Digital Literacy: ರಾಜ್ಯದ ಗ್ರಾಮೀಣ ಭಾಗದ ಜನರಿಗಾಗಿ ಹೊಸ ಯೋಜನೆ ಆರಂಭ, ಕಾಂಗ್ರೆಸ್ ಇನ್ನೊಂದು ಘೋಷಣೆ.

ಗ್ರಾಮೀಣ ಭಾಗದ ಜನರಿಗಾಗಿ ಇನ್ನೊಂದು ಹೊಸ ಯೋಜನೆಗೆ ಚಾಲನೆ ನೀಡಿದ ಸರ್ಕಾರ.

Digital Literacy Programme In Rural Areas: ರಾಜ್ಯ ಸರ್ಕಾರವು ಗ್ರಾಮೀಣ ಜನತೆಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಎಷ್ಟೋ ಗ್ರಾಮೀಣ ಪ್ರದೇಶದ ಜನರಿಗೆ ಡಿಜಿಟಲ್ ಬಗ್ಗೆ ಸ್ವಲ್ಪವೂ ಮಾಹಿತಿ ಇಲ್ಲ. ಇಂದಿನ ತಂತ್ರಜ್ಞಾನ ಎಷ್ಟು ಮುಂದುವರೆದಿದೆ, ಅವುಗಳಿಂದ ಏನು ಪ್ರಯೋಜನ ಇದೆ ಎನ್ನುವ ಕುರಿತು ಗ್ರಾಮೀಣ ಪ್ರದೇಶದ ಜನರಿಗೆ ತಿಳುವಳಿಕೆ ನೀಡುವುದು ಬಹಳ ಮುಖ್ಯ.

ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ 35 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಸಾಧಿಸಲು ರಾಜ್ಯ ಸರ್ಕಾರ ಗುರಿ ಹೊಂದಿದೆ. ಇದರ ಮೂಲಕ ಗ್ರಾಮೀಣ ಪ್ರದೇಶದ ಜನರಿಗೂ ಹಲವು ವಿಷಯಗಳ ಬಗ್ಗೆ ಮಾಹಿತಿ ದೊರೆತಂತಾಗುತ್ತದೆ.                                                                 

Digital Literacy Programme In Rural Areas
Image Credit: Defindia

35 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಡಿಜಿಟಲ್ ಸಾಕ್ಷರತೆ

ರಾಜ್ಯ ಸರ್ಕಾರ ಒಂದು ಉತ್ತಮ ಯೋಜನೆಯ ಮೂಲಕ ಜನರಲ್ಲಿ ತಿಳುವಳಕೆಯನ್ನು ಮೂಡಿಸುತ್ತಿದೆ. ಪ್ರತಿ ಗ್ರಾಮೀಣ ಪ್ರದೇಶದ ಜನರು ಡಿಜಿಟಲ್ ಬಗ್ಗೆ ಜ್ಞಾನ ಹೊಂದಬೇಕು ಎನ್ನುವುದು ಈ ಯೋಜನೆಯ ಉದ್ದೇಶ. ಗ್ರಾಮೀಣ ಅಭಿವೃದ್ಧಿ ಪಂಚಾಯತ್‌ ರಾಜ್‌ ಇಲಾಖೆಯು ಗ್ರಾಮಗಳು ಅಭಿವೃದ್ಧಿ ಆಗುವುದರ ಜೊತೆಗೆ ಗ್ರಾಮಸ್ಥರು ನಿತ್ಯದ ಚಟುವಟಿಕೆಗಳಿಗೆ ಡಿಜಿಟಲ್‌ ತಿಳುವಳಿಕೆ ಹೊಂದಬೇಕು ಎಂಬ ಉದ್ದೇಶದಿಂದ ಆಯ್ದ 35 ಗ್ರಾಮ ಪಂಚಾಯಿತಿಗಳಲ್ಲಿ ‘ಡಿಜಿಟಲ್‌ ಸಾಕ್ಷರತೆ’ ತರಬೇತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ.

digital literacy training
Image Credit: Digitallearning

ಸ್ವಯಂ ಸೇವಕರು ಮೂಲಕ ತರಬೇತಿ ನೀಡಲಾಗುವುದು

ಗ್ರಾಮದಲ್ಲಿರುವ ಪದವೀಧರರನ್ನು ಗುರುತಿಸಿ , ವಾರ್ಡ್ ಹಂತದಲ್ಲಿ ಸ್ವಯಂ ಸೇವಕರನ್ನಾಗಿ ನೇಮಿಸಿಕೊಂಡು ಕಾರ್ಯಕ್ರಮದ ಮಾಹಿತಿ ನೀಡಲಾಗುತ್ತದೆ. ಸ್ವಯಂ ಸೇವಕರು ತಮ್ಮ ಗ್ರಾಮಸ್ಥರಿಗೆ ಡಿಜಿಟಲ್ ತರಬೇತಿ ನೀಡುತ್ತಾರೆ. ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಮಾನಿಟರ್, ಇಂಟರ್ ನೆಟ್ ಸೌಲಭ್ಯವನ್ನು ಗ್ರಂಥಾಲಯಗಳಿಗೆ ಕಲ್ಪಿಸಲಾಗಿದೆ. ಈ ಎಲ್ಲಾ ಸೌಲಭ್ಯ ಗಳನ್ನೂ ಉಪಯೋಗಿಸಿಕೊಂಡು ಅವುಗಳ ಸಂಪೂರ್ಣ ತರಬೇತಿಯನ್ನು ಪದವೀಧರ ಸ್ವಯಂ ಸೇವಕರು ತಮ್ಮ ಗ್ರಾಮದ ಜನತೆಗೆ ನೀಡುವುದರಿಂದ ಗ್ರಾಮಸ್ಥರಿಗೆ ಅದರ ಬಗ್ಗೆ ತಿಳುವಳಿಕೆ ಮೂಡುವುದು.

Leave A Reply

Your email address will not be published.