DL And RC: ಇನ್ನುಮುಂದೆ ಡ್ರೈವಿಂಗ್ ಲೈಸನ್ಸ್ ಮತ್ತು RC ಯಲ್ಲಿ ಕೂಡ ಬರಲಿದೆ QR ಕೋಡ್, QR ಉಪಯೋಗ ಏನು…?

ಇನ್ನುಮುಂದೆ ಡ್ರೈವಿಂಗ್ ಲೈಸನ್ಸ್ ಮತ್ತು RC ಯಲ್ಲಿ ಕೂಡ ಬರಲಿದೆ QR ಕೋಡ್.

DL And RC Smart Card: ರಾಜ್ಯ ಸಾರಿಗೆ ಇಲಾಖೆ ಆಗಾಗ ಹಲವು ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಈ ನಿಯಮಗಳು ನಿರ್ದಿಷ್ಟ ಉದ್ದೇಶವನ್ನು ಹೊಂದಿದ್ದು, ಹೊಸ ತಂತ್ರಜ್ಞಾನ ಅಳವಡಿಕೆಗೆ ಹೆಚ್ಚಿನ ಆಧ್ಯತೆಯನ್ನು ಹೊಂದಿದೆ. ರಾಜ್ಯ ಸಾರಿಗೆ ಇಲಾಖೆ ಈಗಾಗಲೇ HSRP ನಂಬರ್‌ ಪ್ಲೇಟ್‌ (HSRP Number Plate) ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಅಲ್ಲದೆ, ಡಿಜಿಟಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಅದರ ಭಾಗವಾಗಿ ಚಾಲನಾ ಪರವಾನಗಿ (Driving License) ಮತ್ತು ವಾಹನಗಳ ನೋಂದಣಿ ಪ್ರಮಾಣಪತ್ರ (Vehicle Registration Certificate)ಗಳಿಗೆ (DL RC card) ಹೊಸ ರೂಪವನ್ನು ಕೊಡಲು ಮುಂದಾಗಲಾಗಿದೆ.ಈ ಕಾರ್ಡ್ ಇನ್ನು ಮುಂದೆ ಇನ್ನಷ್ಟು ಸಹಾಯಕ ಕೂಡ ಆಗಲಿದೆ.

DL And RC
Image Credit: Online 38 Media

ವಾಹನ ಹಾಗೂ ಮಾಲೀಕರ ವಿವರಗಳ ಲಭ್ಯತೆ ಮತ್ತಷ್ಟು ಸುಲಭ

ಹಾಲಿ ಸ್ಮಾರ್ಟ್ ಕಾರ್ಡ್‌ ಪ್ರಸ್ತುತ ವಿತರಣೆ ಮಾಡುತ್ತಿರುವ ಕಂಪನಿಯ ಗುತ್ತಿಗೆ ಅವಧಿ 2024ರ ಫೆಬ್ರವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಖಾಸಗಿ ಕಂಪನಿಯೊಂದು 2009 ರ ಗುತ್ತಿಗೆ ಪಡೆದುಕೊಂಡಿದೆ. ಈಗಾಗಲೇ ತಲಾ 2 ಕೋಟಿಗೂ ಹೆಚ್ಚು ಆರ್‌ಸಿ ಮತ್ತು ಡಿಎಲ್ ಸ್ಮಾರ್ಟ್‌ ಕಾರ್ಟ್‌ಗಳನ್ನು ವಿತರಣೆ ಮಾಡಲಾಗಿದೆ. ಹೀಗಾಗಿ ಮುಂದಿನ ವರ್ಷ ಫೆಬ್ರವರಿ ನಂತರ ನೀಡುವ ಹೊಸ ಕಾರ್ಡ್‌ಗಳಲ್ಲಿ ಕ್ಯೂ ಆರ್‌ ಕೋಡ್ ಅಳವಡಿಸಿ ವಿತರಿಸಲು ಸಾರಿಗೆ ಇಲಾಖೆ ನಿರ್ಧಾರ ಮಾಡಿದೆ.

ಈಗಾಗಲೇ ಡಿಎಲ್‌ ಹಾಗೂ ಆರ್‌ಸಿಯ ಸ್ಮಾರ್ಟ್‌ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಕಾರ್ಡ್‌ಗಳಿಗೆ ಚಿಪ್‌ ಅಳವಡಿಕೆ ಮಾಡಲಾಗಿದೆ. ಇನ್ನು ಇದರ ಜತೆಗೆ ಕ್ಯೂ ಆರ್‌ ಕೋಡ್‌ ಸಹ ಇರಲಿದೆ. ಈ ಯೋಜನೆಯನ್ನು ಮುಂದಿನ ತಿಂಗಳಿನಿಂದ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಹೀಗಾಗಿ ವಾಹನ ಹಾಗೂ ಮಾಲೀಕರ ವಿವರಗಳ ಲಭ್ಯತೆ ಮತ್ತಷ್ಟು ಸುಲಭವಾಗಲಿದೆ.

