Driving License: ವಾಹನ ಸವಾರರೆ ನಿಮಗೊಂದು ಗುಡ್ ನ್ಯೂಸ್, ಈಗ ಮನೆಯಲ್ಲಿ ಕುಳಿತುಕೊಂಡು ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಿ.

ಡ್ರೈವಿಂಗ್ ಲೈಸೆನ್ಸ್ ಪಡೆಯುವವರಿಗೆ ಇಲ್ಲಿದೆ ಸುಲಭ ವಿಧಾನ, ಇಂದೇ ಅರ್ಜಿ ಹಾಕಿ.

Driving License: ವಾಹನವನ್ನು ಚಲಾಯಿಸಲು ಕಲಿತ ಮೇಲೆ ಕಲಿಕಾ ಪರವಾನಿಗೆಯನ್ನ ಪಡೆಯುವುದು ತುಂಬಾನೇ ಮುಖ್ಯ. ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾವಣೆ ಕಾನೂನು ಬಾಹಿರ ಅಪರಾಧವಾಗಿರುತ್ತದೆ.

ಈ ಕಾನೂನು ಬಾಹಿರ ಕೆಲಸಕ್ಕೆ ದಂಡ ಕೂಡ ಕಟ್ಟಬೇಕಾಗುತ್ತದೆ ಹಾಗಾಗಿ ನೀವು ನಿಮ್ಮ ಶಾಶ್ವತ ಪರವಾನಗಿಯನ್ನ ಪಡೆಯುವಾಗ, ಕಲಿಕೆಯ ಪರವಾನಗಿ ಅಗತ್ಯ. ಇನ್ನು ನೀವು ಬಯಸಿದ್ರೆ, ಇದನ್ನ 16ನೇ ವಯಸ್ಸಿನಲ್ಲಿಯೂ ತೆಗೆದುಕೊಳ್ಳಬಹುದು. ಆದ್ರೆ ಇದರ ಅಡಿಯಲ್ಲಿ ನಿಮಗೆ 50cc ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದ ವಾಹನವನ್ನ ಓಡಿಸಲು ಮಾತ್ರ ಅನುಮತಿಸಲಾಗುತ್ತೆ.

Driving Licence latest update
Image Credit: NDTV

ಇನ್ನು ಡ್ರೈವಿಂಗ್ ಲೈಸೆನ್ಸ್ ಪಡೆಯಲು RTO ಗೆ ಹೋಗಬೇಕಾಗಿಲ್ಲ

ಈಗ ನೀವು ಕಲಿಕಾ ಪರವಾನಗಿ ಪಡೆಯಲು ಆರ್‌ಟಿಒಗೆ ಭೇಟಿ ನೀಡಬೇಕಾಗಿಲ್ಲ, ಮನೆಯಲ್ಲಿಯೇ ಕುಳಿತು ಆನ್‌ಲೈನ್‌ನಲ್ಲಿ ಕಲಿಕಾ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ಶಾಶ್ವತ ಪರವಾನಗಿ ಪಡೆಯಲು ನೀವು RTO ಕಚೇರಿಗೆ ಹೋಗಬೇಕಾಗುತ್ತದೆ. ಆನ್‌ಲೈನ್ ಕಲಿಕಾ ಪರವಾನಗಿ ಪಡೆಯುವ ಪ್ರಕ್ರಿಯೆಯನ್ನ ತಿಳಿಯೋಣ

ಡ್ರೈವಿಂಗ್ ಲೈಸೆನ್ಸ್ ಪಡೆಯಲು ಈ ಹಂತಗಳನ್ನಅನುಸರಿಸಬೇಕಾಗುತ್ತದೆ

ಡ್ರೈವಿಂಗ್ ಪರವಾನಗಿಗೆ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ಸೈಟ್‌ https://sarathi.parivahan.gov.in/sarathiservice/stateSelection.do ಗೆ ಹೋಗಬೇಕು. ಮೊದಲು ನಿಮ್ಮ ರಾಜ್ಯವನ್ನ ಇಲ್ಲಿ ಆಯ್ಕೆ ಮಾಡಿ, ಇದರ ನಂತರ ಕಲಿಕೆ ಪರವಾನಗಿ ಆಯ್ಕೆಯನ್ನ ಆರಿಸಿ. ನೀವು ಕಲಿಯುವವರ ಪರವಾನಗಿ ಆಯ್ಕೆಯನ್ನ ಕ್ಲಿಕ್ ಮಾಡಿದಾಗ, ನೀವು ಆಧಾರ್ ಆಯ್ಕೆಯನ್ನ ನೋಡುತ್ತೀರಿ, ಅಲ್ಲಿ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನ ಭರ್ತಿ ಮಾಡಿ, ಇದನ್ನು ಮಾಡಿದ ನಂತರ ನಿಮ್ಮ ಫೋನ್‌ಗೆ OTP ಬರುತ್ತದೆ.

Driving Licence without any test at RTO
Image Credit: Pexels

ಎಲ್ಲಾ ದಾಖಲೆಗಳನ್ನ ಭರ್ತಿ ಮಾಡಿದ ನಂತರ, ಪಾವತಿ ಮಾಡುವ ಆಯ್ಕೆಯನ್ನ ಆರಿಸಿ. ಒಮ್ಮೆ ಪಾವತಿ ವಿಫಲವಾದ್ರೆ, ನೀವು ಮತ್ತೊಮ್ಮೆ 50 ರೂಪಾಯಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ ಎಂಬುದನ್ನ ಗಮನಿಸಿ, ಈ ಸರಳ ಪ್ರಕ್ರಿಯೆಯನ್ನ ಮಾಡಿದ ನಂತರ, ನಿಮ್ಮ ಅರ್ಕಾ ಲರ್ನಿಂಗ್ ಲೈಸೆನ್ಸ್’ನ್ನ 7 ದಿನಗಳಲ್ಲಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ. ಆದರೆ ನೀವು ನಿಮ್ಮ ಶಾಶ್ವತ ಪರವಾನಗಿಯನ್ನ ಪಡೆಯಲು ಬಯಸಿದರೆ, ಇದಕ್ಕಾಗಿ ನೀವು RTO ಕಚೇರಿಗೆ ಹೋಗಬೇಕಾಗುತ್ತದೆ.

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ವಾಹನ ಚಲಾವಣೆ ಅಪರಾಧ

ಡ್ರೈವಿಂಗ್ ಲೈಸೆನ್ಸ್ ಇಲ್ಲದೆ, ನೀವು ಭಾರತದಲ್ಲಿ ರಸ್ತೆಗಳಲ್ಲಿ ಓಡಿಸಲು ಸಾಧ್ಯವಿಲ್ಲ, ಆದ್ದರಿಂದ ಇದನ್ನು ವೈಯಕ್ತಿಕ ಪರಿಶೀಲನಾ ದಾಖಲೆಯಾಗಿಯೂ ಬಳಸಲಾಗುತ್ತದೆ. ಚಾಲನಾ ಪರವಾನಗಿ ನೀಡಿದ ದಿನದಿಂದ 20 ವರ್ಷಗಳ ವರೆಗೆ ಇದು ಅನ್ವಯಿಸುತ್ತದೆ.

Leave A Reply

Your email address will not be published.