Gruha Jyoti: ಇಂತಹ ಮನೆಯ ಫ್ರೀ ಕರೆಂಟ್ ಬಂದ್ ಮಾಡಿದ ರಾಜ್ಯ ಸರ್ಕಾರ, ಗೃಹ ಜ್ಯೋತಿ ನಿಯಮದಲ್ಲಿ ಬದಲಾವಣೆ.
ಇನ್ನುಮುಂದೆ ಇಂತವರಿಗೆ ಸಿಗಲ್ಲ ಉಚಿತ ಕರೆಂಟ್.
Electricity Bill Payment: ರಾಜ್ಯ ಸರ್ಕಾರ ಜಾರಿಗೆ ತಂದ 05 ಯೋಜನೆಯಲ್ಲಿ ಗ್ರಹ ಜ್ಯೋತಿ (Gruha Jyoti) ಯೋಜನೆ ಕೂಡ ಒಂದಾಗಿದ್ದು, ಈ ಯೋಜನೆಯಡಿಯಲ್ಲಿ 200 ಯುನಿಟ್ ಕ್ಕಿಂತ ಕಡಿಮೆ ವಿದ್ಯುತ್ ಬಳಸುವ ಪ್ರತಿ ಕುಟುಂಬಗಳಿಗೂ ಉಚಿತ ವಿದ್ಯುತ್ ನೀಡಲಾಗುತ್ತಿದೆ.
ಹಾಗಾಗಿ ವಿದ್ಯುತ್ ಬಿಲ್ ಬಾಕಿ ಮಾಡಿಕೊಂಡವರು ಸೆಪ್ಟೆಂಬರ್ 30 ರ ಒಳಗೆ ಬಿಲ್ ಪಾವತಿಸುವಂತೆ ಸರಕಾರ ನಿಯಮ ಜಾರಿ ಮಾಡಿತ್ತು ಒಂದು ವೇಳೆ ಬಿಲ್ ಪಾವತಿ ಮಾಡದಿದ್ದರೆ ಈ ಯೋಜನೆಯ ಫಲಾನುಭವಿಗಳಾಗಲು ಸಾಧ್ಯವಿಲ್ಲಎಂದು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಕೊನೆಯ ದಿನವಾಗಿದೆ
ನಿನ್ನೆ ಸಂಜೆಯೊಳಗೆ ಬಾಕಿ ವಿದ್ಯುತ್ ಪಾವತಿಸುವಂತೆ ಗ್ರಾಹಕರಿಗೆ ಜೆಸ್ಕಾಂ ಸೂಚನೆ ನೀಡಿದೆ. ಪಂಚಾಯ್ತಿ ಮೂಲಕ ವಿದ್ಯುತ್ ಬಾಕಿ ಬಿಲ್ ಪಾವತಿಗೆ ಮನವಿ ಜೆಸ್ಕಾಂ ಮಾಡಿದ್ದು, ವಿದ್ಯುತ್ ಬಿಲ್ ಬಾಕಿ ಉಳಿಸಿದ್ರೇ ಗೃಹ ಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸಿಗಲ್ಲ ಎಂಬ ಸಂದೇಶ ಸಾರುತ್ತಿದೆ.
ಅದೇ ರೀತಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಮಡಿಕೇರಿ ವಿಭಾಗ ವ್ಯಾಪ್ತಿಯ ಗೃಹ ವಿದ್ಯುತ್ ಬಳಕೆ ಗ್ರಾಹಕರಿಗೆ ಸಂಬಂಧಿಸಿದಂತೆ ಗೃಹ ಜ್ಯೋತಿ ಯೋಜನೆ ಪೂರ್ವದ ವಿದ್ಯುತ್ ಬಾಕಿ ಶುಲ್ಕ ಪಾವತಿಸಲು ಸೆಪ್ಟಂಬರ್ 30 ಕಡೆಯ ದಿನವಾಗಿದೆ ಎಂದು ಸೆಸ್ಕ್ ನ ಪ್ರಕಟಣೆ ತಿಳಿಸಿದೆ.
ವಿದ್ಯುತ್ ಬಿಲ್ ಬಾಕಿ ಇದ್ದರೆ ವಿದ್ಯುತ್ ಸಂಪರ್ಕ ಕಡಿತ
ಬಾಕಿ ಶುಲ್ಕ ಪಾವತಿಗೆ ಈಗಾಗಲೇ ಸೆಪ್ಟಂಬರ್ 30 ರ ಗಡುವು ನೀಡಲಾಗಿತ್ತು. ಅದರಂತೆ ಹಲವು ಗ್ರಾಹಕರು ಬಾಕಿ ಶುಲ್ಕ ಪಾವತಿಸಿದ್ದಾರೆ.ವಿದ್ಯುತ್ ಬಾಕಿ ಉಳಿಸಿಕೊಂಡ ಗ್ರಾಹಕರಿಗೆ ಯಾವುದೇ ಮುನ್ಸೂಚನೆ ನೀಡದೇ ಅಕ್ಟೋಬರ್ 01 ರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಅನಿವಾರ್ಯವಾಗಿರುತ್ತದೆ ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ತಿಳಿಸಿದ್ದಾರೆ.