500 Rs Note: 500 ರೂ ನೋಟುಗಳ ಮೇಲೆ ಇನ್ನೊಂದು ಆದೇಶ ಹೊರಡಿಸಿದ RBI, ಎಚ್ಚರಿಕೆ ನೀಡಿದ RBI
500 ರೂಪಾಯಿ ನೋಟುಗಳ ಮೇಲೆ ಇನ್ನೊಂದು ಆದೇಶ ಹೊರಡಿಸಿದ RBI.
RBI About 500 Rupees: ಇತ್ತೀಚಿನ ವರ್ಷಗಳ ಹಿಂದೆ Reserve Bank Of India ಹಳೆ ನೋಟುಗಳನ್ನು ಹೊಸ ನೋಟುಗಳಾಗಿ ನವೀಕರಿಸಿದೆ. 2,000, 500, 200, 100, 50, 20 ರೂಪಾಯಿ ಎಲ್ಲ ನೋಟುಗಳು ಹೊಸ ಶ್ಯಲಿಯಲ್ಲಿ ಚಲಾವಣೆಗೆ ಬಂದಿರುತ್ತದೆ.
ಸದ್ಯ 2000 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತ ಗೊಂಡಿರುವ ಬಗ್ಗೆ RBI ಸ್ಪಷ್ಟನೆ ನೀಡಿದೆ. ಹಾಗು ಸ್ವಲ್ಪ ದಿನಗಳಿಂದ ಇನ್ನೊಂದು ವದಂತಿ ಹರಿದಾಡುತ್ತಿದೆ. ಅದೇನೆಂದರೆ 500 ರೂಪಾಯಿ ನೋಟಿನ ತಲೆ ನೋವು. ಜನ ಸಾಮಾನ್ಯರು 500 ರೂಪಾಯಿ ನೋಟನ್ನು ಇಟ್ಟುಕೊಳ್ಳಲು ಭಯ ಪಡುವಂತಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮತ್ತು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗೆ ಜನರು ಭಯಪಟ್ಟಿದು ನೋಟುಗಳನ್ನ ಕೈಯ್ಯಲ್ಲಿ ಹಿಡಿದುಕೊಳ್ಳಲು ಭಯಪಡುತ್ತಿದ್ದಾರೆ.
ಏನಿದು 500 ರೂಪಾಯಿ ನೋಟಿನ ಮೇಲಿರುವ ‘ಸ್ಟಾರ್’ ಮಾರ್ಕ್ (*) ಗಳು
ಸರಣಿ ಸಂಖ್ಯೆಯ ಮಧ್ಯದಲ್ಲಿ ನಕ್ಷತ್ರವಿರುವ 500 ರೂಪಾಯಿ ನೋಟು ಅಸಲಿಯೇ ಅಥವಾ ನಕಲಿಯೇ ಎಂದು ಜನ ಸಾಮಾನ್ಯರು ತಲೆ ಕೆಡಿಸಿಕೊಳ್ಳುವಂತಾಗಿದೆ. 500 ರೂಪಾಯಿ ನೋಟಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ವದಂತಿ ಹಬ್ಬಿದ್ದು, ‘ಸ್ಟಾರ್’ ಮಾರ್ಕ್ (*) ಹೊಂದಿರುವ ನೋಟಿನ ಅಸಲೀಯತ್ತಿನ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತವಾಗುತ್ತಿರುವ ಎಲ್ಲಾ ಆತಂಕಗಳನ್ನು ಆರ್ಬಿಐ ತಳ್ಳಿಹಾಕಿದೆ.
