Deepika Padukone: ಒಬ್ಬರನ್ನ ಒಬ್ಬರು ಪ್ರೀತಿಮಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ದೀಪಿಕಾ ಮತ್ತು ವಿಜಯ್ ಮಲಗ್ಯಾ ಮಗ ದೂರವಾಗಿದ್ದು ಯಾಕೆ…?

ನಟಿ ದೀಪಿಕಾ ಪಡುಕೋಣೆ ಹಾಗು ಸಿದ್ದಾರ್ಥ್ ಮಲ್ಯ ಲವ್ ಸ್ಟೋರಿ ರಿವೀಲ್, ಇಬ್ಬರು ದೂರವಾಗಲು ಕಾರಣ ಇಲ್ಲಿದೆ.

Deepika Padukone And Siddharth Mallya: ನಟಿ ದೀಪಿಕಾ ಪಡುಕೋಣೆ (Deepika Padukone) ಹಾಗು ನಟ ರಣವೀರ್ ಸಿಂಗ್ ಅವರ ಜೋಡಿ ಆಗಾಗ ಸುದ್ದಿಯಲ್ಲಿರುತ್ತದೆ. ಇತೀಚೆಗಷ್ಟೇ ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಪತಿ ರಣವೀರ್ ಸಿಂಗ್ ಜೊತೆ ದೀಪಿಕಾ ಪಡುಕೋಣೆ ಆಗಮಿಸಿದ್ದರು. ಈ ವೇಳೆ ಅವರು ರಣವೀರ್ ಸಿಂಗ್ ಜೊತೆ ಡೇಟ್ ಮಾಡುವಾಗ ಬೇರೆಯವರ ಜೊತೆ ಸುತ್ತಾಡಿದ್ದನ್ನು ಒಪ್ಪಿಕೊಂಡಿದ್ದರು.

ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ದೀಪಿಕಾ ಪಡುಕೋಣೆ ಅವರನ್ನು ಸಾಕಷ್ಟು ಜನರು ಟ್ರೋಲ್ ಮಾಡಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ (Siddarth Malya) ಹೆಸರು ಈ ಮೊದಲು ನಟಿ ದೀಪಿಕಾ ಪಡುಕೋಣೆ ಜತೆ ತಳುಕು ಹಾಕಿಕೊಂಡಿತ್ತು. ದೀಪಿಕಾ ಮತ್ತು ಸಿದ್ದಾರ್ಥ್ ಸುತ್ತಾಟ ನಡೆಸಿದ್ದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Deepika Padukone And Siddharth Mallya
Image Credit: Odishabytes

ಸಿದ್ದಾರ್ಥ್ ಮಲ್ಯ ಹಾಗು ನಟಿ ದೀಪಿಕಾ ಪಡುಕೋಣೆ ಪ್ರೀತಿ ಕಥೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಮಾಲೀಕ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ ಹೆಸರು ಈ ಮೊದಲು ನಟಿ ದೀಪಿಕಾ ಪಡುಕೋಣೆ ಜತೆ ತಳುಕು ಹಾಕಿಕೊಂಡಿತ್ತು. ಇವರಿಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದು, ಡೇಟಿಂಗ್ ನಲ್ಲಿ ಇದ್ದಿದ್ದರು. ಐಪಿಎಲ್ ಪಂದ್ಯದ ವೇಳೆ ಇಬ್ಬರೂ ಸ್ಟೇಡಿಯಂನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ದೀಪಿಕಾ ಮತ್ತು ಸಿದ್ದಾರ್ಥ್ ಸಂಬಂಧ ಅಂದು ಹೆಚ್ಚು ಚರ್ಚೆಯಾಗಿತ್ತು. ಐಪಿಎಲ್ ಪಾರ್ಟಿಗಳು ಮತ್ತು ಇತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಂಡರು.

ಸಿದ್ದಾರ್ಥ್ ಮಲ್ಯ ಹಾಗು ಜಾಸ್ಮಿನ್ ನಿಶ್ಚಿತಾರ್ಥ
ಸಿದ್ದಾರ್ಥ್ ಮಲ್ಯ ಅವರು ದೀಪಿಕಾ ಪಡುಕೋಣೆ ಅವರ ಜೊತೆ ಬ್ರೇಕ್ ಅಪ್ ಮಾಡಿಕೊಂಡ ನಂತರ ಇದೀಗ ಸಿದ್ದಾರ್ಥ್ ಹ್ಯಾಲೋವೀನ್ ಪಾರ್ಟಿಯಲ್ಲಿ ಗೆಳತಿ ಜಾಸ್ಮಿನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸಿದ್ದಾರ್ಥ್ ಪೋಸ್ಟ್ ಮಾಡಿದ ಮೊದಲ ಫೋಟೋದಲ್ಲಿ, ಅವರು ತಮ್ಮ ಗೆಳತಿಗೆ ಪ್ರಪೋಸ್ ಮಾಡುತ್ತಿದ್ದಾರೆ. ಎರಡನೇ ಫೋಟೋದಲ್ಲಿ, ಜಾಸ್ಮಿನ್ ಗೆ ವಜ್ರದ ಉಂಗುರವನ್ನು ತೋರಿಸುತ್ತಿದ್ದಾರೆ. ಇಬ್ಬರ ಮುಖದಲ್ಲೂ ಸಂತೋಷ ಸ್ಪಷ್ಟವಾಗಿ ಗೋಚರಿಸುತ್ತದೆ. ಹ್ಯಾಲೋವೀನ್ ಪಾರ್ಟಿಯಲ್ಲಿ ಸಿದ್ದಾರ್ಥ್ ಕುಂಬಳಕಾಯಿ ವೇಷಭೂಷಣವನ್ನು ಧರಿಸಿದ್ದರು. ಈ ಫೋಟೋಗೆ ಅನೇಕ ಸೆಲೆಬ್ರಿಟಿಗಳು ಲೈಕ್ ಒತ್ತಿದ್ದಾರೆ.

 

View this post on Instagram

 

A post shared by jasmine (@jassofiaa)

ನಟಿ ದೀಪಿಕಾ ಪಡುಕೋಣೆ ಮತ್ತು ಸಿದ್ಧಾರ್ಥ್ ಮಲ್ಯ ಬ್ರೇಕ್ ಅಪ್ ಕಥೆ

ದೀಪಿಕಾ ಮತ್ತು ಸಿದ್ಧಾರ್ಥ್ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಬ್ರೇಕಪ್ ನಂತರ ನೀಡಿದ ಸಂದರ್ಶನವೊಂದರಲ್ಲಿ, ‘ಸಿದ್ದಾರ್ಥ್ ನನ್ನೊಂದಿಗೆ ತುಂಬಾ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಕಳೆದ ಬಾರಿ ನಾವು ಡಿನ್ನರ್ ಡೇಟ್‌ಗೆ ಹೋದಾಗ, ಅವರು ಬಿಲ್ ಪಾವತಿಸಲು ನನ್ನನ್ನು ಕೇಳಿದರು. ಇದು ನನಗೆ ತುಂಬಾ ಮುಜುಗರ ತಂದಿತ್ತು’ ಎಂದು ದೀಪಿಕಾ ಹೇಳಿದ್ದರು. ಇದರ ನಂತರ ನಮ್ಮಿಬ್ಬರ ನಡುವೆ ಮನಸ್ತಾಪವಾಗಿ ಬ್ರೇಕ್ ಅಪ್ ಮಾಡಿಕೊಂಡೆವು ಎಂದು ಹೇಳಿಕೆ ನೀಡಿದರು.

Leave A Reply

Your email address will not be published.