Meta: Facebook ಮತ್ತು Instagram ಬಳಸಲು ಇನ್ನುಮುಂದೆ ಹಣ ಕಟ್ಟಬೇಕು, ಹೊಸ ನಿಯಮ ಜಾರಿಗೆ ತಂದ ಮೆಟಾ.
ಫೇಸ್ ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಅಗತ್ಯ ಮಾಹಿತಿ.
Facebook And Instagram Update: ಇತೀಚೆಗೆ ಸೋಶಿಯಲ್ ಮೀಡಿಯಾ(Social Media) ಮಾನವನ ಜೀವನದ ಪಾಮುಕ್ತ್ ಅಂಗವಾಗಿದೆ. ದಿನ ನಿತ್ಯ Facebook ಮತ್ತು Instagram ಗಳಲ್ಲಿ ಫೋಟೋ ಮತ್ತು ವಿಡಿಯೋ ಗಳನ್ನೂ ಶೇರ್ ಮಾಡುವುದು ಸರ್ವೇ ಸಾಮಾನ್ಯವಾಗಿದೆ.
facebook ಮತ್ತು instagram ಪ್ರತಿಯೊಬ್ಬರು ಹೊಂದಿರುವ ಸಾಮಾಜಿಕ ಮಾಧ್ಯಮವಾಗಿದೆ. ಆದರೆ ಇದೀಗ ಸಾಮಾಜಿಕ ಮಾಧ್ಯಮ ಹೊಂದಿರುವವವರಿಗೆ ಮೆಟಾ ಶಾಕ್ ನೀಡಿದೆ. ಹೌದು ಈ ಜಗತ್ತಿನಲ್ಲಿ ಅತಿ ಹೆಚ್ಚು ಗ್ರಾಹಕರನ್ನ ಹೊಂದಿರುವ ಸಾಮಾಜಿಕ ಜಾಲತಾಣ ಅಂದರೆ ಅದೂ facebook ಮತ್ತು instagram ಎಂದು ಹೇಳಿದರೆ ತಪ್ಪಾಗಲ್ಲ.

FaceBook, Instagram ಬಳಕೆದಾರರಿಗೆ ಆಘಾತ ನೀಡಿದ ಮೆಟಾ
ಪ್ರಮುಖ ಸಾಮಾಜಿಕ ಮಾಧ್ಯಮವಾದ ಮೆಟಾ ತನ್ನ ಒಡೆತನದಲ್ಲಿರುವ facebook ಹಾಗೂ instagram ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇನ್ನುಮುಂದೆ facebook ಹಾಗೂ instagram ಬಳಕೆಗೆ ಹಣ ಎಂದು ಮಾಧ್ಯಮ ಮೂಲಗಳಿಂದ ತಿಳಿದುಬಂದಿದೆ. ವರದಿಗಳ ಪ್ರಕಾರ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಪಾವತಿಸುವ ಆವೃತ್ತಿ ಅನ್ನು ಮೆಟಾ ಯಾವಾಗ ಪ್ರಾರಂಭಿಸುತ್ತದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಪಾವತಿಯನ್ನು ಮೊದಲು ಯುರೋಪ್ ನಲ್ಲಿ ಆರಂಭ ಮಾಡಲಾಗುವುದು, ತದನಂತರ ಇದನ್ನು ಉಳಿದ ದೇಶಗಳಲ್ಲಿ ಪ್ರಾರಂಭಿಸಬಹುದು. ಉಚಿತ ಆವೃತ್ತಿಯು ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ಪಾವತಿಸಿದ ಆವೃತ್ತಿಯೊಂದಿಗೆ ಮುಂದುವರೆಯುತ್ತದೆ.
ಪಾವತಿಸಿದ ಆವೃತ್ತಿಯು ಜಾಹಿರಾತು ಮುಕ್ತ ವಾಗಿರುತ್ತದೆ. ಪಾವತಿಸದ ಆವೃತ್ತಿಯಲ್ಲಿ ಜಾಹಿರಾತುಗಳು ಇರುತ್ತದೆ. ಶೀಘ್ರದಲ್ಲೇ ಇದು ಇತರ ದೇಶಗಳಿಗೆ ಅನ್ವಯವಾಗಲಿದೆ. ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕಾಗಿದೆ.

ಮೆಟಾ ಅನುಮತಿ ಇಲ್ಲದೆ ಬಳಕೆದಾರರ ಡೇಟಾವನ್ನು ಸಂಗ್ರಹಿಸುತ್ತವೆ ಎಂದು 2019 ರಿಂದ ಯುರೋಪಿಯನ್ ಯೂನಿಯನ್ ದೇಶಗಳು ಮೆಟಾ ಸೇವೆಗಳ ಬಗ್ಗೆ ಸಿಟ್ಟಾಗಿದ್ದವು. ಅಂದಿನಿಂದ ಇದು ಕಾನೂನು ತೊಂದರೆ ಗಳನ್ನೂ ಎದುರಿಸುತ್ತಿವೆ. ಇದರ ನಡುವೆ ಮತ್ತೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಮೆಟಾ ಇದೀಗ ಮುಂದಾಗಿದೆ. ಇನ್ನುಮುಂದೆ ಜನರು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಬಳಸಲು ಹಣವನ್ನ ಪಾವತಿ ಮಾಡಬೇಕು ಎಂದು ತಿಳಿದ ಜನರು ಬೇಸರವನ್ನ ಹೊರಹಾಕಿದ್ದಾರೆ.