Maruti Suzuki: ಕಾರ್ ಖರೀದಿ ಮಾಡುವವರಿಗೆ ಗಣೇಶ ಹಬ್ಬದ ಬಂಪರ್ ಗಿಫ್ಟ್, ಈ ಕಾರಿನ ಮೇಲೆ 40000 ರೂ ಡಿಸ್ಕೌಂಟ್.

ಗಣೇಶ ಹಬ್ಬಕ್ಕೆ ಮಾರುತಿ ಸುಜುಕಿ ಕಾರು ಕಂಪನಿಯಿಂದ ಬಿಗ್ ಗಿಫ್ಟ್,

Discount Available On Maruti Car’s: ಈ ತಿಂಗಳಲ್ಲಿ ಬರುವ ಗಣೇಶ ಹಬ್ಬಕ್ಕೆ ಕಾರು ಖರೀದಿ ಮಾಡುವ ಪ್ಲ್ಯಾನ್ ಇದೆಯೇ ಹಾಗಿದ್ದರೆ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ Maruti Suzuki ಯವರ ಹೊಸ ಕಾರು ಮಾರುಕಟ್ಟೆಗೆ ಬರಲಿದೆ , ಕಾರು ಕಂಪನಿಯಲ್ಲೇ ಅಗ್ಗದಲ್ಲಿ ಕಾರು ಮಾರಾಟ ಮಾಡುವ ಕಂಪನಿ ಎಂದೇ ಸುಜುಕಿ ಖ್ಯಾತಿಗಳಿಸಿದೆ.

ಗಣೇಶ ಹಬ್ಬಕ್ಕೆ ಬಜೆಟ್ ನಲ್ಲಿ ಕಾರು ಖರೀದಿ ಮಾಡುವ ಅವಕಾಶ ಮಾರುತಿ ಸುಜುಕಿ ನೀಡಿದೆ. ಮಾರುತಿ ಸುಜುಕಿಯವರು ಅರೆನಾ ಡೀಲರ್‌ಶಿಪ್‌ನಲ್ಲಿ ಮಾರಾಟ ಮಾಡುವ ವಿವಿಧ ಕಾರುಗಳ ಮೇಲೆ ಈ ಸೆಪ್ಟೆಂಬರ್ ತಿಂಗಳಲ್ಲಿ ಭರ್ಜರಿಯಾಗಿ ರೂ.40,000 ರಿಯಾಯಿತಿ ನೀಡಿದೆ.

Maruti Suzuki Celerio car offer
Image Credit: Firstpost

Maruti Suzuki Celerio
ಈ ಕಾರಿನ ಟಾಪ್ ಎಂಡ್ ಮಾದರಿ ರೂ.40,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಹೊಂದಿದೆ. ಆದರೆ, ಬೇಸ್ ವೇರಿಯೆಂಟ್ ರೂ.30,000 ಮಾತ್ರ ಡಿಸ್ಕೌಂಟ್ ಆಫರ್ ಪಡೆದಿದೆ. ದೇಶೀಯ ಮಾರುಕಟ್ಟೆಯಲ್ಲಿ ರೂ .5.37 ಲಕ್ಷದಿಂದ ರೂ.7.14 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ Celerio ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದ್ದು, ರೂಪಾಂತರಗಳಿಗೆ ಅನುಗುಣವಾಗಿ 26kmpl ರಿಂದ 35.6km/kg ವರೆಗೆ ಮೈಲೇಜ್ ನೀಡುತ್ತದೆ. ಕೆಫೀನ್ ಬ್ರೌನ್, ಫೈರ್ ರೆಡ್, ಗ್ಲಿಸ್ಟೆನಿಂಗ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದ್ದು, 7-ಇಂಚಿನ ಟಚ್‌ಸ್ಕ್ರೀನ್, ಪುಶ್-ಬಟನ್ ಸ್ಟಾರ್ಟ್/ಸ್ಟಾಪ್, ಕೀಲೆಸ್ ಎಂಟ್ರಿ ಮ್ಯಾನ್ಯುವಲ್ ಎಸಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Alto K10 offer
Image Credit: Zeebiz

Maruti Alto K10
ಈ ಕಾರು ಕೂಡ ಈ ಸೆಪ್ಟೆಂಬರ್ ತಿಂಗಳಲ್ಲಿ ಭರ್ಜರಿ ಡಿಸ್ಕೌಂಟ್ ಹೊಂದಿದೆ. ಇದರ ಪೆಟ್ರೋಲ್ ರೂಪಾಂತರಗಳು ರೂ. 35,000 ಹಾಗೂ ಸಿಎನ್‌ಜಿ ವೇರಿಯೆಂಟ್ಸ್ ರೂ. 32,000 ರಿಯಾಯಿತಿ ಪ್ರಯೋಜನವನ್ನು ಪಡೆದಿವೆ. ರೂ. 3.99 ಲಕ್ಷದಿಂದ ರೂ. 5.96 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಮಾರುತಿ ಸುಜುಕಿ ಆಲ್ಟೋ ಕೆ10 LXi, VXi ಒಳಗೊಂಡಂತೆ ನಾಲ್ಕು ರೂಪಾಂತರ ಆಯ್ಕೆಯಲ್ಲಿ ಸಿಗುತ್ತದೆ.

