New Ration Card: ಈ ದಾಖಲೆ ನಿಮ್ಮ ಬಳಿ ಇಲ್ಲ ಅಂದರೆ BPL ರೇಷನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ, ಹೊಸ ನಿಯಮ.

ರೇಷನ್ ಕಾರ್ಡ್ ಪಡೆಯಲು ಈ ದಾಖಲೆಗಳು ಅತೀ ಅವಶ್ಯಕ.

Documents Required For Ration Card Application: ಪಡಿತರ ಚೀಟಿ ಪ್ರತಿಯೊಂದು ಕುಟುಂಬಕ್ಕೂ ಬಹಳ ಮುಖ್ಯವಾಗಿ ಬೇಕಾಗಿರುವ ದಾಖಲೆ ಆಗಿದೆ. ಸರಕಾರದಿಂದ ಸೌಲಭ್ಯ ಪಡೆಯಲು, ಸಹಾಯಧನ ಪಡೆಯಲು ಹಾಗು ರೇಷನ್ ಪಡೆಯಲು ಪಡಿತರ ಚೀಟಿ ಅತ್ಯಗತ್ಯ ಆಗಿದೆ. ರೇಷನ್ ಕಾರ್ಡ್ ಇಲ್ಲದೇ ಹಲವು ಕುಟುಂಬಗಳು ಬಹಳ ಕಷ್ಟ ಅನುಭವಿಸುತ್ತಿದ್ದಾರೆ.

ಆ ನಿಟ್ಟಿನಲ್ಲಿ ಈಗ ರೇಷನ್ ಕಾರ್ಡ್ ಅರ್ಜಿಯನ್ನು ಪರಿಶೀಲಿಸಿ ಸರಕಾರ ಹಲವು ಕುಟುಂಬಗಳಿಗೆ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಹೇಳಿದೆ. ಹಾಗಾಗಿ ನೀವು ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರ ಬಳಿ ಇರಬೇಕಾದ ದಾಖಲೆಗಳು ಹಾಗೂ ಮಾಹಿತಿಗಳನ್ನು ತಿಳಿಯಿರಿ.

Documents Required For Ration Card Application
Image Credit: Krishi Jagran

ಪಡಿತರ ಚೀಟಿ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸತಕ್ಕದ್ದು

ಈಗ ಹೊಸ ಪಡಿತರ ಚೀಟಿ ಪಡೆಯಲು Online ಮೂಲಕವೇ ಅರ್ಜಿ ಸಲ್ಲಿಸಬೇಕು. ಗ್ರಾಮಾಂತರ ಪ್ರದೇಶದಲ್ಲಿ ಕಡ್ಡಾಯವಾಗಿ ಆಯಾ ಗ್ರಾಮಪಂಚಾಯಿತಿ ಕಛೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬಹುದು.

ನಗರ ಹಾಗೂ ಪಟ್ಟಣ ಪ್ರದೇಶದವರು ಖಾಸಗಿ ಕಂಪ್ಯೂಟರ್ ವ್ಯವಸ್ಥೆ ಮೂಲಕ Online ಸಲ್ಲಿಸಬಹುದು ಇಲ್ಲವೇ ಆಯಾ ಪ್ರದೇಶದ ತಾಲ್ಲೂಕು ಕಛೇರಿ, ಆಹಾರ ಸಹಾಯಕ ನಿರ್ದೆಶಕರ ಕಛೇರಿ ಅಥವಾ ಉಪನಿರ್ದೆಶಕರ ಕಛೇರಿಗಳಲ್ಲಿ Online ಮೂಲಕವೇ ಸಲ್ಲಿಸಬೇಕು.ಅರ್ಜಿ ಸಲ್ಲಿಸುವಾಗ ಅರ್ಜಿದಾರರು ತಮ್ಮ ಬಳಿ ಈ ಕೆಳಕಂಡ ದಾಖಲೆಗಳು ಹಾಗೂ ಮಾಹಿತಿಯನ್ನು ಇಟ್ಟುಕೊಂಡಲ್ಲಿ ಮಾತ್ರ ನೀವು ಅರ್ಜಿಯನ್ನು Onlineನಲ್ಲಿ ಭರ್ತಿ ಮಾಡಿ/ಮಾಡಿಸಿ ಸಲ್ಲಿಸಲು ಸುಲಭವಾಗುತ್ತದೆ. (ಆದರೆ ಅರ್ಜಿ ಸಲ್ಲಿಸುವಾಗ ಕಛೇರಿಯಲ್ಲಿ ಯಾವುದೇ ದಾಖಲೆಗಳ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ.)

