Emergency Alert: ಈ ಕಾರಣಕ್ಕೆ ಇಂತವರ ಮೊಬೈಲ್ ಗೆ ಬಂದಿಲ್ಲ ಸರ್ಕಾರ ಕಳುಹಿಸಿದ ಎಮರ್ಜೆನ್ಸಿ ಅಲರ್ಟ್ ಸಂದೇಶ.

ಇಂತಹ ಜನರ ಮೊಬೈಲ್ ಬಂದಿಲ್ಲ ಸರ್ಕಾರ ಕಳುಹಿಸಿದ ತುರ್ತು ಸಂದೇಶದ ಮೆಸೇಜ್.

Emergency Alert Test Message: ಕೇಂದ್ರ ಸರ್ಕಾರ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಎಮರ್ಜೆನ್ಸಿ ಅಲರ್ಟ್ ಸಿಸ್ಟಮ್ ನ (Emergency Alert System) ಭಾಗವಾಗಿ ಸೆಲ್ ಬ್ರಾಡ್​ ಕ್ಯಾಸ್ಟ್ ಸಿಸ್ಟಮ್ (Cell Broadcast System) ಅನ್ನು ರೂಪಿಸಲಾಗಿದೆ. ಈ ಸಿಸ್ಟಮ್ ಅನ್ನು ಜಾರಿಗೆ ತರುವ ಮುನ್ನ ದೇಶಾದ್ಯಂತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಅದರ ಭಾಗವಾಗಿ ಇವತ್ತು ಎಲ್ಲರ ಮೊಬೈಲ್ ನಂಬರ್​ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿರಬಹುದು.

ಇದು ಕೇವಲ ಸ್ಯಾಂಪಲ್ ಮೆಸೇಜ್ ಮಾತ್ರವೇ ಆಗಿರುತ್ತದೆ. ಯಾರು ಗಾಬರಿ ಆಗಬಾರದೆಂದು ಮೊನ್ನೆಯೇ ಸರ್ಕಾರ ಸಾರ್ವಜನಿಕರಿಗೆ ಮನವಿ ಮಾಡಿತ್ತು. ಎಮರ್ಜೆನ್ಸಿ ಅಲರ್ಟ್ ಸಿಸ್ಟಮ್ ನ ಭಾಗವಾಗಿ ಸೆಲ್ ಬ್ರಾಡ್​ಕ್ಯಾಸ್ಟ್ ಸಿಸ್ಟಮ್ ಅನ್ನು ರೂಪಿಸಲಾಗಿದೆ. ಈ ಸಿಸ್ಟಮ್ ಅನ್ನು ಜಾರಿಗೆ ತರುವ ಮುನ್ನ ದೇಶಾದ್ಯಂತ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.

