Car Fuel: ಡೀಸೆಲ್ ಮತ್ತು ಪೆಟ್ರೋಲ್ ಕಾರಿನಲ್ಲಿ ಯಾವ ಕಾರ್ ಬೆಸ್ಟ್, ಹೊಸ ಕಾರ್ ಖರೀದಿಸುವ ಮುನ್ನ ಎಚ್ಚರ.
ಹೊಸ ಕಾರ್ ಖರೀದಿ ಮಾಡುವವರ ಗಮನಕ್ಕೆ, ಡೀಸೆಲ್ ಮತ್ತು ಪೆಟ್ರೋಲ್ ಕಾರಿನಲ್ಲಿ ಯಾವುದು ಬೆಸ್ಟ್.
Diesel Car And Petrol Car: ಇಂದಿನ ಯುವ ಪೀಳಿಗೆಯವರು ಕಾರು ಪ್ರಿಯರಾಗಿದ್ದಾರೆ. ಯಾವುದೇ ಹೊಸ ಕಾರು ಮಾರುಕಟ್ಟೆಗೆ ಬಂದರು ಅದರ ಲುಕ್, ಬೆಲೆ, ಮೈಲೇಜ್ ಗೆ ಹೆಚ್ಚಿನ ಗಮನ ಕೊಡುತ್ತಾರೆ. ಅಷ್ಟೇ ಅಲ್ಲದೆ ಇನ್ನೊಂದು ಪ್ರಮುಖ ವಿಷಯವೇನೆಂದರೆ ಡೀಸೆಲ್ ಕಾರು ಖರೀದಿ ಮಾಡುವುದೋ ಅಥವಾ ಪೆಟ್ರೋಲ್ ಕಾರು ಖರೀದಿ ಮಾಡುವುದೋ ಎಂಬ ಅನುಮಾನ.
ಇವೆರೆಡರಲ್ಲಿ ಯಾವ ಕಾರು ಬೆಸ್ಟ್ ಎಂಬ ಗೊಂದಲ ಈಗಿನವರಿಗೆ ಹೆಚ್ಚಾಗಿದೆ. ಕೇವಲ ಕಾರಿನ ಲುಕ್ ನೋಡಿ ಕಾರು ಖರೀದಿಸಲು ಸಾಧ್ಯವಿಲ್ಲ ಹಾಗಾಗಿ ಇಂತಹ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ಹೊಸ ಕಾರು ಖರೀದಿಸುವಾಗ, ಡೀಸೆಲ್ ಎಂಜಿನ್ ಅಥವಾ ಪೆಟ್ರೋಲ್ ಎಂಜಿನ್ ಎಂಬ ಆಯ್ಕೆ ಯಲ್ಲಿ ಗೊಂದಲ ಇರುವವರಿಗೆ ಇಲ್ಲಿನ ಮಾಹಿತಿ ಉಪಯುಕ್ತಕರವಾಗಲಿದೆ .ಡೀಸೆಲ್ ಕಾರುಗಳಿಗಿಂತ ಪೆಟ್ರೋಲ್ ಕಾರುಗಳು ಏಕೆ ಉತ್ತಮ ಎಂಬುದನ್ನು ಇಲ್ಲಿ ನೋಡೋಣ.

ಡೀಸೆಲ್ ಕಾರುಗಳು ಕಿರಿಕಿರಿಗೆ ಕಾರಣವಾಗುತ್ತದೆ
ಡೀಸೆಲ್ ಕಾರುಗಳನ್ನು ಹೊಂದಿದವರಿಗೆ ಅದರ ಹೆಚ್ಚಿನ ಶಬ್ದ ಕಿರಿಕಿರಿ ಮಾಡಬಹುದು. ಡಿಸೇಲ್ ಕಾರಿನಲ್ಲಿ ಪ್ರಯಾಣ ಮಾಡುವಾಗ ಅಧಿಕ ಶಬ್ದವನ್ನು ಉಂಟು ಮಾಡುತ್ತದೆ. ಇದ್ದರಿಂದ ಪ್ರಯಾಣಿಸುವವರಿಗೆ ಅಧಿಕ ರಕ್ತದ ಒತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಖಿನ್ನತೆಯಂತಹ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳ ಬಹುದು ಹೆಚ್ಚಿನ ಸಂಕೋಚನ ಅನುಪಾತದಿಂದಾಗಿ ಡೀಸೆಲ್ ಎಂಜಿನ್‌ಗಳು ಇಗ್ನಿಷನ್ ಚೇಂಬರ್ನಲ್ಲಿ ಸಾಕಷ್ಟು ಶಬ್ದವನ್ನು ಮಾಡುತ್ತವೆ. ಹಾಗು ಡೀಸೆಲ್ ಕಾರುಗಳು ಶಬ್ದ ಮಾಲಿನ್ಯಕ್ಕೂ ಕಾರಣವಾಗಿದೆ.