ಎ) ಗ್ರಾಮಾಂತರ ಪ್ರದೇಶದವರು
1. ನಿಮ್ಮ ಗ್ರಾಮಪಂಚಾಯಿತಿ ಹೆಸರು.

2. ನೀವು ಈಗ ವಾಸಿಸುವ ಮನೆ ವಿಳಾಸ,

3. ಮನೆಯ ಆಸ್ತಿ ಸಂಖ್ಯೆ ವಿವರ.

4. ಮನೆಗೆ ವಿದ್ಯುತ್‌ ಸಂಪರ್ಕವಿರುವವರು ಕಡ್ಡಾಯವಾಗಿ ವಿದ್ಯುತ್‌ ಬಿಲ್ಲಿನ ಪ್ರತಿ.

5. ಕುಟುಂಬದ ಎಲ್ಲಾ ಸದಸ್ಯರ ಹೆಸರು, ಸದಸ್ಯರು ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.

6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ

7. ನಿಮ್ಮ ಕುಟುಂಬಕ್ಕಿರುವ ಅಡುಗೆ ಅನಿಲದ ಸರಬರಾಜಿನ ಇತ್ತೀಚಿನ ಬಿಲ್/ರಶೀದಿ.

Ration Card Application
Image Credit: Informal news

ಬಿ) ನಗರ/ಪಟ್ಟಣ ಪ್ರದೇಶದವರು
1. ನೀವು ವಾಸವಿರುವ ನಗರಸಭೆ/ಪುರಸಭೆ/ನಗರ ಪಾಲಿಕೆಯ ವಾರ್ಡ್ ಸಂಖ್ಯೆ

2. ಬೆಂಗಳೂರು ಅನೌಪಚಾರಿಕ ಪಡಿತರ ಪ್ರದೇಶ (ಬಿ.ಬಿ.ಎಂ.ಪಿ ಪ್ರದೇಶ) ದವರಾಗಿದ್ದಲ್ಲಿ ನೀವು ಆಹಾರ ಇಲಾಖೆಯ ಯಾವ ವಲಯ ವ್ಯಾಪ್ತಿಯಲ್ಲಿದ್ದೀರಿ ಎಂಬ ಬಗ್ಗೆ ಮಾಹಿತಿ (ಇದನ್ನು ಸುಲಭವಾಗಿ ತಿಳಿಯಲು ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಯವರನ್ನು ಸಂಪರ್ಕಿಸಿ, ಇಲ್ಲವೇ ನಿಮ್ಮ ನೆರೆಹೊರೆಯವರಲ್ಲಿ ಈಗಾಗಲೇ ಲಭ್ಯವಿರುವ ಪಡಿತರ ಚೀಟಿಯನ್ನು ನೋಡಿ ತಿಳಿಯಿರಿ).

3. ನಿಮ್ಮ ಮನೆಯ ವಿದ್ಯುತ್ ಬಿಲ್., (ವಿದ್ಯುತ್‌ ಸಂಪರ್ಕವಿಲ್ಲದವರು ವಿದ್ಯುತ್ ಸಂಪರ್ಕವಿಲ್ಲವೆಂದು ಅರ್ಜಿಯಲ್ಲಿ ಘೋಷಿಸಬೇಕು.)

4. ನಿಮ್ಮ ನಿವಾಸದ ಪೂರ್ಣ ವಿಳಾಸ, (ಕಡ್ಡಾಯವಾಗಿ ಅಂಚೆಪಿನ್ ಕೋಡ್‌ನೊಂದಿಗೆ). ಸ್ವಂತ ಮನೆಯಾಗಿದ್ದಲ್ಲಿ ಮನೆಯ ಆಸ್ತಿ ಸಂಖ್ಯೆ ವಿವರ, ನಿಮ್ಮ ಮನೆ ವಿಳಾಸ ಹುಡುಕಲು ಸುಲಭವಾಗುವ ಹತ್ತಿರದ ಸ್ಥಳದ ಗುರುತು (landmark).

5. ಕುಟುಂಬದ ಸದಸ್ಯರ ಹೆಸರು, ಮುಖ್ಯಸ್ಥರು/ಅರ್ಜಿದಾರರೊಂದಿಗೆ ಹೊಂದಿರುವ ಸಂಬಂಧ, ಕುಟುಂಬ ಸದಸ್ಯರೆಲ್ಲರ ಹುಟ್ಟಿದ ದಿನಾಂಕ, ವೃತ್ತಿ ಮತ್ತು ಅವರ ವಾರ್ಷಿಕ ವರಮಾನ.

6. ಈಗಿರುವ ಮನೆಯಲ್ಲಿ ಎಷ್ಟು ಸಮಯದಿಂದ ವಾಸವಾಗಿದ್ದಾರೆಂಬ ಮಾಹಿತಿ.

