Farmers Compensation : ರಾಜ್ಯದ ರೈತರಿಗೆ ಜಾರಿಗೆ ಬಂತು ಹೊಸ ರೂಲ್ಸ್, ಇನ್ನು ಮುಂದೆ ಪರಿಹಾರ ಪಡೆಯಲು ಈ ಕಾರ್ಡ್ ಕಡ್ಡಾಯ.

ರೈತರು ಸರಕಾರದಿಂದ ಪರಿಹಾರ ಪಡೆಯಬೇಕಿದ್ದರೆ ಈ ನಿಯಮ ಕಡ್ಡಾಯ, ಈ ಕಾರ್ಡ್ ಇಲ್ಲದೆ ಪರಿಹಾರ ದೊರೆಯದು

Crop Compensation For Farmers: ರಾಜ್ಯದ ರೈತರಿಗಾಗಿ ಹೊಸ ನಿಯಮ ಜಾರಿಗೆ ತರಲಾಗಿದೆ. ರೈತರಿಗೆ ಸರ್ಕಾರದಿಂದ ಸಿಗುವ ದೊಡ್ಡ ಸಹಾಯವೆಂದರೆ ಪರಿಹಾರ. ಬೆಳೆ ನಷ್ಟ ಆದ ಸಂದರ್ಭದಲ್ಲಿ ಸರ್ಕಾರದಿಂದ ಪಡೆಯುವ ಪರಿಹಾರ ಪಡೆಯಲು ಸರಕಾರ ಹೊಸ ನಿಯಮ ಜಾರಿಗೆ ತಂದಿದೆ.

ಬೆಳೆ ವಿಮೆ ನೋಂದಣಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ,ಕೃಷಿ ಉತ್ಪನ್ನ ಮಾರಾಟ ಮಾಡಲು ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ಈ ಯೋಜನೆ ಬಹಳ ಉಪಯುಕ್ತ ಆಗಿದೆ. 

Farmers Compensation
Image Credit: Mongabay

ಎಫ್‌ಐಡಿ ರೈತರ ಗುರುತಿನ ಸಂಖ್ಯೆ ಕಡ್ಡಾಯ

ಬೆಳೆ ವಿಮೆ ನೋಂದಣಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ, ಕೃಷಿ ಉತ್ಪನ್ನ ಮಾರಾಟ ಮಾಡಲು ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು ರೈತರ ಗುರುತಿನ ಸಂಖ್ಯೆ (ಎಫ್‌ಐಡಿ) ಕಡ್ಡಾಯವಾಗಿದೆ. ಆದ್ದರಿಂದ ಎಫ್‌ಐಡಿ (ರೈತರ ಗುರುತಿನ ಸಂಖ್ಯೆ) ಮಾಡಿಸದ ರೈತರು ಕೂಡಲೇ ಕೃಷಿ ಅಥವಾ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ತಮ್ಮ ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಪಾಸ್‌ಬುಕ್, ಮೊಬೈಲ್ ಸಂಖ್ಯೆಯೊಂದಿಗೆ ತೆರಳಿ ನೋಂದಣಿ ಮಾಡಿಸಿ ಎಫ್‌ಐಡಿ ಸಂಖ್ಯೆ ಪಡೆಯಬೇಕು.

Crop Compensation For Farmers
Image Credit: TV9 Hindi

ಜಮೀನಿನ ಸರ್ವೇ ನಂಬರ್ ಅನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು

ರೈತರು ದಾಖಲಿಸಿದ ಜಮೀನಿನ ವಿಸ್ತೀರ್ಣಗಳಿಗೆ ಮಾತ್ರ ಸರ್ಕಾರದ ಪರಿಹಾರ ಸೌಲಭ್ಯ ದೊರೆಯುವುದರಿಂದ ರೈತ ಬಾಂಧವರು ತಾವು ಹೊಂದಿರುವ ಎಲ್ಲಾ ಜಮೀನಿನ ಸರ್ವೆ ನಂಬರಗಳನ್ನು, ವಿಸ್ತೀರ್ಣಗಳನ್ನು ಕೂಡಲೇ ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ/ತೋಟಗಾರಿಕೆ ಇಲಾಖೆ ಕಚೇರಿಗೆ ಸಂಪರ್ಕಿಸಬೇಕು ಎಂದು ಸರ್ಕಾರ ಆದೇಶಿಸಿದೆ.

Leave A Reply

Your email address will not be published.