Divorce: ಮದುವೆಯಾದ ಎಷ್ಟು ತಿಂಗಳಿಗೆ ವಿಚ್ಛೇಧನ ಪಡೆಯಬಹುದು, ಮಹತ್ವದ ತೀರ್ಪು ನೀಡಿದ ಕೋರ್ಟ್.

ವಿಚ್ಛೇಧನ ವಿಷಯವಾಗಿ ಭಾರತದ ಕಾನೂನಿನಲ್ಲಿ ಇದೆ ಹಲವು ನಿಯಮಗಳು.

Divorce Rules In India: ಹಿಂದೂ ಧರ್ಮದಲ್ಲಿ ಮದುವೆಗೆ ಅದರದೇ ಆದ ಮಹತ್ವ ಇದೆ. ಮದುವೆ ಎನ್ನುವುದು ಒಂದು ವಿಶಿಷ್ಟ ಪರಿಕಲ್ಪನೆ. ಒಂದು ಗಂಡು ಮತ್ತು ಒಂದು ಹೆಣ್ಣನ್ನು ಪರಸ್ಪರ ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ಎಲ್ಲರ ಸಮ್ಮುಖದಲ್ಲಿ ಮಂತ್ರಘೋಷದ ಮೂಲಕ ಸೇರಿಸುವುದೇ ಮದುವೆ.

ಇಂತಹ ಮದುವೆಯು ಈಗ ಚಿಕ್ಕ ಪುಟ್ಟ ಮನಸ್ತಾಪಗಳಿಂದ ಮುರಿದು ಬೀಳುತ್ತಿದೆ. ಇಬ್ಬರ ಮಧ್ಯೆ ಕಲಹಗಳು ಹೆಚ್ಚಾದರೆ ಈ ಸಂಸಾರವು ಮುಂದುವರೆಸಲು ಸಾಧ್ಯವೇ ಇರುವುದಿಲ್ಲ. ಆಗ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ನ್ಯಾಯಾಲಯಕ್ಕೆ ವಿಚ್ಛೇಧನ ಸಲ್ಲಿಸಬಹುದು.

Divorce Rules In India
Image Credit: Economictimes

ವಿವಾಹವಾಗಿ ಎರಡೇ ತಿಂಗಳಿನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಬಹುದೇ?
ಹಿಂದೂ ವಿವಾಹ ಕಾಯ್ದೆಯ ಪ್ರಕಾರ ವಿವಾಹವನ್ನು ಒಂದು ವರ್ಷದಲ್ಲಿ ಊರ್ಜಿತಗೊಳಿಸಲಾಗುತ್ತದೆ. ಗಂಡ ಹೆಂಡತಿಯರ ಮಧ್ಯೆ ಸಾಮರಸ್ಯವಿಲ್ಲದೆ ಹೋದಾಗ ಆಗ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ವಿವಾಹವಾಗಿ ಎರಡೇ ತಿಂಗಳಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ ಆ ಅರ್ಜಿಯು ಅನೂರ್ಜಿತಗೊಳ್ಳುತ್ತದೆ.

ಯಾವುದೊ ಒಂದು ವಿಶೇಷ ಸಂದರ್ಭದಲ್ಲಿ ಮಾತ್ರ ನ್ಯಾಯಾಲಯ ಅನುಮತಿ ನೀಡಿದರೆ ಆಗ ಗಂಡ ಅಥವಾ ಹೆಂಡತಿ ಅರ್ಜಿ ಸಲ್ಲಿಸಬಹುದು.ಎರಡು ಕಡೆಯವರಿಗೂ ನ್ಯಾಯಾಲಯ ನೋಟಿಸ್ ಕಳುಹಿಸುತ್ತದೆ. ಆದರೂ ವಿಚ್ಛೇದನ ಸಿಗುವುದು ಒಂದು ವರ್ಷ ಅಥವಾ ಎರಡು ವರ್ಷ ಹೋಗಬಹುದು.

Indian marriage rules
Image Credit: Samueltiptonlaw

ವಿವಾಹವಾಗಿ ಎಷ್ಟು ತಿಂಗಳಿನಲ್ಲಿ ವಿಚ್ಛೇದನ ಸಿಗುತ್ತದೆ ?
ಹಿಂದೂ ಧರ್ಮದಲ್ಲಿ ವಿವಾಹಕ್ಕೆ ಅದರದೇ ಆದ ಮಹತ್ವ ಇದೆ. ವಿವಾಹವಾಗಿ ಒಂದು ವರ್ಷದ ಒಳಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಒಂದು ವೇಳೆ ಗಂಡ ಹೆಂಡತಿ ಇಬ್ಬರು ಪರಸ್ಪರ ಒಪ್ಪಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದರೆ ಆ ವಿವಾಹವನ್ನು ಮುರಿಯಲು ನ್ಯಾಯಾಲಯ ಆರು ತಿಂಗಳ ಸಮಯವನ್ನು ನೀಡುತ್ತದೆ. ವಿವಾಹವಾಗಿ ಆರು ತಿಂಗಳ ನಂತರ ಅಂದರೆ ಏಳನೇ ತಿಂಗಳಿನಲ್ಲಿ ನ್ಯಾಯಾಲಯವು ವಿಚ್ಛೇದನ ನೀಡುತ್ತದೆ.

Leave A Reply

Your email address will not be published.