7. ನಿಮ್ಮ ಸಂಪರ್ಕದ ಮೊಬೈಲ್ ನಂಬರ್ (ಕಡ್ಡಾಯ), ಸ್ವಂತ ಮೊಬೈಲ್ ಇಲ್ಲದಿದ್ದರೂ ನಿಮ್ಮನ್ನು ಸಂಪರ್ಕಿಸಬಹುದಾದ ಯಾವುದಾದರೂ ಮೊಬೈಲ್ ಸಂಖ್ಯೆಯನ್ನು ನೀಡುವುದು.

8. ಅರ್ಜಿದಾರರು ಅವಿವಾಹಿತರಾಗಿದ್ದಲ್ಲಿ ಅವರ ಪೋಷಕರಿರುವ ಪೂರ್ಣ ವಿಳಾಸ,

9. ನಿಮ್ಮ ಕುಟುಂಬದ ಅಡುಗೆ ಅನಿಲ ಸಂಪರ್ಕದ ವಿವರ/ಇತ್ತೀಚಿನ ಎಲ್.ಪಿ.ಜಿ. ಬಿಲ್ ಪ್ರತಿ.
ಮೇಲೆ ಪಟ್ಟಿ ಮಾಡಿರುವ ದಾಖಲೆಗಳನ್ನು ನಿಮ್ಮ ಬಳಿ ಇಟ್ಟುಕೊಂಡಿದ್ದರೆ ಮಾತ್ರ ನೀವು ಆನ್ ಲೈನ್ ಮೂಲಕ ಅರ್ಜಿಸಲ್ಲಿಸುವ ಕೆಲಸ ಯಾವುದೇ ತಪ್ಪಿಲ್ಲದೇ ಮಾಡಬಹುದು. ಈ ದಾಖಲೆಗಳನ್ನು ಕಛೇರಿಗೆ ಸಲ್ಲಿಸುವ ಅಗತ್ಯವಿಲ್ಲ.ಆದರೆ ನಿಮ್ಮ ಸ್ಥಳ ತನಿಖೆಗೆ ಬಂದಾಗ ಇವುಗಳನ್ನು ಹಾಜರಪಡಿಸುವುದು ಕಡ್ಡಾಯ.

Ration Card New Updates
Image Credit: Kannada News Today

ಅರ್ಜಿ ಸಲ್ಲಿಸುವಾಗ ಮನೆಯ ವಿದ್ಯುತ್ ಮೀಟರ್ ನಂಬರ್‌ ನೀಡುವುದು ಕಡ್ಡಾಯ

ನಿಮ್ಮ ಮನೆಯ ಇತ್ತೀಚಿನ ವಿದ್ಯುತ್ ಬಿಲ್ಲಿನಲ್ಲಿ ನಮೂದಿಸಿರುವ ವಿದ್ಯುತ್‌ ಮೀಟರ್ ಆರ್.ಆರ್.ಸಂಖ್ಯೆ ಮತ್ತು ಲೊಕೇಷನ್ ಕೋಡ್ ನೀಡುವುದು ಕಡ್ಡಾಯ. ವಿದ್ಯುತ್ ಸಂಪರ್ಕ ನಿಮ್ಮ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿರಲು ಅಥವಾ ನಿಮ್ಮ ಮನೆ ಮಾಲೀಕರ ಹೆಸರಿನಲ್ಲಿರಲಿ, ಅದೇ ಆರ್.ಆರ್.ನಂಬರ್ ನೀಡುವುದು ಕಡ್ಡಾಯ. ತಮ್ಮ ಮನೆಗೆ ವಿದ್ಯುತ್ ಇಲ್ಲದವರು ತಮಗೆ ವಿದ್ಯುತ್‌ ಸಂಪರ್ಕ ಇಲ್ಲ | ತಮ್ಮ ಮನೆಗೆ ಅಧಿಕೃತ ವಿದ್ಯುತ್‌ ಮೀಟ‌ ಇಲ್ಲ / ತಮ್ಮದು ಭಾಗ್ಯಜ್ಯೋತಿ ಸಂಪರ್ಕ | ತಮ್ಮದು ಗ್ರೂಪ್ ಕ್ವಾರ್ಟಸ್್ರ ಆಗಿದ್ದು ಎಲ್ಲರಿಗೂ ಸಾಮನ್ಯ ಮೀಟರ್ ಇದೆ., ಹೀಗೆ ನಿಮ್ಮ ಮನೆಯ ವಿದ್ಯುತ್ ವ್ಯವಸ್ಥೆ ಬಗ್ಗೆ ಸ್ಪಷ್ಟವಾಗಿ ಘೋಷಿಸಬೇಕು.

