Bigg Boss Pratap : ಬಿಗ್ ಬಾಸ್ ಮನೆಯಲ್ಲಿ ಇರುವ ಡ್ರೋನ್ ಪ್ರತಾಪ್ ಅವರ ಪ್ರತಿ ವಾರದ ಸಂಭಾವನೆ ಎಷ್ಟು ಗೊತ್ತಾ…? ದುಬಾರಿ ಸಂಭಾವನೆ.

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಬಿಗ್ ಬಾಸ್ ಷೋ ನಿಂದ ಗಳಿಸುವ ಸಂಭಾವನೆ ಕೇಳಿದರೆ ಶಾಕ್ ಆಗುವುದಂತೂ ಖಚಿತ ,

Drone Prathap Salary In Bigg Boss Kannada Season 10: ಕಿರುತರೆಯ ಬಿಗ್ ಶೋ ಬಿಗ್ ಬಾಸ್ ಸೀಸನ್ 10 ಕನ್ನಡ ಪ್ರಾರಂಭ ಆಗಿ ಹಲವು ವಾರಗಳೇ ಕಳೆದಿದೆ. ಈಗಾಗಲೇ 03 ಸ್ಪರ್ಧಿಗಳು ಶೋ ನಿಂದ ಹೊರ ಬಂದಿದ್ದಾರೆ. ಬಿಗ್ ಬಾಸ್ (Bigg Boss) ಮನೆಯಲ್ಲಿ ಪ್ರೀತಿ, ಸ್ನೇಹ ಹಾಗು ಅದರ ಜೊತೆಗೆ ಜಗಳ, ವಾದಗಳು ನಡೆಯುತ್ತಿರುತ್ತದೆ.

ಪ್ರಾರಂಭದಲ್ಲಿ ಎಲ್ಲಾ ಸ್ಪರ್ದಿಗಳು ಡ್ರೋನ್ ಪ್ರತಾಪ್ (Drone Prathap) ಅವರನ್ನು ಟಾರ್ಗೆಟ್ (Target) ಮಾಡಲು ಪ್ರಾರಂಭಿಸಿದ್ದು, ಇಂದಿಗೂ ಕೆಲ ಸ್ಪರ್ಧಿಗಳು ಅವರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಮೊದಲ ವಾರದಲ್ಲೇ ಸುದೀಪ್ ಅವರು ಪ್ರತಾಪ್ ಅವರನ್ನು ಓಪನ್ ಅಪ್ ಮಾಡಿಸಿ ಆಟ ಹೇಗೆ ಆಡಬೇಕೆನ್ನುದನ್ನು ತೋರಿಸಿಕೊಟ್ಟಿದ್ದಾರೆ. ಹಾಗು ಮಾತಿಗೆ ಮಾತು, ಏಟಿಗೆ ಏಟು ಹೇಗೆ ನೀಡಬೇನ್ನುದನ್ನು ಈ ವಾರ ಹೇಳಿದ್ದಾರೆ.

