Educational Tour: ಡಿಸೆಂಬರ್ ತಿಂಗಳ ಅಂತ್ಯಕ್ಕೂ ಮುನ್ನ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್, ಶಿಕ್ಷಣ ಇಲಾಖೆಯ ಘೋಷಣೆ.

ಶಾಲಾ ಮಕ್ಕಳ ಪ್ರವಾಸದ ಕುರಿತಂತೆ ಆದೇಶ ನೀಡಿದ ಶಿಕ್ಷಣ ಇಲಾಖೆ.

School Educational Tour: ರಾಜ್ಯದಲ್ಲಿ ಶಾಲಾ ಮಕ್ಕಳಿಗಾಗಿ ಹೊಸ ನಿಯಮ ಜಾರಿಗೆ ಬಂದಿದೆ, ಈ ನಿಯಮ ಮಕ್ಕಳ ಮುಖದಲ್ಲಿ ನಗು ತರಿಸುವುದು ಖಚಿತ ಯಾಕೆಂದರೆ ವರ್ಷಕ್ಕೆ ಒಂದು ಬಾರಿ ಈ ದಿನಕ್ಕಾಗಿ ವಿದ್ಯಾರ್ಥಿಗಳು ಕಾಯುತ್ತಿರುತ್ತಾರೆ, ಅದೇನೆಂದರೆ ಶೈಕ್ಷಣಿಕ ಪ್ರವಾಸ. ಹೌದು ಶೈಕ್ಷಣಿಕ ಪ್ರವಾಸ ಅಂದರೆ ಯಾರಿಗೆ ಇಷ್ಟ ಆಗುವುದಿಲ್ಲ ಹೇಳಿ. ವರ್ಷ ಪೂರ್ತಿ ಓದು, ಪರೀಕ್ಷೆ ಬರೆಯಿರಿ ಎಂದು ಕೇಳಿ ವಿದ್ಯಾರ್ಥಿಗಳಿಗೂ ಸಾಕಾಗಿರುತ್ತದೆ ಹಾಗಾಗಿ ಸರ್ಕಾರ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿರುವುದು ಬಹಳ ಸಂತೋಷದ ವಿಷಯ ಆಗಿದೆ.

School Educational Tour
Image Credit: Hosakannada

ಹೊರ ರಾಜ್ಯಗಳಿಗೂ ಪ್ರವಾಸಕ್ಕೆ ಹೋಗಲು ಅನುಮತಿ

ತನ್ನ ಸ್ನೇಹಿತರ ಜೊತೆ ವಿಧ್ಯಾರ್ಥಿಗಳು ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಗೂ ಶೈಕ್ಷಣಿಕ ಪ್ರವಾಸದ ಹೆಸರಲ್ಲಿ ಸುತ್ತಾಡಬಹುದಾಗಿದೆ ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶೈಕ್ಷಣಿಕ ಪ್ರವಾಸದ ವೇಳೆ ವಿದ್ಯಾರ್ಥಿಗಳನ್ನು ಹೊರ ರಾಜ್ಯಗಳಿಗೆ ಕರೆದೊಯ್ಯಲು ಜಿಲ್ಲಾ ಉಪನಿರ್ದೇಶಕರು ಇಲಾಖೆಯಿಂದ ಅನುಮತಿ ಕೇಳಿದ್ದರು.

Educational Tour in school
Image Credit: so.city

ಭಾರತದಾದ್ಯಂತ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅವಕಾಶ

ಹೊರ ರಾಜ್ಯಗಳಿಗೆ ಶೈಕ್ಷಣಿಕ ಪ್ರವಾಸ ಹೋಗಲು ಜಿಲ್ಲಾ ಉಪನಿರ್ದೇಶಕರು ಇಲಾಖೆಗೆ ಅನುಮತಿ ಕೇಳಲಾಗಿತ್ತು ಇದಕ್ಕೆ ಇಲಾಖೆಯು ರಾಜ್ಯ ಮಾತ್ರವಲ್ಲ, ಭಾರತದಾದ್ಯಂತ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಅಲ್ಲದೆ, ಭಾರತೀಯ ರೈಲುಗಳಲ್ಲೂ ಪ್ರವಾಸ ಕೈಗೊಳ್ಳಬಹುದು.

ಇದಕ್ಕೆ ಷರತ್ತುಗಳನ್ವಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನುಮತಿ ನೀಡಬಹುದು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ. ಕಾವೇರಿ ಸುತ್ತೋಲೆ ಹೊರಡಿಸಿದ್ದಾರೆ. ಈ ಹೇಳಿಕೆಯ ಆಧಾರದ ಮೇಲೆ ಪ್ರತಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಇನ್ನು ಮುಂದೆ ಭಾರತದಾದ್ಯಂತ ಶೈಕ್ಷಣಿಕ ಪ್ರವಾಸ ಕೈಗೊಳ್ಳಬಹುದಾಗಿದೆ.

Leave A Reply

Your email address will not be published.