Cricket Ball: ಕ್ರಿಕೆಟ್ ಬಾಲ್ ಹೇಗೆ ತಯಾರಿಸುತ್ತಾರೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಮಾಹಿತಿ
ಕ್ರಿಕೆಟ್ ಆಟಗಾರರು ಬಳಸುವ ಚೆಂಡನ್ನು ಹೇಗೆ ತಯಾರಿಸುತ್ತಾರೆ ಎಂದು ನೋಡಿದರೆ ಅಚ್ಚರಿ ಆಗುವುದಂತೂ ಖಚಿತ.
Cricket Ball Making: ದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನಬಹುದು. ಯಾಕೆಂದರೆ ಯಾವ ಆಟಕ್ಕೂ ಇಲ್ಲದ ಹೆಚ್ಚಿನ ಪ್ರಾಮುಖ್ಯತೆ ಕ್ರಿಕೆಟ್ ಗೆ ಇದೆ . ಕ್ರಿಕೆಟ್ ಯುವ ಪೀಳಿಗೆ ಯವರಲ್ಲಿ ಕ್ರೇಜ್ ಹೆಚ್ಚಿಸಿದೆ . ವಿಶ್ವಕಪ್ ನಂತಹ ಲೀಗ್ ಪ್ರಾರಂಭ ವಾದರೆ ಸಾಕು ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬ ವಿದ್ದಂತೆ. ಅಭಿಮಾನಿಗಳು ಭಾರತ ಗೆಲ್ಲಲಿ ಎಂದು ಪ್ರಾಥಿಸಿಕೊಳ್ಳುತ್ತಾರೆ.
ಕ್ರಿಕೆಟ್ ಆಟಗಾರರು ಪ್ರತಿ ಏರಿಯಾದಲ್ಲೂ ಸಿಗುತ್ತಾರೆ. ರಜೆ ದಿನ ಎಲ್ಲರೂ ಮೈದಾನದಲ್ಲಿ ಬ್ಯಾಟ್, ಬಾಲ್ ಹಿಡಿದು ಆಟ ಪ್ರಾರಂಭಿಸುತ್ತಾರೆ. ಆದ್ರೆ ಹೆಚ್ಚಿನವರಿಗೆ ಕ್ರಿಕೆಟ್ ಬಗ್ಗೆ ಗೊತ್ತಿರದ ಹಲವಾರು ವಿಷಯಗಳಿವೆ.

ಕ್ರಿಕೆಟಿಗರು ಬಳಸುವ ಬಾಲ್ ಯಾವುದು ಗೊತ್ತಾ?
ಹೆಚ್ಚಿನ ಯುವಕರು ಕ್ರಿಕೆಟ್ ನೋಡುವುದಕ್ಕಿಂತ ಆಟಗಾರರು ಉಪಯೋಗಿಸುವ ಬಾಲ್ ಮೇಲೆ ಕಣ್ಣಿರುತ್ತದೆ. ಕ್ರಿಕೆಟ್ ನಲ್ಲಿ ಬಳಸುವ ಲೆದರ್ ಬಾಲ್ ಹೇಗೆ ತಯಾರಿಸುತ್ತಾರೆ ಗೊತ್ತಾ? ಈ ಚೆಂಡನ್ನು ತಯಾರಿಸುವುದು ತುಂಬಾ ಕಷ್ಟ. ಇತ್ತೀಚಿನ ದಿನಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ, ಅದರಲ್ಲಿ ಅದನ್ನು ಮಾಡುವ ಪ್ರಕ್ರಿಯೆಯನ್ನು ತೋರಿಸಲಾಗಿದೆ.
ಇತ್ತೀಚೆಗೆ @yummybites_kt ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಉತ್ತರ ಪ್ರದೇಶದ್ದಾಗಿದ್ದು,ಇದರಲ್ಲಿ ಕ್ರಿಕೆಟ್ ಬಾಲ್ ತಯಾರಿಕೆಯನ್ನು ತೋರಿಸಲಾಗಿದೆ. ವೃತ್ತಿಪರ ಕ್ರಿಕೆಟ್‌ನಲ್ಲಿ ಚರ್ಮದ ಚೆಂಡುಗಳನ್ನು ಬಳಸಲಾಗುತ್ತದೆ. ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಬಳಸುವ ಚೆಂಡುಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ.
View this post on Instagram
ಕ್ರಿಕೆಟ್ ಪಂದ್ಯದಲ್ಲಿ ಬಳಸುವ ಬಾಲ್ ತಯಾರಿಕೆಯ ವಿಡಿಯೋ ವೈರಲ್
ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡುವಾಗ, ಇದು ಕ್ರಿಕೆಟ್ ವಿಶ್ವಕಪ್ ಚೆಂಡುಗಳು ಎಂದು ಬರೆಯಲಾಗಿದೆ, ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಈ ಬಾಲ್ ಅನ್ನೇ ನಿಜವಾಗಿಯೂ ಬಳಸಲಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಏಕದಿನ ಪಂದ್ಯಗಳಲ್ಲಿ ಕೆಂಪು ಚೆಂಡುಗಳನ್ನು ಬಳಸಲಾಗುತ್ತದೆ. ಅವುಗಳನ್ನು ಬಳಸಲಾಗುವುದಿಲ್ಲ, ಬದಲಿಗೆ ಅವುಗಳನ್ನು ಟೆಸ್ಟ್ ಪಂದ್ಯಗಳಲ್ಲಿ ಬಳಸಲಾಗುತ್ತದೆ ಎನ್ನಲಾಗಿದೆ .