Namratha Gowda: ಡ್ರೋನ್‌ ಪ್ರತಾಪ್‌ ಕೊಟ್ಟ ಶಾಕ್‌ಗೆ ಕಣ್ಣೀರಿಟ್ಟ ನಮ್ರತಾ, ಟ್ರೊಲ್ ಮಾಡಿದ ನೆಟ್ಟಿಗರು.

ಡ್ರೋನ್ ಪ್ರತಾಪ್ ಮಾಡಿದ ಈ ಕೆಲಸಕ್ಕೆ ನಮ್ರತಾ ಗೌಡ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

Drone Prathap And Namratha Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಕಾರ್ಯಕ್ರಮದಲ್ಲಿ ಒಂದು ತಂಡದಿಂದ ಒಂದು ತಂಡಕ್ಕೆ ಸ್ಪರ್ಧಿಗಳು ಹಾರಾಡುತ್ತಿರುವುದನ್ನು ಕಾಣಬಹುದಾಗಿದೆ. ಮೊದಲ ವಾರದಲ್ಲಿ ಇದ್ದ ಸ್ನೇಹ ಈಗ ಕಾಣುತ್ತಿಲ್ಲ. ಯಾರ ಜೊತೆ ತುಂಬ ಜಗಳ ಆಡುತ್ತಿದ್ದರೋ ಅವ್ರೆ ಈಗ ಬೆಸ್ಟ್ ಫ್ರೆಂಡ್ ಆಗಿದ್ದಾರೆ.

ಇದಕ್ಕೆ ಉತ್ತಮ ಉದಾಹರಣೆ ಅಂದರೆ ಸಂಗೀತ. ಸಂಗೀತ ಹಾಗು ಕಾರ್ತಿಕ್, ತನಿಷಾ ತುಂಬ ಉತ್ತಮ ಫ್ರೆಂಡ್ ಆಗಿದ್ದು ಒಂದು ಚಿಕ್ಕ ಜಗಳದಿಂದ ಸಂಗೀತ ವಿನಯ್ ತಂಡ ಸೇರಿಕೊಂಡರು ಹಾಗೆ ಈಗ ನಮ್ರತಾ ಗೌಡ ವಿನಯ್ ತಂಡ ಬಿಟ್ಟು ಪ್ರತಾಪ್ ತಂಡ ಸೇರಿ ಕಣ್ಣೀರಾಕುತ್ತಿದ್ದಾರೆ.

Drone Prathap And Namratha Gowda
Image Credit: Filmibeat

ಪ್ರತಾಪ್ ತಂಡ ಸೇರಿದ ನಮ್ರತಾ ಗೌಡ

Drone Prathap And Namratha Gowda ಉತ್ತಮ ಸ್ನೇಹಿತರಾಗಿದ್ದು, ಎಷ್ಟೋ ಬಾರಿ ಪ್ರತಾಪ್ ಕಣ್ಣೀರಾಕಿದಾಗ ಸಾಂತ್ವನ ಹೇಳಿದ್ದು ನಮ್ರತಾ ಗೌಡ. ಹಾಗೆ ಬಹಳ ಟಾಸ್ಕ್ ಸೋತು ಕಿಚ್ಚ ಸುದೀಪ್ ನಿಂದ ಬೈಸಿಕೊಳ್ಳುತ್ತಿದ್ದ ನಮ್ರತಾಗೆ ನಾಮಿನೇಶನ್ ವೇಳೆ ನಮಗೆ ಕಾಣಿಸದಿರುವ ನಮ್ರತಾ ಬೇರೆ ಇದ್ದಾರೆ, ಅವರು ಹೊರಗಡೆ ಬರಬೇಕು ಎಂದು ಪ್ರತಾಪ್ ಹೇಳಿದ್ದರು. ಬಿಗ್ ಬಾಸ್ ನಮ್ರತಾ ಗೌಡ ಬಳಿ ನೀವು ಮೈಕಲ್‌ ಅಥವಾ Drone Prathap ನೇತೃತ್ವದ ಯಾವ ತಂಡಕ್ಕೆ ಹೋಗಲು ಇಚ್ಛಿಸುತ್ತೀರಿ ಎಂದು ಆಫರ್‌ ನೀಡುತ್ತಾರೆ ಆಗ ಪ್ರತಾಪ್ ಮೇಲೆ ನಂಬಿಕೆ ಇಟ್ಟು ಡ್ರೋನ್ ಪ್ರತಾಪ್ ತಂಡ ಸೇರುತ್ತೇನೆ ಎಂದು ಹೇಳಿದ್ದಾರೆ

ನಮ್ರತಾ ಗೌಡ ರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟ ಪ್ರತಾಪ್

ಬಿಗ್ ಬಾಸ್ ನಿಂದ ಡ್ರೋನ್ ಪ್ರತಾಪ್ ಬಳಿ ನಿಮ್ಮ ತಂಡದಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಒಬ್ಬರನ್ನು ಹೊರಗಡೆ ಇಡಬೇಕು ಎಂದು ಸೂಚನೆ ಸಿಗುತ್ತದೆ. ಈ ವೇಳೆ Namratha Gowda ಹೆಸರನ್ನು ಪ್ರತಾಪ್‌ ಸೂಚಿಸುತ್ತಾರೆ. ಇದರಿಂದ ಬೇಸರಗೊಂಡ ನಮ್ರತಾ, ನಾನು ಪ್ರತಾಪ್‌ನ ನಂಬಿ ಅವನ ತಂಡಕ್ಕೆ ಹೋದೆ, ಆದರೆ ಅವನು ಅವಕಾಶ ಕೊಡಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ.

Namratha Gowda Latest News
Image Credit: TV9 Kannada

ಕಣ್ಣೀರಾಕಿ ಬೇಸರ ವ್ಯಕ್ತಪಡಿಸಿದ ನಮ್ರತಾ ಗೌಡ

ನಮೃತಾ ಗೌಡರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟ ಕುರಿತು ಹೊಸ ಪ್ರೋಮೋ ಬಿಡುಗಡೆಯಾಗಿದ್ದು, ಇದರಲ್ಲಿ ಡ್ರೋನ್‌ ಪ್ರತಾಪ್‌ ವಿರುದ್ಧ ನಮ್ರತಾ ಗೌಡ ಕಿಡಿಕಾರಿ ಕಣ್ಣೀರಿಟ್ಟಿರುವುದು ಕಾಣುತ್ತದೆ. ಆರಂಭದಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ತನ್ನನ್ನು ಹೊರಗಿಟ್ಟ ಹಿನ್ನೆಲೆಯಲ್ಲಿ ನಮ್ರತಾಗೆ ಬಹಳ ಬೇಜಾರಾಗಿದೆ. ನಾನು ಅವರ ತಂಡಕ್ಕೆ ಬರುವುದು ಇಷ್ಟ ಇಲ್ಲ ಆಗಿದ್ದರೆ ಮೊದಲೇ ಹೇಳಬಹುದಾಗಿತ್ತು ಆದರೆ ಈ ತರ ಮೋಸ ಮಾಡಬಾರದಿತ್ತು ಎಂದು ಪ್ರತಾಪ್ ವಿರುದ್ಧ ಮಾತನಾಡುತ್ತಾ ಕಣ್ಣೀರಾಕಿದ್ದಾರೆ .

Leave A Reply

Your email address will not be published.