Drone Pratap : ಡ್ರೋನ್ ಮೂಲಕ ಫೇಮಸ್ ಆಗಿದ್ದ ಡ್ರೋನ್ ಪ್ರತಾಪ್ ಅವರ ನಿಜವಾದ ವಿದ್ಯಾರ್ಹತೆ ಏನು…? ಇಲ್ಲಿದೆ ಡೀಟೇಲ್ಸ್.

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಅವರ ವಿದ್ಯಾರ್ಹತೆ ಕೇಳಿದರೆ ಶಾಕ್ ಆಗುವುದು ಖಚಿತ, ಉತ್ತಮ ತಾಂತ್ರಿಕ ಜ್ಞಾನವನ್ನು ಇವರು ಹೊಂದಿದವರಾಗಿದ್ದಾರೆ

Educational Qualification Of Drone Pratap: ಕನ್ನಡ ಕಿರುತರೆಯ ಬಿಗ್ ಶೋ ಬಿಗ್ ಬಾಸ್ (Bigg Boss) ಸೀಸನ್ 10 ಬಹಳ ಚೆನ್ನಾಗಿ ಮೂಡಿ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರತಿ ಸ್ಪರ್ಧಿಗಳು ಒಂದಲ ಒಂದು ರೀತಿಯಲ್ಲಿ ಟ್ಯಾಲೆಂಟ್ ಇರುವವರೇ ಆಗಿದ್ದಾರೆ. ಹಾಗು ಈ ಸಲದ ಬಿಗ್ ಬಾಸ್ ಶೋ ದಿನಕ್ಕೊಂದು ತಿರುವನ್ನು ಹೊಂದಿರುತ್ತದೆ.

ಪ್ರತಿ ಸ್ಪರ್ಧಿಗಳು ಬಹಳ ಚುರುಕ್ಕಾಗಿದ್ದು, ಸ್ನೇಹಕ್ಕೂ ಸೈ, ಜಗಳಕ್ಕೂ ಸೈ, ಟಾಸ್ಕ್ ಗು ಸೈ ಆನಿಸಿಕೊಂಡಿದ್ದಾರೆ. ಎಲ್ಲಾ ಸ್ಪರ್ಧಿಗಳ ಜೊತೆ ಕರ್ನಾಟಕಕ್ಕೆ ಒಂದು ಸಮಯದಲ್ಲಿ ಚಳ್ಳೆ ಹಣ್ಣು ತಿನ್ನಿಸಿದ ಡ್ರೋನ್ ಪ್ರತಾಪ್ ಕೂಡ ಭಾಗವಹಿಸಿದ್ದಾರೆ. ಆದರೆ ತಪ್ಪಿನ ಅರಿವನ್ನು ಹೊಂದಿದ ಪ್ರತಾಪ್ ಮುಗ್ದತೆ ಹಾಗು ಚುರುಕು ತನದಿಂದ ತನ್ನ ಆಟವನ್ನು ಆಡುತ್ತಿದ್ದಾರೆ.           

Drone Pratap Latest News
Image Credit: Zeenews

 

ಬಹಳ ಅವಮಾನಕ್ಕೆ ಒಳಗಾದ ಸ್ಪರ್ಧಿ ಡ್ರೋನ್ ಪ್ರತಾಪ್
ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಹೊಸತರಲ್ಲಿ ಡ್ರೋನ್ ಪ್ರತಾಪ್ ಮಾಡಿದ ತಪ್ಪಿನ ಬಗ್ಗೆ ಕೆಲವು ಸ್ಪರ್ಧಿಗಳು ಅವಮಾನ ಮಾಡಿ ಹೀಯಾಳಿಸಿದ್ದರು, ಅಷ್ಟೇ ಅಲ್ಲದೆ ಎಲ್ಲರೂ ಇವರನ್ನೇ ಟಾರ್ಗೆಟ್ ಮಾಡಿ ನಾಮಿನೇಟ್ ಮಾಡಿದ್ದರು.

ಯಾವುದಕ್ಕೂ ಜಗ್ಗದ ಪ್ರತಾಪ್ ತನ್ನ ಆಟವನ್ನು ಚೆನ್ನಾಗೆ ಆಡಿದ್ದಾರೆ ಹಾಗು ಸುದೀಪ್ ಅವರು, ಮಾಡಿದ ತಪ್ಪನ್ನು ಸರಿ ಮಾಡಿಕೊಳ್ಳುವುದು ಒಳ್ಳೆಯ ಗುಣ ಹಾಗು ಅಂತವರಿಗೆ ನಾವು ಸಪ್ಪೋರ್ಟ್ ಮಾಡಬೇಕು ಎಂದು ಹೇಳಿ ಪ್ರತಾಪ್ ಅವರನ್ನು ಓಪನ್ ಅಪ್ ಮಾಡಿದ್ದರು. ತದನಂತರ ಇನ್ನಷ್ಟು ಧೈರ್ಯ ಪಡೆದ ಪ್ರತಾಪ್ ಮಾತಿಗೆ ಮಾತು ಕೊಡುತ್ತಾ ಟಾಸ್ಕ್ ಅನ್ನು ಚೆನ್ನಾಗಿ ಆಡುತ್ತಿದ್ದಾರೆ.

Educational Qualification Of Drone Pratap
Image Credit: Schemesiri

ಡ್ರೋನ್ ಪ್ರತಾಪ್ ಅವರು ಪಡೆದ ಶಿಕ್ಷಣ

ಡ್ರೋನ್ ಪ್ರತಾಪ್ ಅವರು ಹಳ್ಳಿಯಲ್ಲಿ ರೈತರ ಕುಟುಂಬದಲ್ಲಿ ಜನಿಸಿದ್ದರು. ಪ್ರತಾಪ್’ಗೆ ತಾಂತ್ರಿಕ ಜ್ಞಾನ ಉತ್ತಮವಾಗಿದೆ. ಪ್ರಸ್ತುತ ಸ್ಟಾರ್ಟಪ್ ಕಂಪನಿ ಪ್ರಾರಂಭಿಸಿರುವ ಪ್ರತಾಪ್ ಬೆಂಗಳೂರಿನ ಜೈನ್ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್’ನಲ್ಲಿ ಶಾಲಾ ಶಿಕ್ಷಣ ಪೂರೈಸಿ ಬಳಿಕ JSS ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ ಮತ್ತು ಕಾಮರ್ಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ. ಬಿಗ್ ಬಾಸ್ ನಲ್ಲಿ ಇವರು ಗೆಲುವನ್ನು ಸಾಧಿಸಲು ಅನ್ನುವುದು ಬಹಳ ಜನರ ಅಭಿಪ್ರಾಯ ಆಗಿದೆ.

Leave A Reply

Your email address will not be published.