ಕ್ಯೂ ಆರ್ ಕೋಡ್ ಜೊತೆಗೆ ತುರ್ತು ಸಂಪರ್ಕ ಸಂಖ್ಯೆಯನ್ನು ಸಹ ಅಳವಡಿಸಲಾಗಿದೆ

ದೇಶಾದ್ಯಂತ ಏಕರೂಪದಲ್ಲಿ ಈ ಕಾರ್ಡ್‌ಗಳು ಜಾರಿಗೆ ಬರಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನಿಗದಿಪಡಿಸಿರುವ ನಿಯಮಗಳನ್ನು ಇದರಲ್ಲಿ ಅಳವಡಿಸಿಕೊಳ್ಳಲಾಗುವುದು. ಡಿಎಲ್‌ನ ಮುಂಭಾಗದಲ್ಲಿ ಕಾರ್ಡ್ ಮಾಲೀಕರ ಹೆಸರು, ಭಾವಚಿತ್ರ, ವಿಳಾಸ, ಸಿಂಧುತ್ವ, ಹುಟ್ಟಿದ ದಿನಾಂಕ ಮತ್ತು ರಕ್ತದ ಗುಂಪು ಮತ್ತು ಹಿಂಭಾಗದಲ್ಲಿ ವಾಹನದ ಮಾದರಿ ಹಾಗೂ ಸಂಪರ್ಕ ಸಂಖ್ಯೆಯನ್ನು ನಮೂದು ಮಾಡಲಾಗಿರುತ್ತದೆ. ಈ ಎಲ್ಲ ವಿಷಯಗಳನ್ನು ಚಿಪ್‌ನಲ್ಲಿ ಅಳವಡಿಸಿದರೆ, ಕ್ಯೂ ಆರ್ ಕೋಡ್ ಜತೆಯಲ್ಲಿ ತುರ್ತು ಸಂಪರ್ಕ ಸಂಖ್ಯೆಯನ್ನು ಸಹ ಅಳವಡಿಸಲಾಗಿರುತ್ತದೆ.

DL And RC Smart Card
Image Credit: Original Source

ಆರ್‌ಸಿ ಕಾರ್ಡ್‌ ಈ ರೀತಿಯಾಗಿ ಬರಲಿದೆ

ಆರ್‌ಸಿ ಕಾರ್ಡ್‌ನ ಮುಂಭಾಗದಲ್ಲಿ ವಾಹನದ ನೋಂದಣಿ ಸಂಖ್ಯೆ, ನೋಂದಣಿ ದಿನಾಂಕ, ಕಾರ್ಡ್ ಅಂತ್ಯಗೊಳ್ಳುವ ದಿನಾಂಕ, ಚಾಸಿಸ್, ಎಂಜಿನ್ ಸಂಖ್ಯೆ, ವಾಹನ ಟ್ರ್ಯಾಕಿಂಗ್ ಸಿಸ್ಟಂ ಅನ್ನು ಅಳವಡಿಕೆ ಮಾಡಲಾಗಿರುತ್ತದೆ ಎಂದು ತಿಳಿದುಬಂದಿದೆ. ಹಿಂಭಾಗದಲ್ಲಿ ವಾಹನ ತಯಾರಕರ ಹೆಸರು, ವಾಹನದ ಮಾದರಿ, ಆಸನ ಸಾಮರ್ಥ್ಯದ ಮಾಹಿತಿಯನ್ನು ನಮೂದು ಮಾಡಲಾಗಿರುತ್ತದೆ. ಕ್ಯೂಆರ್ ಕೋಡ್ ಅಳವಡಿಕೆಯಿಂದ ಪೊಲೀಸರು ವಾಹನ ಮತ್ತು ಮಾಲೀಕರ ದೃಢೀಕರಣ ಮತ್ತಿತರ ಮಾಹಿತಿಗಳನ್ನು ಸಂಗ್ರಹಿಸಲು ಸಹಾಯಕವಾಗುತ್ತದೆ. ತುರ್ತು ಸಂದರ್ಭದಲ್ಲೂ ಕೂಡ ಈ ಕಾರ್ಡ್ ಗಳು ಬಹಳ ಅನುಕೂಲಕರ ಆಗಲಿದೆ .

Leave A Reply

Your email address will not be published.