Emergency Alert
Image Credit: Indiatvnews

ಬಹುತೇಕ ಎಲ್ಲರಿಗೂ ಅಲರ್ಟ್ ಮೆಸೇಜ್ ಬಂದಿರುತ್ತದೆ

ಜುಲೈ 20, ಆಗಸ್ಟ್ 17 ಮತ್ತು ಸೆಪ್ಟೆಂಬರ್ 21ರಂದು ದೇಶದ ವಿವಿಧೆಡೆ ಪರೀಕ್ಷಾರ್ಥ ಪ್ರಯೋಗವಾಗಿ ಟೆಸ್ಟ್ ಮೆಸೇಜ್​​ಗಳು ಬಂದಿದ್ದವು. ಆಗ ಸೀಮಿತ ಸಂಖ್ಯೆಯ ಜನರಿಗೆ ಮಾತ್ರ ಅಲರ್ಟ್ ಮೆಸೇಜ್ ನೀಡಲಾಗಿತ್ತು. ಈಗ ಬಹುತೇಕ ಎಲ್ಲರಿಗೂ ಅಲರ್ಟ್ ಮೆಸೇಜ್ ಬಂದಿರುತ್ತದೆ. ಕೆಲ ನಿಮಿಷಗಳ ಅಂತರದಲ್ಲಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ಮೆಸೇಜ್ ಕಳುಹಿಸಲಾಗಿದೆ. ಅದರ ಭಾಗವಾಗಿ ಇವತ್ತು ಎಲ್ಲರ ಮೊಬೈಲ್ ನಂಬರ್​ಗೆ ಎಮರ್ಜೆನ್ಸಿ ಅಲರ್ಟ್ ಮೆಸೇಜ್ ಬಂದಿರಬಹುದು. ಕೆಲವರ ಮೊಬೈಲ್​ಗೆ ಈ ಅಲರ್ಟ್ ಬಂದಿಲ್ಲದೇ ಇರಬಹುದು. ಅದಕ್ಕೆ ಸಂಭಾವ್ಯ ಕಾರಣಗಳೇನು ಎಂಬ ವಿವರ ಇಲ್ಲಿದೆ.

Emergency alert in mobile
Image Credit: News 18

ಕನ್ನಡದಲ್ಲಿEmergency alert: Extreme ಮೆಸೇಜ್

‘ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ.

ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.’ ನಿಮ್ಮ ಮೊಬೈಲ್​ಗೆ ಎಮರ್ಜೆನ್ಸಿ ಅಲರ್ಟ್ ಬಂದಿದ್ದರೆ ಗಾಬರಿ ಬೇಡ; ಇದು ಸೆಲ್ ಬ್ರಾಡ್​ಕ್ಯಾಸ್ಟ್ ಅಲರ್ಟ್ ಸಿಸ್ಟಂನ ಪರೀಕ್ಷಾರ್ಥ ಪ್ರಯೋಗ.

Emergency Alert Test Message
Image Credit: Oneindia

ನಿಮ್ಮ ಮೊಬೈಲ್​ಗೆ ಟೆಸ್ಟ್ ಮೆಸೇಜ್ ಬಂದಿಲ್ಲವಾ?

ತನ್ನಮೊಬೈಲ್​ಗೆ ಅಲರ್ಟ್ ಮೆಸೇಜ್ ಬಂದಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಇದಕ್ಕೆ ಸಂಭಾವ್ಯ ಕಾರಣಗಳು ಇಲ್ಲಿವೆ: ಎಲ್ಲರಿಗೂ ಏಕಕಾಲದಲ್ಲಿ ಟೆಸ್ಟ್ ಮೆಸೇಜ್ ಬಂದಿರುವುದಿಲ್ಲ. ಏರ್​ಟೆಲ್, ಜಿಯೋ, ವೊಡಾಫೋನ್ ಇತ್ಯಾದಿ ಟೆಲಿಕಾಂ ಕಂಪನಿಗಳ ಬಳಕೆದಾರರಿಗೆ ಪ್ರತ್ಯೇಕವಾಗಿ ಈ ಅಲರ್ಟ್ ಮೆಸೇಜ್ ತಲುಪಿರುತ್ತದೆ.

ಇಂದು (ಅ.12) ಏರ್ಟೆಲ್ ಗ್ರಾಹಕರಿಗೆ ಮೊದಲು ಅಲರ್ಟ್ ಬಂದಿದೆ. ಕೆಲ ಹೊತ್ತಿನ ಬಳಿಕ ಜಿಯೋ ಬಳಕೆದಾರರಿಗೆ ಅಲರ್ಟ್ ಬಂದಿದೆ. ಬಳಿಕ ವೊಡಾಫೋನ್ ಐಡಿಯಾ ಸಿಮ್ ಹೊಂದಿರುವವರಿಗೆ ಟೆಸ್ಟಿಂಗ್ ಅಲರ್ಟ್ ಸಂದೇಶ ಸಿಕ್ಕಿದೆ. ಅಲರ್ಟ್ ಮೆಸೇಜ್ ಸುಮಾರು 30 ನಿಮಿಷ ಕಾಲಘಟ್ಟದಲ್ಲಿ ಇರುತ್ತದೆ.