500 ರೂಪಾಯಿ ನೋಟಿನ ಬಗ್ಗೆ RBI ಸ್ಪಷ್ಟನೆ
ತಪ್ಪಾಗಿ ಮುದ್ರಿಸಲಾದ ನೋಟಿನ ಬದಲಿಗೆ ನೀಡಬೇಕಾದ ನೋಟಿನ ನಂಬರ್ ಪ್ಯಾನೆಲ್ಗೆ ನಕ್ಷತ್ರ ಚಿಹ್ನೆಯನ್ನು ಸೇರಿಸಲಾಗಿದೆ. ಈ ನಕ್ಷತ್ರದ ಗುರುತು ನೋಡಿದ ಕೆಲವರು ಅದನ್ನು ಮತ್ತೊಂದು 500 ರೂಪಾಯಿ ನೋಟಿಗೆ ಹೋಲಿಸಿ ನಕಲಿ ಅಥವಾ ಅಕ್ರಮ ಎಂದು ಕರೆದರು, ನಂತರ ಆರ್ಬಿಐ ಗಮನಹರಿಸಿ ಮಾಹಿತಿ ನೀಡಿದೆ.
ಕ್ರಮಸಂಖ್ಯೆಗಳಿರುವ ನೋಟುಗಳ ಬಂಡಲ್ನಲ್ಲಿ ತಪ್ಪಾಗಿ ಮುದ್ರಿತ ನೋಟುಗಳ ಬದಲಿಗೆ ನಕ್ಷತ್ರ ಚಿಹ್ನೆಯ ನೋಟುಗಳನ್ನು ನೀಡಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ನಕ್ಷತ್ರದ ಗುರುತು ಟಿಪ್ಪಣಿಯ ಸಂಖ್ಯೆ ಮತ್ತು ಅದರ ಮೊದಲು ನಮೂದಿಸಬೇಕಾದ ಅಕ್ಷರಗಳ ನಡುವೆ ಇರಿಸಲಾಗುತ್ತದೆ.
500 ರೂಪಾಯಿ ನೋಟಿನ ಮೇಲಿರುವ ನಕ್ಷತ್ರ ಚಿಹ್ನೆಯ ಅರ್ಥವೇನು..?
ಸ್ಟಾರ್ ಗುರುತು ಹೊಂದಿರುವ ಬ್ಯಾಂಕ್ ನೋಟು ಇತರ ಕಾನೂನು ಟೆಂಡರ್ಗಳಂತೆಯೇ ಇರುತ್ತದೆ ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಅದರ ನಕ್ಷತ್ರ ಚಿಹ್ನೆಯು ಬದಲಾದ ಅಥವಾ ಮರುಮುದ್ರಣಗೊಂಡ ನೋಟಿನ ಸ್ಥಳದಲ್ಲಿ ಬಿಡುಗಡೆಯಾಗಿದೆ ಎಂದು ತೋರಿಸುತ್ತದೆ.
ನೋಟುಗಳ ಮುದ್ರಣವನ್ನು ಸುಲಭಗೊಳಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು 2006 ರಲ್ಲಿ ಸ್ಟಾರ್ ನೋಟಿನ ಪ್ರವೃತ್ತಿಯನ್ನು ಪ್ರಾರಂಭಿಸಲಾಯಿತು. ಈ ಹಿಂದೆ, ರಿಸರ್ವ್ ಬ್ಯಾಂಕ್ ತಪ್ಪಾಗಿ ಮುದ್ರಿತ ನೋಟಿನ ಬದಲಿಗೆ ಅದೇ ಸಂಖ್ಯೆಯ ಸರಿಯಾದ ನೋಟನ್ನು ಬಳಸುತ್ತಿತ್ತು ಆದರೆ ಈಗ ಸ್ಟಾರ್ ಗುರುತಿನ ನೋಟನ್ನು ಚಲಾವಣೆಗೆ ತರುತ್ತಿದೆ. ಸ್ಟಾರ್ ಗುರುತು ಹೊಂದಿರುವ ಎಲ್ಲಾ ನೋಟುಗಳು ಸಲಿ ಎಂದು RBI ಈಗ ಸ್ಪಷ್ಟನೆ ಕೊಟ್ಟಿದೆ.