Drone Prathap: ಬಿಗ್ ಬಾಸ್ ಮನೆಯಲ್ಲಿ ಇದ್ದುಕೊಂಡು ಜನರಿಗೆ ಚಾಲೆಂಜ್ ಹಾಕಿದ ಡ್ರೋನ್ ಪ್ರತಾಪ್, ಟ್ರೊಲ್ ಮಾಡಿದ ನೆಟ್ಟಿಗರು.
ಬಿಗ್ ಬಾಸ್ ಮನೆಯಲ್ಲಿ ಇದ್ದುಕೊಂಡು ಜನರಿಗೆ ಚಾಲೆಂಜ್ ಹಾಕಿದ ಡ್ರೋನ್ ಪ್ರತಾಪ್.
Drone Prathap In Bigg Boss: ಕಲರ್ಸ್ ಕನ್ನಡದಲ್ಲಿ (Colors Kannada) ಹೋದ ವಾರದಿಂದ ಬಿಗ್ಬಾಸ್ ಕನ್ನಡ ಸೀಸನ್ 10 (BBK Season 10) ಪ್ರಾರಂಭವಾಗಿದ್ದು, ಈಗಾಗಲೇ ಹಲವು ವಿಶೇಷತೆಗಳೊಂದಿಗೆ ಕಾರ್ಯಕ್ರಮ ಸಾಗುತ್ತಿದೆ. ಎಲ್ಲ ಸೆಲೆಬ್ರೆಟಿಗಳು ಒಬ್ಬರನೊಬ್ಬರು ಪರಿಚಯ ಮಾಡಿಕೊಂಡು ಜೊತೆಗೆ ಸೇರಿ ಬಿಗ್ ಬಾಸ್ ಮನೆಯ ಟಾಸ್ಕ್ ಗಳಲ್ಲಿ ಭಾಗವಹಿಸುತ್ತಿದ್ದಾರೆ.
ಆದ್ರೆ ಕಾರ್ಯಕ್ರಮ ಪ್ರಾಂಭವಾಗಿ ಒಂದು ವಾರ ಕೂಡ ಕಳೆಯದಿದ್ದರೂ ಡ್ರೋನ್ ಪ್ರತಾಪ್ ಅವರ ವಿಚಾರವಾಗಿ ಮನೆಯೊಳಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಡ್ರೋನ್ ಪ್ರತಾಪ್ ಮನೆಯೊಳಗೆ ಹೋದಾಗಿನಿಂದ ಸ್ಪರ್ಧಿಗಳ ಜೊತೆ ಬೆರೆಯುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.

ಎಲ್ಲಾ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್ ಅವರು ಹಲವು ಬಾರಿ ಕೆಲವು ವಿಚಾರಗಳಲ್ಲಿ ಸಿಕ್ಕಿಹಾಕಿಕೊಂಡಿರುವುದು ನಾವು ನೋಡಿರುತ್ತೇವೆ. ಈಗಾಗಲೇ ಕೆಲವು ಸುಳ್ಳುಗಳ ಮೂಲಕ ಟ್ರೊಲ್ ಗೆ ಒಳಗಾಗಿರುವ ಪ್ರತಾಪ್ ಇಂದಿಗೂ ತನ್ನ ವಾದವನ್ನು ಮಂಡಿಸುತ್ತಿರುವುದು ಕಾಣುತ್ತೇವೆ.
ಸೋಮವಾರ ಶಾಸಕ ಪ್ರದೀಪ್ ಈಶ್ವರ್ ದಿಢೀರ್ ಆಗಿ ಮನೆಯೊಳಗೆ ಬಂದು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಮನೆಗೆ ಎಂಟ್ರಿ ಕೊಡುವಾಗ ಗುಡ್ ಇಂಪ್ರೆಶನ್, ಬ್ಯಾಡ್ ಇಂಪ್ರೆಶನ್ ಯಾರ ಮೇಲೆ ಇದೆ ಎಂದು ಹೇಳಲು ಹೇಳಿದರು. ಆಗ ಬಹುತೇಕ ಸ್ಪರ್ಧಿಗಳು ಡ್ರೋನ್ ಪ್ರತಾಪ್ ಅವರನ್ನು ಬೆಟ್ಟು ಮಾಡಿ ತೋರಿಸಿದ್ದರು, ಪ್ರತಿಯೊಬ್ಬರು ನೀಡಿದ ಕಾರಣ ಕೂಡ ಒಂದೇ ಆಗಿತ್ತು.

ಯಾರ ಜೊತೆಯೂ ಹೊಂದಾಣಿಕೆ ಮಾಡಿಕೊಳ್ಳದ ಡ್ರೋನ್ ಪ್ರತಾಪ್
ಹಲವು ಬಾರಿ ಬಿಗ್ ಮನೆಯಲ್ಲಿ ಹೊಂದಾಣಿಕೆಯೇ ಬಹಳ ಪ್ರಮುಖ ಅಂಶವಾಗಿರುತ್ತದೆ. ಯಾರ ಜೊತೆಯೂ ಫ್ರೀ ಆಗಿ ಇರಲಿಲ್ಲ ಅಂದರೆ ಅವರು ಅದೇ ವಾರ ಮನೆಯಿಂದ ಹೊರ ಬರುವುದು ಖಚಿತವಾಗಿರುತ್ತದೆ. ಹಾಗೆಯೆ ಡ್ರೋನ್ ಪ್ರತಾಪ್ ಕೂಡ ಇದೆ ವಿಚಾರವಾಗಿ ಚರ್ಚೆಗೆ ಒಳಗಾಗುತ್ತಿದ್ದಾರೆ.
ಸ್ಪರ್ಧಿಗಳಾದ ರಕ್ಷಕ್ ಬುಲೆಟ್, ವಿನಯ್ ಗೌಡ, ನೀತು ವನಜಾಕ್ಷಿ, ಸಿರಿ, ಗೌರೀಶ್ ಅಕ್ಕಿ, ವರ್ತೂರು ಸಂತೋಷ್, ತುಕಾಲಿ ಸಂತು ಹಾಗೂ ಸ್ನೇಹಿತ್ ಗೌಡ ಮತ್ತಿತರರು ಡ್ರೋನ್ ಪ್ರತಾಪ್ ಬಗ್ಗೆ ತಮಗಾದ ಬ್ಯಾಡ್ ಇಂಪ್ರೆಶನ್ ವಿವರಿಸಿದರು. ಹೆಚ್ಚಾಗಿ ನಮಗೆ ಅವರು ಕನೆಕ್ಟ್ ಆಗುತ್ತಿಲ್ಲ. ಎಲ್ಲರ ಜತೆ ಬೆರೆಯುತ್ತಿಲ್ಲ ಎಂಬ ಕಾರಣ ಹಂಚಿಕೊಂಡರು. ಆದ್ರೆ ಪ್ರತಾಪ್ ಅವರು ಈ ವಿಚಾರವನ್ನು ಕೂಡ ಸಮರ್ಥಿಸಿಕೊಂಡು ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಾಣುತ್ತಿರಲಿಲ್ಲವಾಗಿತ್ತು .