Education Loans: ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ ಸಾಲಕ್ಕೆ ಹಣ, ಹೊಸ ಯೋಜನೆ ಆರಂಭಿಸಿದ ಸರ್ಕಾರ
ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಶುಭ ಸುದ್ದಿ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹೊಸ ಯೋಜನೆಗೆ ಜಾರಿಗೆ.
Karnataka Government Education Loan: ಕರ್ನಾಟಕದಲ್ಲಿ ವಿದ್ಯಾರ್ಥಿಗಳಿಗಾಗಿ ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಹಾಗು ಯಾರಿಗೂ ಆರ್ಥಿಕ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಈ ಯೋಜನೆಯು ಬಹಳ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ.
2023-24ನೇ ಸಾಲಿನ ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಈಗ, ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಇರುವವರು ಈ ಯೋಜನೆಯಡಿ ಅರ್ಜಿ ಹಾಕಬಹುದಾಗಿದೆ.
ಅರ್ಜಿ ಹಾಕಲು ಬೇಕಾಗುವ ಅರ್ಹತೆ
ಅರಿವು ಶೈಕ್ಷಣಿಕ ಸಾಲ ಯೋಜನೆ ಅಡಿಯಲ್ಲಿ ಅರ್ಜಿಹಾಕುವ ಅರ್ಜಿದಾರರ ವಯಸ್ಸು 18 ವರ್ಷ ಮೇಲ್ಪಟ್ಟು, 35 ವರ್ಷದ ಒಳಗಿನವರು ಆಗಿರಬೇಕು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ.6,00,000/-ಗಳ ಮಿತಿಯ ಒಳಗೆ ಇರಬೇಕು. ಹಾಗು ಈ ಯೋಜನೆಯಡಿ ಅರ್ಜಿ ಹಾಕಲು ಸಿ.ಇ.ಟಿ/ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ & ಪಿಎಚ್ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈಗ ಸಾಲ ಸೌಲಭ್ಯ ಪಡೆಯಬಹುದು.
ಅರಿವು ಶೈಕ್ಷಣಿಕ ಸಾಲ ಯೋಜನೆಗೆ ಅರ್ಜಿ ಹಾಕುವ ವಿಧಾನ
ಈ ಯೋಜನೆಯಡಿ ಅರ್ಜಿ ಹಾಕಲು ಆಸಕ್ತ ವಿದ್ಯಾರ್ಥಿಗಳು ನವೆಂಬರ್ 30ರ ಒಳಗೆ ಅರ್ಜಿಗಳನ್ನು ವೈಬ್ ಸೈಟ್ www.kacdc.karnataka.gov.in ನಲ್ಲಿ ಸಲ್ಲಿಸಬಹುದು. ಹಾಗೇ ಹೆಚ್ಚಿನ ಮಾಹಿತಿಗಾಗಿ, ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಉತ್ತರ ಜಿಲ್ಲೆ, ನಂ.324/62, ಸರ್ವಶೀಲಾ ಕಾಂಪ್ಲೆಕ್ಸ್, ಬಳ್ಳಾರಿ ಮೈನ್ ರೋಡ್, ಗಂಗಾನಗರ, ಬೆಂಗಳೂರು-560 032 ಸಂಪರ್ಕಿಸಬಹುದು.
ಅಥವಾ ನಿಗಮದ ಜಿಲ್ಲಾ ಕಚೇರಿ ಸಹಾಯವಾಣಿ ಸಂಖ್ಯೆ 080-23539600 ಅಥವಾ 080-23539601 ಗೆ ಸಂಪರ್ಕಿಸಬಹುದು ಎಂದು ಬೆಂಗಳೂರು ಉತ್ತರ ಜಿಲ್ಲೆ, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಜಿಲ್ಲಾ ವ್ಯವಸ್ಥಾಪಕರು ಈಗ ಮಾಹಿತಿ ನೀಡಿದ್ದಾರೆ. ಅಗತ್ಯ ಇರುವ ಮತ್ತು ಆಸಕ್ತ ಅರ್ಹ ವಿದ್ಯಾರ್ಥಿಗಳು ಈ ಸಾಲ ಸೌಲಭ್ಯದ ಸಹಾಯ ಪಡೆಯಲು ಈ ಮೂಲಕ ತಿಳಿಸಲಾಗಿದೆ.
ಈ ಯೋಜನೆಯಡಿ ಅರ್ಜಿ ಹಾಕಲು ಈ ನಿಯಮ ಕಡ್ಡಾಯ
ಈ ಯೋಜನೆಯಡಿ ಅರ್ಜಿ ಹಾಕಲು ಮೊದಲನೇದಾಗಿ ಕರ್ನಾಟಕ ರಾಜ್ಯದವರು ಆಗಿರಬೇಕು. ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯ ಜೋಡಣೆ & ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಸೀಡ್ ಮಾಡಿಸಿರಬೇಕು.
ಸಾಮಾನ್ಯ ವರ್ಗದಲ್ಲಿ ಆರ್ಯವೈಶ್ಯ ಸಮುದಾಯಕ್ಕೆ ಸೇರಿರಬೇಕು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು. ಇನ್ನೂ ಪ್ರಮುಖವಾಗಿ ಪ್ರಮಾಣ ಪತ್ರ ಚಾಲ್ತಿಯಲ್ಲಿರಬೇಕು. ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಈ ಸಾಲ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.