ಈ ಕಾರು, 1 ಲೀಟರ್ ಡ್ಯೂಯಲ್ಜೆಟ್ ಪೆಟ್ರೋಲ್/ಸಿಎನ್‌ಜಿ ಎಂಜಿನ್, 5 ಸ್ವೀಡ್ ಮ್ಯಾನುವಲ್ ಅಥವಾ 5 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. 24.39 – 24.9 kmpl ಮೈಲೇಜ್ ನೀಡುತ್ತದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki S-Presso
Image Credit: Gaadiwaadi

Maruti Suzuki S-Presso
aruti Suzuki S-Presso ಒಟ್ಟು ರೂ.35,000 ವರೆಗೆ ರಿಯಾಯಿತಿ ಪ್ರಯೋಜನವನ್ನು ಪಡೆದಿದೆ. ಅದರಲ್ಲಿ ಬೇಸ್ ವೇರಿಯೆಂಟ್ ರೂ.30,000 ಡಿಸ್ಕೌಂಟ್ ಒಳಗೊಂಡಿದೆ. ಉಳಿದ ಮಾದರಿಗಳಿಗೆ ರೂ.35,000 ರಿಯಾಯಿತಿ ಇದೆ. ಈ ಕಾರು, ರೂ.4.26 ಲಕ್ಷದಿಂದ ರೂ.6.12 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ಈ ಎಸ್-ಪ್ರೆಸ್ಸೊ ಕಾರು, ಪೆಟ್ರೋಲ್ ಹಾಗೂ ಸಿಎನ್‌ಜಿ ಆಯ್ಕೆಯಲ್ಲಿ ದೊರೆಯಲಿದ್ದು, ರೂಪಾಂತರಗಳಿಗೆ ಅನುಗುಣವಾಗಿ 24.12 – 25.3 kmpl ಮೈಲೇಜ್ ನೀಡುತ್ತದೆ. ಸಾಲಿಡ್ ಫೈರ್ ರೆಡ್, ಮೆಟಾಲಿಕ್ ಗ್ರಾನೈಟ್ ಗ್ರೇ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ. 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಒಳಗೊಂಡಂತೆ ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.

Maruti Suzuki WagonR
Image Credit: Hindustantimes

Maruti Suzuki WagonR
ಸಿಎನ್‌ಜಿ VXi ಹಾಗೂ LXi ರೂಪಾಂತರಗಳು ರೂ.30,000 ರಿಯಾಯಿತಿ ಪ್ರಯೋಜನವನ್ನು ಹೊಂದಿವೆ. ಬೇಸ್ ವೇರಿಯೆಂಟ್ ರೂ.35,000 ಹಾಗೂ ಟಾಪ್ ಎಂಡ್ ಮಾದರಿ ರೂ.25,000 ಡಿಸ್ಕೌಂಟ್ ಆಫರ್ ಒಳಗೊಂಡಿದೆ. ಈ ಕಾರು, ರೂ.5.54 ಲಕ್ಷದಿಂದ ರೂ.7.42 ಲಕ್ಷ ಬೆಲೆಯಲ್ಲಿ ಸಿಗುತ್ತದೆ.

maruti suzuki swift car offer
Image Credit: Cartrade

Maruti Suzuki Swift
ಈ ಕಾರು ಕೂಡ ಒಳ್ಳೆಯ ಡಿಸ್ಕೌಂಟ್ ಆಫರ್ ಹೊಂದಿದೆ. ಈ ಕಾರಿಗೆ ಬೇಸ್ ವೇರಿಯೆಂಟ್ ರೂ.35,000 ಹಾಗೂ ಟಾಪ್ ಎಂಡ್ ಮಾದರಿ ರೂ.25,000 ರಿಯಾಯತಿ ಪ್ರಯೋಜನ ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಸ್ವಿಫ್ಟ್, ರೂ.5.99 ಲಕ್ಷದಿಂದ ರೂ.9.03 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ. ಹಾಗು ರಾಜ್ಯದಿಂದ ರಾಜ್ಯಕ್ಕೆ ಈ ರಿಯಾಯಿತಿಗಳು ಬೇರೆಯಾಗಿರುತ್ತವೆ.

Leave A Reply

Your email address will not be published.