ಮನೆಯ ಆಸ್ತಿ ತೆರಿಗೆ ನಂಬರನ್ನೂ ನೀಡಬೇಕು

ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಗ್ರಾಮಪಂಚಾಯಿತಿ ನೀಡಿರುವ ಆಸ್ತಿ ತೆರಿಗೆ ನಂಬರನ್ನು ನೀಡಬೇಕು. ನಿಮ್ಮ ಮನೆಗೆ ಆಸ್ತಿ ತೆರಿಗೆ ನಂಬರ್ ಇಲ್ಲದಿದ್ದರೆ ನಿಮ್ಮ ಮನೆಯಿರುವ ಜಾಗದ ಸರ್ವೆ ನಂಬರನ್ನು ಕಡ್ಡಾಯವಾಗಿ ನೀಡಬೇಕು. ಇದು ನಿಮಗೆ ಗೊತ್ತಿಲ್ಲದಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯವರಿಂದ/ಗ್ರಾಮಲೆಕ್ಕಿಗರಿಂದ ಪಡೆಯಿರಿ. ನಗರ/ಪಟ್ಟಣ ಪ್ರದೇಶದವರೂ ತಮ್ಮ ನಿವಾಸದ ಆಸ್ತಿ ತೆರಿಗೆ ನಂಬರ್ ಲಭ್ಯವಿದ್ದರೆ ನೀಡಬೇಕು.

Ration Card Application Latest
Image Credit: Original Source

ಅವಿವಾಹಿತರು ಪಡಿತರ ಚೀಟಿಗೆ ಅರ್ಜಿ ಹಾಕಬಹುದು

ನಾನಿನ್ನೂ ಮದುವೆಯಾಗಿಲ್ಲ, ಆದರೆ ನನ್ನ ಮೂಲ ಕುಟುಂಬದಿಂದ ಬೇರೆಯಾಗಿರುತ್ತೇನೆ. ಅಂತವರು ನೀವು ನಿಮ್ಮ ಮೂಲ ಕುಟುಂಬದ ಪೋಷಕರು ಈಗ ವಾಸಿಸುತ್ತಿರುವ ಪೂರ್ಣ ವಿಳಾಸವನ್ನು ಕಡ್ಡಾಯವಾಗಿ ನೀಡಬೇಕು. ಹಾಗೂ ನೀವು ಮೂಲ ಕುಟುಂಬದಿಂದ ಬೇರೆಯಾಗಿದ್ದು, ಆ ಪಡಿತರ ಚೀಟಿಯಿಂದ ನಿಮ್ಮ ಹೆಸರನ್ನು ಬೇರ್ಪಡಿಸಿರುವ Deletion Certificate (ವರ್ಜಿತ ಪ್ರಮಾಣ ಪತ್ರ) ವಿವರವನ್ನು ಒದಗಿಸಬೇಕು.

ಬೇರೆ ಊರಿಂದ ವಲಸೆ ಬಂದವರು ಪಡಿತರ ಚೀಟಿ ಪಡೆಯಬಹುದು

ಬೇರೆ ಊರಿನಿಂದ ಬಂದವರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು
ಆದರೆ ನಿಮ್ಮ ಈ ಹಿಂದೆ ಇದ್ದ ಪಡಿತರ ಚೀಟಿಯನ್ನು ಅಧ್ಯರ್ಪಣ ಮಾಡಿರುವ ಬಗ್ಗೆ Surrender Certificate (ಅಧ್ಯರ್ಪಣ ಪ್ರಮಾಣ ಪತ್ರ) ವಿವರ ಭರ್ತಿಮಾಡಬೇಕು. ಅರ್ಜಿಯಲ್ಲಿ ನೀವು ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ನೀವೇ ಅರ್ಜಿಯಲ್ಲಿ ಸ್ವತ: ಘೋಷಿಸಿರುವಂತೆ ಸರ್ಕಾರದ ಆದೇಶ ಸಂಖ್ಯೆ ಎಫ್.ಎಫ್.ಡಿ/32/ಇ.ಒ.ಎಂ.77, ದಿನಾಂಕ 30/09/1977, Karnataka (Prevention of Unauthorised Possession of Ration Card) Order 1977 ಹಾಗೂ ಭಾರತ ದಂಡ ಸಂಹಿತೆ ಅಡಿಯಲ್ಲಿ ಶಿಕ್ಷಾರ್ಹರಾಗುತ್ತೀರಿ ಎಚ್ಚರವಹಿಸಿ.

Leave A Reply

Your email address will not be published.