Drone prathap salary
Image Credit: Cinefry

ಡ್ರೋನ್ ವಿಷಯವಾಗಿ ಅವಮಾನಿಸಿ, ತಮಾಷೆ ಮಾಡಿದ ಸ್ಪರ್ಧಿಗಳು

ಬಿಗ್ ಬಾಸ್ ಶೋ ಆರಂಭ ಆದಾಗಿನಿಂದ ಕೇಳಿ ಬರುತ್ತಿದ್ದ ವಿಷಯವೇನೆಂದರೆ ಡ್ರೋನ್ ಪ್ರತಾಪ್ ಯಾರ ಜೊತೆಗೂ ಬೆರೆಯುತ್ತಿಲ್ಲ ಎನ್ನುವುದು. ಇದೇ ರೀಸನ್ ಕೊಟ್ಟು ಪ್ರತಾಪ್ ಅವರನ್ನು ಎಲ್ಲರೂ ನೊಮಿನೇಟ್ ಮಾಡಿದ್ದರು. ಇದೆಲ್ಲದರ ನಂತರ ಪ್ರತಾಪ್ ಕೂಡ ತುಂಬ ಡಿಸ್ಟರ್ಬ್ ಆಗಿದ್ದರು. ಅಷ್ಟೇ ಅಲ್ಲದೆ ಸ್ಪರ್ಧಿಗಳು ಅವರನ್ನು ಟಾರ್ಗೆಟ್ ಮಾಡಿದ್ದಲ್ಲದೆ ಡ್ರೋನ್ ವಿಷಯವಾಗಿ ಅವಮಾನಿಸಿ ಮಾತಾಡಿದ್ದು, ತಮಾಷೆ ಮಾಡಿದ್ದು, ಎಲ್ಲಾ ಸ್ವಲ್ಪ ಅತಿಯಾಗೇ ಇತ್ತು. ಇದನೆಲ್ಲ ಅನುಭವಿಸಿದ ಡ್ರೋನ್ ಪ್ರತಾಪ್ ಇನ್ನು ಜಾಸ್ತಿನೇ ಸೈಲೆಂಟ್ ಆಗಿದ್ದರು.

ಸುದೀಪ್ ಮಾತಿನಿಂದ ಬದಲಾದ ಡ್ರೋನ್ ಪ್ರತಾಪ್

ವಾರದ ಚರ್ಚೆಯಲ್ಲಿ ಕಿಚ್ಚ ಸುದೀಪ್ ಅವರು ಡ್ರೋನ್ ಪ್ರತಾಪ್ ಗೆ ಮಾಡಿದ ಅವಮಾನ ಹಾಗು ಬೇಜಾರಿನ ಕುರಿತು ಮಾತನಾಡಿ ಇದಕ್ಕೆ ಕಾರಣವಾದ ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲದೆ ಒಬ್ಬ ಮನುಷ್ಯ ಕೆಲವು ತಪ್ಪುಗಳಿಂದ ಹೊರ ಬರಲು ನಾವು ಸಹಾಯ ಮಾಡಬೇಕೆ ಹೊರತು ಅವರನ್ನು ದೂರ ತಳ್ಳಬಾರದು ಹಾಗು ಸಮಯಾವಕಾಶ ನೀಡುವುದು ಬಹಳ ಮುಖ್ಯ ಎಂದು ಪ್ರತಾಪ್ ಪರವಾಗಿ ಮಾತನಾಡಿದರು ಹಾಗು ಪ್ರತಾಪ್ ಅವರಿಗೆ ಧೈರ್ಯ ತುಂಬಿ ಮನೆಯವರ ಜೊತೆ ಹೇಗೆ ಬೇರೆಯಬೇನ್ನುವುದನ್ನು ತಿಳಿಸಿ ಹೇಳಿದರು. ನಂತರ ತನಿಷಾ ಹಾಗು ಸಂಗೀತ ಜೊತೆ ಸೇರಿ ಪ್ರತಾಪ್ ಸಕತ್ ಸ್ಟೆಪ್ ಹಾಕಿ ಎಲ್ಲರನ್ನು ರಂಜಿಸಿದ್ದರು.

Drone Prathap Salary In Bigg Boss Kannada Season 10
Image Credit: Vistaranews

ಬಿಗ್ ಬಾಸ್ ನಲ್ಲಿ ಡ್ರೋನ್ ಪ್ರತಾಪ್ ಪಡೆಯುತ್ತಿರುವ ಸಂಭಾವನೆ

ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳು ಎಷ್ಟು ವಾರ ಇದ್ದು ಆಟ ಆಡುತ್ತಾರೆ ಅದರ ಮೇಲೆ ಸಂಭಾವನೆ ನಿಗದಿ ಆಗಿರುತ್ತದೆ. ವಾರದ ಲೆಕ್ಕಾಚಾರದಲ್ಲಿ ಸಂಭಾವನೆ ನೀಡಲಾಗುವುದು. ಕೆಲವು ಪ್ರಮುಖ ವರದಿಗಳ ಪ್ರಕಾರ ಡ್ರೋನ್ ಪ್ರತಾಪ್ ವಾರಕ್ಕೆ 10 ರಿಂದ 13 ಸಾವಿರ ಹಣವನ್ನು ಸಂಭಾವನೆ ಆಗಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.