Dhruva Sarja: ನಾರ್ಮಲ್ ಡೆಲಿವರು ಭಯಾನಕ ಅನುಭವ ಹಂಚಿಕೊಂಡ ಧ್ರುವ ಸರ್ಜಾ, ಹೆಣ್ಣು ಮಕ್ಕಳ ಕಷ್ಟದ ಧ್ರುವ ಮಾತು.
ನಟ ಧ್ರುವ ಹಾಗು ಪ್ರೇರಣಾ ರವರಿಗೆ ಮಗು ಜನನ, ಸರ್ಜಾ ಕುಟುಂಬದಲ್ಲಿ ಸಂಭ್ರಮ.
Dhruva Sarja New Baby: ನಟ ಧ್ರುವ ಸರ್ಜಾ (Dhruva Sarja) ಮತ್ತು ಅವರ ಪತ್ನಿ ಪ್ರೇರಣಾ ತಮ್ಮ ಎರಡನೇ ಮಗುವನ್ನು ಗಣೇಶ ಚತುರ್ಥಿಯ ದಿನದಂದು ಸ್ವಾಗತಿಸಿದ್ದಾರೆ. ಗಂಡು ಮಗುವಿಗೆ ಪ್ರೇರಣಾ ಜನ್ಮ ನೀಡಿದ್ದಾರೆ. ನಾರ್ಮಲ್ ಡೆಲವರಿ ಆಗಿದ್ದು, ತಾಯಿ ಮಗುವನ್ನು ನೋಡಿ ಬಂದ ದ್ರುವ ಸರ್ಜಾ ಮೀಡಿಯಾ ಮುಂದೆ ಸಂತೋಷವನ್ನು ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಒಳ್ಳೆಯ ಸುದ್ದಿಯಿಂದ ಸಂತಸಗೊಂಡಿದ್ದಾರೆ. ವರಮಹಾಲಕ್ಷ್ಮಿ ಪೂಜೆಯ ಶುಭ ಸಂದರ್ಭದಲ್ಲಿ ವಿಡಿಯೋದೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸುದ್ದಿಯನ್ನು ಎಲ್ಲರಿಗೂ ತಿಳಿಸಿದ್ದರು. ಗಂಡು ಮಗುವಿನ ಆಗಮನದಿಂದ ಸರ್ಜಾ ಕುಟುಂದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಚಿರು ರೂಪದಲ್ಲಿ ಮಗು ದ್ರುವರವರ ಮಡಿಲು ಸೇರಿದೆ
ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಚಿರು ರೂಪದಲ್ಲಿ ದ್ರುವ ಸರ್ಜಾರ ಮಗ ಅವರ ಮಡಿಲು ಸೇರಿದ್ದಾರೆ ಎನ್ನುವ ಮಾತಿಗೆ ಹಾಗೆ ಆಗಲಿ ಎಂದರು ಹಾಗೆ ನಮ್ಮ ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಸಂಭ್ರಮ, ಮೊದಲು ರಾಯನ್ ಹಾಗೆ ನಂತರ ನನ್ನ ಮಗಳು ಈಗ ಈ ಮಗು ಎಂದಿದ್ದಾರೆ. ನಮ್ಮ ಮನೆಯಲ್ಲಿ ಮೂರೂ ಮಕ್ಕಳು ಹಾಗೆ ನನ್ನ ಮಗಳಿಗೆ ಇನ್ನು ಹೆಸರು ಇಟ್ಟಿಲ್ಲ. ತಾಯಿ ಗರ್ಭಿಣಿಯಾಗಿದ್ದಾಗ ನಾಮಕರಣ ಮಾಡಬಾರದು ಅಂತ ಹೇಳಿರುವುದರಿಂದ ಎರಡು ಮಕ್ಕಳ ನಾಮಕರಣ ಒಟ್ಟಿಗೆ ಮಾಡುತ್ತೇವೆ ಎಂದಿದ್ದಾರೆ.
ಅಣ್ಣನ ತುಂಬ ಮಿಸ್ ಮಾಡಿಕೊಳ್ಳುತ್ತೇನೆ
ಮಗು ಹುಟ್ಟಿದಾಗ ಮೊದಲು ಅಣ್ಣನಿಗೆ ತೋರಿಸುತ್ತಿದೆ ಆದ್ರೆ ಅದು ಸಾಧ್ಯವಿಲ್ಲ ಎಂದು ಭಾವುಕರಾದರು. ಹಾಗೆಯೆ ಮೊದಲು ಅರ್ಜುನ್ ಮಾವನಿಗೆ ವಿಡಿಯೋ ಕಾಲ್ ಮಾಡಿ ಮಗುವನ್ನು ತೋರಿಸಿದೆ ಎಂದರು. ನಾನು ಅಣ್ಣನ ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಹಾಗೆ ಮೂರೂ ವರ್ಷಗಳಿಂದ ಅಣ್ಣನ ಸಮಾಧಿ ಬಳಿ ಮಲಗುತ್ತಿದೇನೆ ಅದನ್ನೆ ಯಾರೋ ವಿಡಿಯೋ ಮಾಡಿದ್ದಾರೆ. ನಾನು ಅಣ್ಣನ ಎಷ್ಟೇ ಮಿಸ್ ಮಾಡಿಕೊಂಡ್ರು ತೋರಿಸಿಕೊಳ್ಳಲ್ಲ ಯಾಕೆಂದರೆ ನಾನು ಭಾವುಕರಾದರೆ ಅಪ್ಪ ಅಮ್ಮ ಬೇಜಾರು ಮಾಡಿಕೊಳ್ಳುತ್ತಾರೆ ಎಂದು ನೋವನ್ನು ಹೇಳಿಕೊಂಡಿದ್ದಾರೆ.
ಹಬ್ಬದ ದಿನ ಹಾಗು ಅನೇಕ ಗಣ್ಯರ ಹುಟ್ಟಿದ ದಿನ ಎಂದು ಸಂತಸಪಟ್ಟರು
ಸೆಪ್ಟೆಂಬರ್ 18 ಗೌರಿ ಗಣೇಶ ಹಬ್ಬ ಹಾಗು ಅನೇಕ ಗಣ್ಯರ ಹುಟ್ಟಿದ ದಿನ ನನ್ನ ಮಗ ಹುಟ್ಟಿದ್ದು ತುಂಬ ಸಂತೋಷ ವಾಗಿದೆ. ಗಂಡಾಗಲಿ , ಹೆಣ್ಣಾಗಲಿ ಆರೋಗ್ಯವಾಗಿ ಮಗು ಹುಟ್ಟಿದರೆ ಸಾಕು ಅಂತ ಇದ್ದೆ, ಈಗ ಗಂಡು ಮಗು ಆಗಿದೆ ತಾಯಿ ಮಗು ಆರೋಗ್ಯವಾಗಿದ್ದರೆ. ನಾರ್ಮರ್ ಡೆಲವರಿ ಕಿರುಚಾಟ ಇರುತ್ತೆ ತುಂಬಾ ಭಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ .