David Warner: ವಿಶ್ವಕಪ್ ಗೆದ್ದ ಬೆನ್ನಲ್ಲೇ ಭಾರತೀಯರಿಗೆ ಬೇಸರದ ಕ್ಷಮೆ ಕೇಳಿದ ಡೇವಿಡ್ ವಾರ್ನರ್, ಮೆಚ್ಚಿದ ಭಾರತೀಯರು.

ಭಾರತೀಯರಲ್ಲಿ ಕ್ಷಮೆ ಕೇಳಿದ ಡೇವಿಡ್ ವಾರ್ನರ್.

David Warner Apologize Post: ಏಕದಿನ ವಿಶ್ವಕಪ್ ಫೈನಲ್ ಪಂದ್ಯ ನವೆಂಬರ್ 19 , 2023 ರಂದು ಅಹಮದಾಬಾದ್‌ನ ಪ್ರತಿಷ್ಠಿತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡ ಹಾಗು ಆಸ್ಟ್ರೇಲಿಯಾ ತಂಡದ ನಡುವೆ ನಡೆಯಿತು. ಈ ಪಂದ್ಯ ಬಹಳ ರೋಚಕವಾಗಿದ್ದು, ಭಾರತ ತಂಡ ಹೀನಾಯವಾಗಿ ಸೋಲನ್ನು ಕಂಡು ಭಾರತೀಯರ ಬೇಸರಕ್ಕೆ ಕಾರಣರಾದರು.

ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಭಾರತೀಯರಿಗೆ ಈ ಸೋಲು ಒಪ್ಪಿಕೊಳ್ಳಲು ಸಾಧ್ಯ ಆಗಲಿಲ್ಲ. ಯಾಕೆಂದರೆ ಬಹಳ ವರ್ಷಗಳ ಕನಸು ವಿಶ್ವಕಪ್ ಆಗಿತ್ತು. ಭಾರತವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ 2023 ಪ್ರಶಸ್ತಿಯನ್ನು ಗೆದ್ದುಕೊಂಡಿತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಆರನೇ ಬಾರಿಗೆ ಈ ಟ್ರೋಫಿ ಗೆದ್ದಿದೆ.

David Warner Apologize Post
Image Credit: News 18

ಏಕದಿನ ವಿಶ್ವಕಪ್ ಕನಸು ನನಸಾಗಿಲ್ಲ

2011 ರಿಂದ ಟೀಮ್ ಇಂಡಿಯಾ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ಕೊನೆಯದಾಗಿ 2013ರಲ್ಲಿ ಧೋನಿ ನಾಯಕತ್ವದಲ್ಲಿ ಐಸಿಸಿ (ಚಾಂಪಿಯನ್ಸ್ ಟ್ರೋಫಿ) ಟ್ರೋಫಿ ಗೆದ್ದಿತ್ತು. ಇದು ತಂಡದ ಕೊನೆಯ ಐಸಿಸಿ ಪ್ರಶಸ್ತಿಯಾಗಿತ್ತು. ಅಂದಿನಿಂದ ಇಂದಿನವರೆಗೂ ಐಸಿಸಿ ಪ್ರಶಸ್ತಿ ಗೆಲ್ಲಲು ಟೀಂ ಇಂಡಿಯಾಕ್ಕೆ ಸಾಧ್ಯವಾಗಿಲ್ಲ. 2023ರ ವಿಶ್ವಕಪ್ ಫೈನಲ್‌’ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್‌’ಗಳ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ ಮತ್ತೊಮ್ಮೆ ತಂಡದ ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ.

ನನ್ನನ್ನು ಕ್ಷಮಿಸಿ ಎಂದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್

ಡೇವಿಡ್ ವಾರ್ನರ್ ಅವರನ್ನು ಟ್ಯಾಗ್ ಮಾಡುವ ಮೂಲಕ ಅಭಿಮಾನಿಯೊಬ್ಬರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘ಎಕ್ಸ್‌’ನಲ್ಲಿ “ವಾರ್ನರ್! ನೀವು ಕೋಟ್ಯಂತರ ಭಾರತೀಯರ ಹೃದಯವನ್ನು ಒಡೆದಿದ್ದೀರಿ” ಎಂದು ಬರೆದಿದ್ದರು. ಈ ಪೋಸ್ಟ್‌’ಗೆ ಪ್ರತಿಕ್ರಿಯಿಸಿದ ವಾರ್ನರ್, ” ನನ್ನನ್ನು ಕ್ಷಮಿಸಿ, ಇದು ಕೇವಲ ಉತ್ತಮ ಪಂದ್ಯವಾಗಿತ್ತು ಅಷ್ಟೇ. ಅಲ್ಲಿನ ವಾತಾವರಣವೂ ನೋಡಲು ಚೆನ್ನಾಗಿತ್ತು. ಎಲ್ಲರಿಗೂ ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದಾರೆ ಹೀಗೆ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರು ಪೋಸ್ಟ್ ಒಂದನ್ನು ಶೇರ್ ಮಾಡಿದ್ದು, ಅದರಲ್ಲಿ ಅವರು ಕ್ಷಮೆಯಾಚಿಸುತ್ತಿದ್ದಾರೆ.

ಟಿ20 ವಿಶ್ವಕಪ್ ಮೇಲೆ ಭಾರತೀಯರ ಗಮನ

ಟೀಮ್ ಇಂಡಿಯಾ ಮುಂದಿನ ICC ಈವೆಂಟ್‌’ಗೆ ಅಂದರೆ ICC T20 ವಿಶ್ವಕಪ್‌’ಗೆ ತಯಾರಿಯನ್ನು ಪ್ರಾರಂಭಿಸಬೇಕಾಗಿದೆ. ಟಿ20 ವಿಶ್ವಕಪ್ ಮುಂದಿನ ವರ್ಷ ಅಂದರೆ 2024ರಲ್ಲಿ ನಡೆಯಲಿದೆ. 2024ರ ಟಿ20 ವಿಶ್ವಕಪ್‌’ಗೆ ಅರ್ಹತೆ ಪಡೆದ ತಂಡಗಳೆಂದರೆ ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನೆದರ್‌’ಲ್ಯಾಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಐರ್ಲೆಂಡ್, ಸ್ಕಾಟ್‌ಲ್ಯಾಂಡ್, ಪಪುವಾ ನ್ಯೂಗಿನಿಯಾ, ಕೆನಡಾ, ನೇಪಾಳ, ಓಮನ್, ಯುನೈಟೆಡ್ ಸ್ಟೇಟ್ಸ್, ವೆಸ್ಟ್ ಇಂಡೀಸ್. ಈ ಪಂದ್ಯಾವಳಿಯನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಮಾತ್ರ ಆಡಲಾಗುತ್ತಿದೆ. ಇದರ ಹೋಸ್ಟಿಂಗ್ ಅನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ವೆಸ್ಟ್ ಇಂಡೀಸ್’ಗೆ ನೀಡಲಾಗಿದೆ.

Leave A Reply

Your email address will not be published.