪಾವತಿ ಮಾಡಬಹುದು. ಈ ರೀತಿಯ ವಿಧಾನದ ಮೂಲಕ ನಿಮ್ಮ ಕ್ರೆಡಿಟ್‌ನ ಬಾಕಿ ಮೊತ್ತವನ್ನು ನೀವು ಹೆಚ್ಚಿನ ಟೈಮ್ ಬಾಂಡ್ ಅಥವಾ ಕಡಿಮೆ ಬಡ್ಡಿದರದೊಂದಿಗೆ ಮತ್ತೊಂದು ಕ್ರೆಡಿಟ್ ಕಾರ್ಡ್‌ಗೆ ವರ್ಗಾಯಿಸಬಹುದು. ಮೊದಲನೆಯದಾಗಿ ಬ್ಯಾಲೆನ್ಸ್ ವರ್ಗಾವಣೆಯು ನಿಮ್ಮ ಸಿಬಿಲ್ ಸ್ಕೋರ್‌ನ ಮೇಲೂ ಪರಿಣಾಮ ಬೀರಬಹುದು. ನೀವು ಬಾಕಿ ವರ್ಗಾವಣೆ ಶುಲ್ಕವನ್ನು ಪಾವತಿಸಬೇಕಾಗಬಹುದು.

ಬಡ್ಡಿ ದರದಲ್ಲಿ ಹೆಚ್ಚಳ

ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣವನ್ನು ಡ್ರಾ ಮಾಡಿದ್ರೆ ಇದರ ಬಡ್ಡಿ ದರವು ಸಾಕಷ್ಟು ಹೆಚ್ಚಿರುತ್ತದೆ. ಹಾಗಾಗಿ ಒಂದು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಮತ್ತೊಂದು ಕ್ರೆಡಿಟ್ ಕಾರ್ಡ್ ಬಿಲ್ ಮೂಲಕ ಬ್ಯಾಲೆನ್ಸ್ ವರ್ಗಾವಣೆ ಮೂಲಕ ಪಾವತಿಸಬಹುದು, ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು, ಈ ವಿಧಾನಗಳು ನಿಮಗೆ ಕೆಲವೊಂದಿಷ್ಟು ಸಹಕಾರಿಯಾದ್ರು ಸಹ ನಿಮ್ಮ ಒಟ್ಟಾರೆ ಕ್ರೆಡಿಟ್ ಕಾರ್ಡ್‌ನ ಬಿಲ್ ಮೊತ್ತವನ್ನು ದುಪ್ಪಟ್ಟು ಮಾಡುತ್ತದೆ. ಹೀಗಾಗಿ ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಪಾವತಿಸಲು ಸಾಮಾನ್ಯ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು.

Leave A Reply

Your email address will not be published.