Alert: ಸರ್ಕಾರದ ಈ ತುರ್ತು ‘ಎಚ್ಚರಿಕೆ ಸಂದೇಶ’ ನಿಮ್ಮ ಮೊಬೈಲ್ ಗೂ ಬಂದಿದ್ಯಾ..? ಏನಿದು ತಿಳಿಯಿರಿ
ಭಾರತ ಸರ್ಕಾರವು ಹಲವಾರು ಸ್ಮಾರ್ಟ್ ಫೋನ್ ಗಳಿಗೆ ಟೆಸ್ಟ್ ಫ್ಲ್ಯಾಶ್ ಕಳುಹಿಸುವ ಮೂಲಕ ತುರ್ತು ಎಚ್ಚರಿಕೆಯನ್ನು ಜನಸಾಮಾನ್ಯರಿಗೆ ನೀಡಿದೆ.
Emergency Alert On Your Phone: ಭಾರತವು ಪ್ರಸ್ತುತ 650 ಮಿಲಿಯನ್ ಸ್ಮಾರ್ಟ್ ಫೋನ್(Smart Phone) ಬಳಕೆದಾರರನ್ನು ಹೊಂದಿದೆ. ಭಾರತ ಸರ್ಕಾರವು ಹಲವಾರು ಸ್ಮಾರ್ಟ್ ಫೋನ್ ಗಳಿಗೆ ಟೆಸ್ಟ್ ಫ್ಲ್ಯಾಶ್ ಕಳುಹಿಸುವ ಮೂಲಕ ತುರ್ತು ಎಚ್ಚರಿಕೆಯನ್ನು ಜನಸಾಮಾನ್ಯರಿಗೆ ನೀಡಿದೆ.
ಗಂಭೀರ ಫ್ಲ್ಯಾಶ್ ಹೊಂದಿರುವ ತೀಕ್ಷ್ಣವಾದ ಬೀಪ್ ಅನ್ನು ನೀವು ಕೇಳಿರಬಹುದು. ಹಾಗೆ ಈ ಸಂದೇಶವನ್ನು ಭಾರತ ಸರ್ಕಾರ ಕಳುಹಿಸಿದೆಯೇ ಅಥವಾ ಹಗರಣವೇ ಎಂದು ನೀವು ಚಿಂತಿಸುತ್ತಿರಬಹುದು. ಹೌದು ಇದನ್ನು ಭಾರತ ಸರ್ಕಾರದ ದೂರ ಸಂಪರ್ಕ ಇಲಾಖೆ ಕಳುಹಿಸಿದೆ.
ಈ ಸಂದೇಶದಿಂದ ಭಯಪಡುವ ಅಗತ್ಯ ಇಲ್ಲ
ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ತುರ್ತು ಸಂದರ್ಭಗಳಲ್ಲಿ ಸಮಯೋಚಿತ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ವಾಸ್ತವವಾಗಿ ಈ ಸಂದೇಶವನ್ನು ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯ ಮೂಲಕ ಜಾರಿಗೆ ತರುತ್ತಿದೆ. ಭೂಕಂಪಗಳು, ಸುನಾಮಿಗಳು, ಮತ್ತು ಪ್ರವಾಹಗಳಂತಹ, ವಿಪತ್ತುಗಳನ್ನು ಎದುರಿಸಲು ಸರಕಾರ ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಕೆಲಸ ಮಾಡುತ್ತದೆ.
ತುರ್ತು ಎಚ್ಚರಿಕೆಗಳಿಗೆ ಹೆದರಬೇಡಿ
ತುರ್ತು ಎಚ್ಚರಿಕೆ ಮೊಬೈಲ್ ಫೋನ್ ಪರದೆಯ ಮೇಲೆ ಇದ್ದಕಿದ್ದಂತೆ ಬರುತ್ತದೆ. ಈ ಸಂದೇಶ ಬಂಡ ತಕ್ಷಣ ನಿಮ್ಮ ಮೊಬೈಲ್ ಕಂಪಿಸಲು ಪ್ರಾರಂಭಿಸುತ್ತದೆ. ನೀವು ಸಂದೇಶ ಓದುವರೆಗೂ ಇದು ಸಂಭವಿಸುತ್ತದೆ. ಇದನ್ನು ಮುಚ್ಚಲು ನೀವು ಸರಿ ಬಟನ್ ಅನ್ನು ಒತ್ತಬೇಕಾಗುತ್ತದೆ.
ಈ ಸಂದೇಶವನ್ನು ಸರ್ಕಾರ ಕಳುಹಿಸುತ್ತಿದೆ ಇದಕ್ಕೆ ಹೆದರುವ ಅಗತ್ಯ ಇಲ್ಲ ಎಂದು ಮೂಲಗಳು ಹೇಳಿವೆ. ಸರ್ಕಾರೀ ಪರೀಕ್ಷಾ ಎಚ್ಚರಿಕೆ ವ್ಯವಸ್ಥೆ ಭಾರತದ ದೂರಸಂಪರ್ಕ ಇಲಾಖೆ ನಾಗರಿಕರಿಗೆ ಪ್ರಮುಖ ಮತ್ತು ಸಮಯ ಸೂಕ್ಷ್ಮ ಸಂದೇಶಗಳನ್ನು ಕಳುಹಿಸಲು ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ವ್ಯವಸ್ಥೆಯನ್ನು ಬಳಸುತ್ತದೆ. ಹಾಗಾಗಿ ಇಂತಹ ಎಚ್ಚರಿಕೆಯ ಸಂದೇಶಗಳು ಬಂದರೆ ಭಯಪಡುವ ಅಗತ್ಯ ಇಲ್ಲ.