Drone Prathap: ಈ ಕಾರಣಕ್ಕೆ ಗಳಗಳನೆ ಕಣ್ಣೀರು ಹಾಕಿದ ಪ್ರತಾಪ್, ಅಯ್ಯೋ ಪ್ರತಾಪ್ ಗೆ ಏನಾಯಿತು ಅಂದ ನೆಟ್ಟಿಗರು.

ನಟಿ ತಾರ ಮಾತಿಗೆ ಕಣ್ಣೀರಿಟ್ಟ ಡ್ರೋನ್ ಪ್ರತಾಪ್, ಅಷ್ಟಕ್ಕೂ ನಡೆದಿದ್ದಾದರೂ ಏನು...?

Drone Prathap Cries In Front Of Actress Tara: ಕಲರ್ಸ್ ಕನ್ನಡದಲ್ಲಿ (Colors Kannada) ಬಿಗ್ ಬಾಸ್ ಸೀಸನ್ 10 ಪ್ರಸಾರವಾಗುತ್ತಿದೆ (Bigg Boss Season 10). ಬಿಗ್ ಬಾಸ್ ಪ್ರಾರಂಭವಾಗಿ ಎರಡು ವಾರಗಳು ಕಳೆದಿದ್ದು, ಎರಡು ಎಲಿಮನೇಷನ್ ಕೂಡ ನಡೆದಿದೆ. ಈ ವಾರದಲ್ಲಿ ಗೌರೀಶ್ ಅವರು ಎಲಿಮನೆಟ್ ಆಗಿದ್ದಾರೆ.

ಹಾಗು ಮುಂದಿನ ವಾರ ಇನ್ನು ಚೆನ್ನಾಗಿ ಟಾಸ್ಕ್ ಮಾಡಿ ಎಂದು ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಹೇಳಿದ್ದಾರೆ. ಈ ನಡುವೆ ಈ ವಾರ ಹಬ್ಬದ ವಾರವಾಗಿದ್ದು, ಬಿಗ್ ಮನೆಗೆ ನಟಿ ತಾರ ಅಥಿತಿಯಾಗಿ ಬಂದಿದ್ದಾರೆ. ನಟಿ ತಾರ ಅವರನ್ನು ಬಿಗ್ ಬಾಸ್ ಸ್ಪರ್ಧಿಗಳು ಬಹಳ ಪ್ರೀತಿಯಿಂದ ಬರ ಮಾಡಿಕೊಂಡರು.

Drone Prathap Cries In Front Of Actress Tara
Image Credit: TV9kannada

ಬಿಗ್ ಬಾಸ್ ಮನೆಗೆ ನಟಿ ತಾರ ಎಂಟ್ರಿ

ಹಬ್ಬದ ಸಂಭ್ರಮಕ್ಕಾಗಿ ನಟಿ ತಾರ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ಮನೆಯಲ್ಲಿ ಹಬ್ಬದ ವಾತಾವರಣ ಇನ್ನು ಹೆಚ್ಚಾಗಿದೆ. ಮನೆಗೆ ಬಂದ ಅಥಿತಿಗೆ ಬಿಗ್ ಬಾಸ್ ಸ್ಪರ್ಧಿಗಳು ಸಿಹಿ ಮಾಡಿ ಕೊಟ್ಟರು. ಹಲವು ಸ್ಪರ್ಧಿಗಳನ್ನು ಕಾಲೆಳೆದ ತಾರಾ, ಮನೆಯವರೊಡನೆ ನಗು ನಗುತ್ತಲೇ ಚರ್ಚೆ ನಡೆಸಿದರು. ಅಷ್ಟೇ ಅಲ್ಲದೆ ಪ್ರತಿಯೊಬ್ಬರು ಹೇಗೆ ಆಟ ಆಡುತ್ತಿದ್ದಿರಿ ಹಾಗು ಹೇಗೆ ಆಡಬೇಕು ಎಂಬ ಐಡಿಯಾ ವನ್ನು ಸಹ ನೀಡಿದರು.

ಡ್ರೋನ್ ಪ್ರತಾಪ್ ಗೆ ಧೈರ್ಯ ಹೇಳಿದ ನಟಿ ತಾರ

ನಟಿ ತಾರ ಎಲ್ಲರ ಬಳಿ ಮಾತನಾಡುತ್ತಾ ಪ್ರತಾಪ್ ಅವರನ್ನು ಗಮನಿಸಿದಾಗ ಪ್ರತಾಪ್ ಅವರು ಒಬ್ಬರೇ ಮೌನಿಯಾಗಿ ಕುಳಿತಿದ್ದರು. ಅವರನ್ನು ಪ್ರೀತಿಯಿಂದ ಮಾತನಾಡಿಸಿದ ತಾರಾ, ನೀನು ಯಾಕೆ ಹೀಗಿದ್ದೀಯಾ? ಹೊರಗಡೆ ಎಷ್ಟು ನೋವು ಅನುಭವಿಸಿದ್ಯಾ ಅಂತ ಗೊತ್ತಿದೆ. ಯಾಕೆ ಮೌನಿಯಾಗಿದ್ಯಾ? ಈ ಬಿಗ್ ಬಾಸ್ ಮನೆ ನಿನಗೆ​ ದೊಡ್ಡ ವೇದಿಕೆ, ಇಲ್ಲಿ ಏನೇ ಇದ್ದರೂ ಹಂಚಿಕೋ ಇದಕ್ಕಿಂತ ಬೇರೆ ಜಾಗ ಬೇಕಾ? ಎಲ್ಲರೊಂದಿಗೂ ಬೆರೆಯಬೇಕು, ಹೆಚ್ಚಿಗೆ ಮಾತನಾಡು ಎಂದು ಹೇಳಿದರು.

Drone Prathap Latest News
Image Credit: TV9kannada

ತಾರಾ ಅವರ ಮಾತಿಗೆ ಮೌನದಿಂದಲೇ ಕುಳಿತ್ತಿದ್ದ ಪ್ರತಾಪ್​ ದುಃಖದಿಂದ ಕಣ್ಣೀರಿಟ್ಟರು. ನೀನು ಅಳಬೇಡ ಏನೇ ಇದ್ದರೂ ಹೇಳಿಕೋ, ನಿನ್ನ ಸಂಸ್ಥೆ ಚೆನ್ನಾಗಿ ನಡೆಸು, ನಿನ್ನ ಮನೆಗೆ ನಾನು ಬರುತ್ತೀನಿ, ಊಟ ಹಾಕಿಸು ಎಂದು ಹೇಳಿದರು. ಇದಕ್ಕೆ ಖಂಡಿತ ಎಂದು ಪ್ರತಾಪ್​ ಉತ್ತರಿಸಿದರು. ಈ ರೀತಿಯಾಗಿ ನಟಿ ತಾರ ಎಲ್ಲರೊಂದಿಗೆ ಹಬ್ಬ ಆಚರಿಸಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರು.

Leave A Reply

Your email address will not be published.