ಪರಿಸರವನ್ನು ಕಲುಷಿತಗೊಳಿಸುತ್ತದೆ.
ಡೀಸೆಲ್ ಕಾರುಗಳು ಪರಿಸರವನ್ನೂ ಕಲುಷಿತಗೊಳಿಸುತ್ತವೆ. ಪೆಟ್ರೋಲ್ ಕಾರುಗಳು ಪರಿಸರವನ್ನು ಕಲುಷಿತಗೊಳಿಸುವುದು ಕಡಿಮೆ. BS-6 ಮಾನದಂಡಗಳಿಂದಾಗಿ ಪೆಟ್ರೋಲ್ ಎಂಜಿನ್‌ಗಳು ಈಗ ಪರಿಸರವನ್ನು ಕಡಿಮೆ ಕಲುಷಿತಗೊಳಿಸುತ್ತವೆ.ಡೀಸೆಲ್ ಎಂಜಿನ್‌ಗಳು ಪರಿಸರಕ್ಕೆ ಹಾನಿಕಾರಕವಾದ ಬಹಳಷ್ಟು ಅನಿಲಗಳನ್ನು ಹೊರಸೂಸುತ್ತವೆ.

ಪೆಟ್ರೋಲ್ ಕಾರುಗಳ ಬೆಲೆ ಕಡಿಮೆ
ಡೀಸೆಲ್ ಕಾರುಗಳಿಗೆ ಹೋಲಿಸಿದರೆ ಪೆಟ್ರೋಲ್ ಕಾರುಗಳ ಬೆಲೆ ಕಡಿಮೆ ಹಾಗು ಪೆಟ್ರೋಲ್ ಕಾರುಗಳ ಸರ್ವಿಸ್ ವೆಚ್ಚವು ಡೀಸೆಲ್ ಕಾರಿಗಿಂತ ಬಹಳ ಕಡಿಮೆ ಆಗಿರುತ್ತದೆ. ಹಾಗು ಪೆಟ್ರೋಲ್ ಕಾರನ್ನು ಸಿಎನ್‌ಜಿಗೆ ಪರಿವರ್ತಿಸಲು ಯಾವುದೇ ಪ್ರಮುಖ ಮಾರ್ಪಾಡುಗಳ ಅಗತ್ಯವಿಲ್ಲ. ಡೀಸೆಲ್ ಕಾರನ್ನು ಸಿಎನ್‌ಜಿಗೆ ಪರಿವರ್ತಿಸಲು ಸಾಕಷ್ಟು ಮಾರ್ಪಾಡುಗಳ ಅಗತ್ಯವಿದೆ. ಪೆಟ್ರೋಲ್ ಕಾರುಗಳನ್ನು ಸಿಎನ್‌ಜಿಗೆ ಪರಿವರ್ತಿಸುವ ವೆಚ್ಚಕ್ಕಿಂತ ಡೀಸೆಲ್ ಕಾರುಗಳನ್ನು ಸಿಎನ್‌ಜಿಗೆ ಪರಿವರ್ತಿಸುವ ವೆಚ್ಚ ಹೆಚ್ಚು ಎಂಬುದು ಗಮನಿಸಬೇಕಾದ ಸಂಗತಿ.
ಕಂಪನಿಗಳು ಡೀಸೆಲ್ ಕಾರುಗಳನ್ನುಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ
ಮಾರುತಿ ಸುಜುಕಿ ಪ್ರಸ್ತುತ ಡೀಸೆಲ್ ಎಂಜಿನ್ ಕಾರುಗಳನ್ನು ಮಾರಾಟ ಮಾಡುತ್ತಿಲ್ಲ. ಯಾಕೆಂದರೆ BS-6 ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ಸಣ್ಣ ಡೀಸೆಲ್ ಎಂಜಿನ್‌ಗಳನ್ನು ನವೀಕರಿಸುವುದು ದುಬಾರಿಯಾಗಿದೆ. ಈ ವೆಚ್ಚವು ಡೀಸೆಲ್ ಕಾರುಗಳ ಬೆಲೆಯಲ್ಲಿ ಪ್ರತಿಫಲಿಸುತ್ತದೆ. ಡೀಸೆಲ್ ಎಂಜಿನ್ ಕಾರುಗಳನ್ನು ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡಿದರೆ ಲಾಭ ಗಳಿಸಲು ಸಾಧ್ಯವಿಲ್ಲ ಹಾಗಾಗಿ ಅನೇಕ ಪ್ರಮುಖ ಕಂಪನಿಗಳು ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ನಿಲ್ಲಿಸಿವೆ.