Directors Remuneration: ಈ ಸ್ಟಾರ್ ನಿರ್ದೇಶಕರು ಒಂದು ಚಿತ್ರಕ್ಕೆ ಪಡೆಯುವ ಸಂಬಳ ಎಷ್ಟು ಗೊತ್ತಾ…? ದುಬಾರಿ ಡೈರೆಕ್ಟರ್ಸ್.
ಈ ಸ್ಟಾರ್ ಡೈರೆಕ್ಟರ್ ಗಳು ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆ ಎಷ್ಟು.
Directors Remuneration: ತೆಲಗು ಚಿತ್ರರಂಗದ ಸೂಪರ್ ಹಿಟ್ ಸಿನಿಮಾ ನೀಡುವ ನಿರ್ದೇಶಕರಲ್ಲಿ ರಾಜಮೌಳಿ ಬೆಸ್ಟ್ ನಿರ್ದೇಶಕರಾಗಿದ್ದು, ಈಗಾಗಲೇ ಅನೇಕ ಸಿನಿಮಾಗಳನ್ನು ಪರಿಚಯಿಸಿದ ಇವರು ಒಂದಕ್ಕೊಂದು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಬಾಹುಬಲಿ ಸಿನಿಮಾವು 2015 ರಲ್ಲಿ ಬಿಡುಗಡೆಯಾಗಿದ್ದು, ಈ ಸಿನಿಮಾದ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಇವರು ಗಳಿಸಿದ್ದಾರೆ. ರಾಜಮೌಳಿಯವರ (S.S Rajamouli) ಎಲ್ಲ ಸಿನಿಮಾಗಳು ಅದ್ಬುತ ಕಥೆ, ವಿಶೇಷ ಥ್ರಿಲ್ ಹಾಗು ಸೂಪರ್ ಸಂಗೀತದೊಂದಿಗೆ ಬಿಡುಗಡೆಗೊಂಡಿದೆ. ತೆಲುಗು ಚಿತ್ರರಂಗದಲ್ಲಿ ನಟರು ಮಾತ್ರವಲ್ಲ ನಿರ್ದೇಶಕರು ಕೂಡ ಈಗ ಟಾಪ್ನಲ್ಲಿದ್ದಾರೆ.
ರಾಜಮೌಳಿ ಯವರು ಸಿನಿಮಾಕ್ಕೆ ಪಡೆಯುವ ಸಂಭಾವನೆ
ಟಾಲಿವುಡ್ ನ ಖ್ಯಾತ ನಿರ್ದೇಶಕ S S ರಾಜಮೌಳಿ ಯವರು ಅನೇಕ ಪ್ಯಾನ್ ಇಂಡಿಯಾ ಸಿನಿಮಾ ನೀಡಿ ಸ್ಟಾರ್ ಡೈರೆಕ್ಟರ್ ಎಂದು ಕರೆಸಿಕೊಂಡಿದ್ದಾರೆ. ಇವರ ನಿರ್ದೇಶನದ ಒಂದು ಸಿನಿಮಾಗೆ ರೂ. 40 ಕೋಟಿ ಜೊತೆಗೆ ಲಾಭದ ಪಾಲು ಪಡೆಯುತ್ತಾರಂತೆ. RRR ಸಿನಿಮಾಗೆ ರೌಜಮೌಳಿ ಸುಮಾರು ರೂ.100 ಕೋಟಿಗೂ ಹೆಚ್ಚು ಹಣ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ತ್ರಿವಿಕ್ರಮ್ ಶ್ರೀನಿವಾಸ್ ಯವರ ಸಿನಿಮಾ ಜರ್ನಿ
ಅಲಾ ವೈಕುಂಠಪುರಂಲು ಬಳಿಕ ಡೈರೆಕ್ಟರ್ ರೇಂಜ್ ತುಂಬಾ ಹೆಚ್ಚಿದೆ. ಅನೇಕ ಹಿಟ್ ಸಿನಿಮಾ ನೀಡಿರುವ ತ್ರಿವಿಕ್ರಮ್, 35 ಕೋಟಿ ಜೊತೆ ಸಿನಿಮಾ ಪ್ರಾಫಿಟ್ ಶೇರ್ ಪಡೆಯುತ್ತಾರೆ. ಈಗ ಮಹೇಶ್ ಬಾಬು ಅಭಿನಯದ ‘ಗುಂಟೂರು ಕರಮ್’ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ 40 ಕೋಟಿಯಿಂದ 50 ಕೋಟಿವರೆಗೂ ಸಂಭಾವನೆ ತೆಗೆದುಕೊಂಡಿದ್ದಾರಂತೆ.
