Drone Prathap: ಡ್ರೋನ್ ಪ್ರತಾಪ್ ಗೆ ದೊಡ್ಡ ಮೋಸ, ವೈರಲ್ ಆಗಿದೆ ಇನ್ಸ್ಟಾಗ್ರಾಮ್ ಪೋಸ್ಟ್.

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ವೈರಲ್.

Drone Prathap Instagram Post: ಬಿಗ್ ಬಾಸ್ ಸೀಸನ್ 10 (Bigg Boss Kannada Season 10) ಕನ್ನಡ ಪ್ರಾರಂಭ ಆದಾಗಿನಿಂದ ಡ್ರೋನ್ ಪ್ರತಾಪ್ (Drone Prathap) ಅವರ ಸುದ್ದಿಯೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲವರು ಡ್ರೋನ್ ಪ್ರತಾಪ್ (Drone Prathap) ಮೋಸಗಾರ ಇವನನ್ನು ಯಾರು ನಂಬೇಡಿ ಎಂದು ಹೇಳಿದರೆ.

ಇನ್ನು ಕೆಲವರು ಈತ ಬಹಳ ಒಳ್ಳೆಯ ವ್ಯಕ್ತಿ ಇವನು ಯಾರಿಗೂ ಮೋಸ ಮಾಡಿಲ್ಲ, ಒಂದು ವೇಳೆ ಮೋಸ ಮಾಡಿದ್ದರು ಈವಾಗ ಪ್ರತಾಪ್ ಎಲ್ಲಾವನ್ನು ತಿದ್ದುಕೊಂಡು ಒಳ್ಳೆ ವ್ಯಕ್ತಿ ಆಗಿದ್ದಾನೆ ಎಂಬ ಅಭಿಪ್ರಾಯವನ್ನು ಹೊರ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಬಿಗ್ ಬಾಸ್ ಗೆ ಡ್ರೋನ್ ಪ್ರತಾಪ್ ಬಂದ ಮೇಲೆ ಇವರ ವಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಮಟ್ಟಿಗೆ ತಿಳಿಯಬಹುದಾಗಿದೆ.

Drone Prathap Instagram Post
Image Credit: Instagram

ಬಿಗ್ ಬಾಸ್ ನಿಂದ ಅಭಿಮಾನಿಗಳನ್ನು ಗಳಿಸಿಕೊಂಡ ಡ್ರೋನ್ ಪ್ರತಾಪ್

ಆರಂಭದಲ್ಲಿ ಡ್ರೋನ್ ಪ್ರತಾಪ್ ಬಿಗ್ ಮನೆಯಲ್ಲಿ ಹಲವು ಟೀಕೆ ಹಾಗು ಅವಮಾನಗಳಿಗೆ ಒಳಗಾಗಬೇಕಾಯಿತು. ಆದ್ರೆ ಅವರಿಗೆ ಇದೆ ಪ್ಲಸ್ ಪಾಯಿಂಟ್ ಕೂಡ ಆಯಿತು ಎನ್ನಬಹುದು. ಯಾರು ಏನೇ ಅಂದರು ತುಂಬ ತಾಳ್ಮೆಯಿಂದ ಎಲ್ಲವನ್ನೂ ಸ್ವೀಕರಿಸಿ ಜನರ ಮೆಚ್ಚುಗೆಗೆ ಪಾತ್ರರಾದರು. ಬಿಗ್ ಮನೆಯ ಸಹನಾ ಮೂರ್ತಿ ಎಂದು ಅನ್ನಿಸಿಕೊಂಡು. ಇವರ ಸಹನೆಗೆ ಅಭಿಮಾನಿಗಳು ಫಿದಾ ಆಗಿ ಡ್ರೋನ್ ಪ್ರತಾಪ್ ಅವರೇ ಈ ಸಲದ ಬಿಗ್ ಬಾಸ್ ಗೆಲ್ಲಬೇಕು ಎನ್ನುತ್ತಿದ್ದಾರೆ. ಹಲವರು ಇವರ ಹೆಸರಿನ ಫ್ಯಾನ್‌ ಪೇಜ್‌ ತೆಗೆದು ಅವರ ಬೆಂಬಲಕ್ಕೆ ನಿಂತಿದ್ದಾರೆ.

 

View this post on Instagram

 

A post shared by Prathap N M (@droneprathap)

ಬಿಗ್ ಮನೆಯಲಿ ಅಸಲಿ ಆಟ ಪ್ರಾರಂಭಿಸಿದ ಡ್ರೋನ್ ಪ್ರತಾಪ್

ಬಿಗ್ ಮನೆಯಲ್ಲಿ ಮೊದಲ ವಾರ ಬಹಳ ಸೈಲೆಂಟ್ ಆಗಿದ್ದ ಡ್ರೋನ್ ಪ್ರತಾಪ್ ಕಿಚ್ಚ ಸುದೀಪ್ ಅವರ ಮಾತಿಗೆ ಹಾಗು ಅವರು ನೀಡಿದ ದೈರ್ಯಕ್ಕೆ ಓಪನ್ ಅಪ್ ಆಗಿ ಮಾತಿಗೆ ಮಾತು, ಏಟಿಗೆ ಏಟು ನೀಡುತ್ತಾ ಟಾಸ್ಕ್ ಗಳನ್ನೆಲ್ಲಾ ಚೆನ್ನಾಗಿ ಮಾಡುತ್ತಾ ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.

ಒಬ್ಬಂಟಿಯಾಗಿ ಕುಳಿತಿದ್ದ ಪ್ರತಾಪ್ ಈಗ ಎಲ್ಲರ ಜೊತೆ ಬೆರೆಯುತ್ತಿದ್ದಾರೆ. ಆದರೆ ಇದೆಲ್ಲದರ ನಡುವೆ ಮೋಸ ನಡೆಯುತ್ತಿರುವ ಕುರಿತು ಡ್ರೋನ್‌ ಪ್ರತಾಪ್‌ ಅವರ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಪೋಸ್ಟ್‌ ಒಂದನ್ನ ಶೇರ್‌ ಮಾಡಲಾಗಿದೆ. ಹಾಗು ಇನ್ನು ಕೆಲವರಲ್ಲಿ ಡ್ರೋನ್ ಪ್ರತಾಪ್ ಅವರನ್ನು ನಂಬಬೇಕೋ ಬೇಡವೋ ಎಂಬ ಗೊಂದಲ ಕೂಡ ಮೂಡಿದೆ.

Leave A Reply

Your email address will not be published.