ನಿಮ್ಮ ಮೊಬೈಲ್​ಗೆ ಅಲರ್ಟ್ ಟೆಸ್ಟ್ ಮೆಸೇಜ್ ಬರದೇ ಇರಲು ಕಾರಣಗಳು

ಅಲರ್ಟ್ ಟೆಸ್ಟ್ ಮೆಸೇಜ್ ಬರುವ ಅವಧಿಯಲ್ಲಿ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆಗಿದ್ದರೆ ನಿಮಗೆ ಮೆಸೇಜ್ ಬಂದಿರುವುದಿಲ್ಲ. ಈ 30 ನಿಮಿಷದ ಅವಧಿಯೊಳಗೆ ನಿಮ್ಮ ಮೊಬೈಲ್ ಸ್ವಿಚ್ ಆನ್ ಆದಾಗ ಮೆಸೇಜ್ ಬರುತ್ತದೆ. ಅವಧಿ ಮೀರಿದ ಬಳಿಕ ಸ್ವಿಚ್ ಆನ್ ಮಾಡಿದರೂ ಮೆಸೇಜ್ ಬರುವುದಿಲ್ಲ. ಏರ್​ಪ್ಲೇನ್ ಮೋಡ್​ನಲ್ಲಿದ್ದರೂ ಅಲರ್ಟ್ ಸಿಗುವುದಿಲ್ಲ.

Emergency Alert Text
Image Credit: Qrune

ಫೋನ್ ಸೆಟಿಂಗ್​ನಲ್ಲಿ ಎಮರ್ಜೆನ್ಸಿ ಅಲರ್ಟ್ ಸಿಸ್ಟಂ ಆಫ್ ಆಗಿರಬಹುದು. ಹಳೆಯ ಫೋನ್ ಆಗಿದ್ದರೆ ಅಲರ್ಟ್ ಬರದೇ ಹೋಗಬಹುದು. ಎಮರ್ಜೆನ್ಸಿ ಸಿಸ್ಟಂ ವಾರ್ನಿಂಗ್ ವ್ಯವಸ್ಥೆಗೆ ನಿಮ್ಮ ಫೋನ್ ಹೊಂದಿಕೆಯಾಗಿರುವುದಿಲ್ಲ. ಇಂತಹ ಕಾರಣದಿಂದ ನಿಮಗೆ ಈ ಮೆಸೇಜ್ ಬರದೇ ಇರಬಹುದು.

ಸೆಟ್ಟಿಂಗ್​ನಲ್ಲಿ ಅಲರ್ಟ್ ಸಿಸ್ಟಂ ಅನ್ ಮಾಡುವ ವಿಧಾನ

ನಿಮ್ಮ ಆಂಡ್ರಾಯ್ಡ್ ಮೊಬೈಲ್​ನ ಸೆಟಿಂಗ್ಸ್​ಗೆ ಹೋಗಿ ಸರ್ಚ್ ಬಾರ್​ನಲ್ಲಿ ವೈರ್ಲೆಸ್ ಎಮರ್ಜೆನ್ಸಿ ನೋಟಿಫಿಕೇಶನ್ ಎಂದು ಸರ್ಚ್ ಮಾಡಿ.ಅಲ್ಲಿ ಅಲರ್ಟ್ಸ್ ಆಫ್ ಆಗಿದ್ದರೆ ಅದನ್ನು ಆನ್ ಮಾಡಿ ಅವಾಗ ಸೆಟ್ಟಿಂಗ್​ನಲ್ಲಿ ಅಲರ್ಟ್ ಸಿಸ್ಟಮ್ ಆನ್ ಆಗುತ್ತದೆ.

Leave A Reply

Your email address will not be published.