ಸುಕುಮಾರ್ ರವರು ನಿರ್ದೇಶನಕ್ಕೆ ಪಡೆಯುವ ಲಾಭ
ಪುಷ್ಪ ಸಿನಿಮಾ ಮೂಲಕ ಸುಕುಮಾರ್, ಬಾಲಿವುಡ್ ನಲ್ಲೂ ಭಾರೀ ಹೆಸರು ಮಾಡಿದ್ದಾರೆ. ರಂಗಸ್ಥಳಂ ಸಿನಿಮಾ ಮೂಲಕ ನಿರ್ದೇಶಕ ಸುಕುಮಾರ್ ರೇಂಜ್ ಬದಲಾಗಿದೆ. ಪ್ರತಿ ಸಿನಿಮಾಗೆ 25 ಕೋಟಿ ತೆಗೆದುಕೊಳ್ಳುವ ಸುಕುಮಾರ್ ಸಿನಿಮಾದಲ್ಲಿ ಬಂದ ಲಾಭದ ಶೇರ್ ಪಡೆದಿದ್ದಾರೆ.
ಪುರಿ ಜಗನ್ನಾಥ್ ರವರ ಸಂಭಾವನೆ
ತನ್ನದೇ ನಿರ್ಮಾಣ ಸಂಸ್ಥೆಯಲ್ಲಿ ಸಿನಿಮಾ ಮಾಡುವ ಪುರಿ ಜಗನ್ನಾಥ್ ರವರು ಅನೇಕ ಸಿನಿಮಾಗಳನ್ನು ಮಾಡಿದ್ದಾರೆ.ಇತರರಿಗೆ ಸಿನಿಮಾ ಮಾಡುವಾಗ ಪ್ರತಿ ಸಿನಿಮಾಗೂ. 7 ರಿಂದ 10 ಕೋಟಿ ಪಡೆಯುತ್ತಾರೆ. ಸದ್ಯ ಅವರು ರಾಮ್ ಜೊತೆ ‘ಡಬಲ್ ಸ್ಮಾರ್ಟ್’ ಸಿನಿಮಾ ಮಾಡುತ್ತಿದ್ದಾರೆ.
ನಾಗ್ ಅಶ್ವಿನ್ ರವರ ಸಂಭಾವನೆ
ಮಹಾನಟಿ ಸಿನಿಮಾದ ನಂತರ ನಿರ್ದೇಶಕ ನಾಗ ಅಶ್ವಿನ್ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ. ಪ್ರತಿ ಸಿನಿಮಾಗೂ 8 ಕೋಟಿ ತೆಗೆದುಕೊಳ್ಳುತ್ತಾರೆ. ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898 ಎಡಿ’ ಸಿನಿಮಾವನ್ನು ಅದ್ಧೂರಿಯಾಗಿ ಚಿತ್ರೀಕರಿಸುತ್ತಿದೆ. ಈ ಸಿನಿಮಾದ ಮೇಲೆ ಭಾರೀ ನಿರೀಕ್ಷೆಗಳಿವೆ. ಮುಂದಿನ ವರ್ಷ ಮೇ 9 ರಂದು ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ.