Director Atlee: ಜವಾನ್ ಚಿತ್ರವನ್ನ ನಿರ್ದೇಶನ ಮಾಡಲು ಅಟ್ಲಿ ಪಡೆದ ಸಂಭಾವನೆ ಎಷ್ಟು…? ದುಬಾರಿ ಸಂಭಾವನೆ.

ಜವಾನ್‌ ಚಿತ್ರವನ್ನು ನಿರ್ದೇಶಿಸಲು ಅಟ್ಲಿ ಪಡೆದಿರುವ ಸಂಭಾವನೆ ಕುರಿತು ಮಾಹಿತಿ ಬಹಿರಂಗವಾಗಿದೆ.

Director Atlee Remuneration For Jawan Movie: ಕಾಲಿವುಡ್‌ನಲ್ಲಿ ಹಲವು ನಿರ್ದೇಶಕರಿದ್ದು ಅವರಲ್ಲಿ ಅಟ್ಲಿ ಕುಮಾರ್‌ (Atlee Kumar) ಕೊಡ ಒಬ್ಬರಾಗಿದ್ದಾರೆ. ಅಟ್ಲಿ ಕುಮಾರ್‌ ಕೆಲವೇ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ವ್ಯಕ್ತಿಯಾಗಿದ್ದಾರೆ. ʼರಾಜಾ ರಾಣಿʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸಿನಿರಂಗ ಪ್ರವೇಶಿಸಿದ ಅಟ್ಲಿ ತಮ್ಮ ಮೊದಲ ಚಿತ್ರದಿಂದಲೇ ಯಶಸ್ಸು ಪಡೆದರು.

ಅದಕ್ಕೂ ಮುನ್ನ ನಿರ್ದೇಶಕ ಶಂಕರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.ನಂತರ ಅಟ್ಲಿ ಕುಮಾರ್‌ ನಟ ವಿಜಯ್ ಅವರ ತೇರಿ, ಮೆರ್ಸಲ್, ಬಿಗಿಲ್ ಚಿತ್ರಗಳನ್ನು ನಿರ್ದೇಶಿಸಿದರು. ಈ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್‌ ಆದವು. ಇದೀಗ ಶಾರುಖ್‌ ಖಾನ್‌ ನಟನೆಯ ‘ಜವಾನ್’ ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದು, ಶುರುವಿನಲ್ಲೇ ಅಬ್ಬರಿಸಿದ್ದಾರೆ.

Director Atlee Remuneration For Jawan Movie
Image Credit: Timesofindia

ಅಟ್ಲಿ ನಿರ್ದೇಶನದ ಚಿತ್ರ ಜವಾನ್
ಬಾಲಿವುಡ್‌ನ ಬಾದ್‌ ಶಾ’ ಶಾರುಖ್ ಖಾನ್ (Shah Rukh Khan) ಅಭಿನಯದ ಅಟ್ಲಿ ನಿರ್ದೇಶನದ ಚಿತ್ರ ಜವಾನ್. ಈ ಚಿತ್ರ ಸೆಪ್ಟೆಂಬರ್ 7 ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಬಿಗಿಲ್’ ಚಿತ್ರದ ನಂತರ ಅಟ್ಲಿ ನಿರ್ದೇಶಿಸುತ್ತಿರುವ ಸಿನಿಮಾ ಜವಾನ್‌. ಹೀಗಾಗಿ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಅಷ್ಟೇ ಅಲ್ಲ, ಜವಾನ್‌ನಲ್ಲಿ ಹಲವು ತಮಿಳು ಕ್ರಿಯೇಟರ್‌ಗಳು ಸಹ ಕೆಲಸ ಮಾಡಿದ್ದಾರೆ. ಹಾಗಾಗಿ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಕಾಯುತ್ತಿದ್ದರು.

Director Atlee Remuneration For Jawan Movie
Image Credit: Tollywood

ನಿರ್ದೇಶನಕ್ಕೆ ಪಡೆದ ಸಂಭಾವನೆ ಎಷ್ಟು
ಇನ್ನು ಜವಾನ್‌ ಚಿತ್ರವನ್ನು ನಿರ್ದೇಶಿಸಲು ಅಟ್ಲಿ ಪಡೆದಿರುವ ಸಂಭಾವನೆ ಕುರಿತು ಮಾಹಿತಿ ಬಹಿರಂಗವಾಗಿದೆ. ಅಟ್ಲಿ ಪ್ರತಿ ಚಿತ್ರಕ್ಕೆ 52 ಕೋಟಿ ಪಡೆಯುತ್ತಾರೆ. ಅದರಂತೆ ತಾವು ನಿರ್ದೇಶಿಸುವ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಹಿಟ್ ಆಗುವಂತೆ ನೋಡಿಕೊಳ್ಳುತ್ತಾರೆ.

ಆದ್ರೆ, ಜವಾನ್ ಚಿತ್ರ ನಿರ್ದೇಶಿಸಲು ಸಂಭಾವನೆ ಕಡಿಮೆ ಮಾಡುವ ಕುರಿತು ಮಾತುಕತೆ ನಡೆದಿತ್ತು ಎನ್ನಲಾಗಿದೆ. ಅದರಂತೆ ಕೇವಲ 30 ಕೋಟಿ ಪಡೆಯುವಂತೆ ಅಟ್ಲಿಗೆ ಕೇಳಿಕೊಳ್ಳಲಾಗಿತ್ತಂತೆ. ಆದರೆ ಅಟ್ಲಿ ಅದಕ್ಕೆ ಒಪ್ಪದ ಹಿನ್ನೆಲೆ ಅವರು ಕೇಳಿದ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.