Aadhaar Card Verify: ನಿಜವಾದ ಮತ್ತು ನಕಲಿ ಆಧಾರ್ ಕಾರ್ಡ್ ಗುರುತಿಸುವುದು ಹೇಗೆ…? ಇಲ್ಲಿದೆ ನೋಡಿ ಸುಲಭ ವಿಧಾನ.

ನಿಜವಾದ ಮತ್ತು ನಕಲಿ ಆಧಾರ್ ಕಾರ್ಡ್ ಅನ್ನು ಈ ರೀತಿಯಲ್ಲಿ ಗುರುತಿಸಬಹುದು.

Fake And Real Aadhaar Card: ಭಾರತೀಯರು ಆಧಾರ್ ಕಾರ್ಡ್ (Aadhaar Card) ಹೊಂದಿರುವುದು ಅತ್ಯಗತ್ಯ. ಆಧಾರ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ. ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸವೂ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ನಕಲಿ ನೋಟುಗಳು ಹೇಗೆ ಓಡುತ್ತವೆಯೋ ಅದೇ ರೀತಿ ನಕಲಿ ಆಧಾರ್ ಕಾರ್ಡ್‌ಗಳನ್ನು ಸಹ ತಯಾರಿಸಲಾಗುತ್ತದೆ. ನಕಲಿ ಆಧಾರ ಕಾರ್ಡ್ ಅನ್ನು ಬಳಸಿ ಜನರನ್ನು ವಂಚನೆ ಮಾಡಲಾಗುತ್ತದೆ. ನಕಲಿ ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ, ಮೊದಲು ಆಧಾರ್ ಕಾರ್ಡ್ ಪರಿಶೀಲನೆಯನ್ನು ಮಾಡಬೇಕಾಗಿದೆ ಎಂದು ಯುಐಡಿಎಐ ಹೇಳಿದೆ. ಇದರಿಂದ ನೀವು ವಂಚನೆ ಮತ್ತು ನಷ್ಟವನ್ನು ತಪ್ಪಿಸಬಹುದು.

Aadhar Card latest UpdatesAadhar Card latest Updates
Image Credit: Economictimes

ಆಧಾರ್ ಕಾರ್ಡ್ ಪರಿಶೀಲನೆ ಅಗತ್ಯ

ಆಧಾರ್ ಕಾರ್ಡ್ ಈಗ ಪ್ರತಿಯೊಬ್ಬರ ಗುರುತಾಗಿದ್ದು, ನೀವು ಯಾವುದೇ ಕೆಲಸಕ್ಕೆ ಹೋದರು ಅಥವಾ ನೀವು ಯಾರನ್ನಾದರೂ ನೇಮಿಸಿಕೊಳ್ಳಬೇಕೆಂದರು ಮೊದಲು ಅವರ ಆಧಾರ್ ಕಾರ್ಡ್ ಪರಿಶೀಲಿಸುವುದು ಬಹಳ ಮುಖ್ಯ ಆಗಿದೆ ಎಂದು UIDAI ತಿಳಿಸಿದೆ. ಆಧಾರ್ ಕಾರ್ಡ್ ನಲ್ಲಿ ಪ್ರತಿಯೊಬ್ಬರ ಸಂಪೂರ್ಣ ಮಾಹಿತಿ ಇದ್ದು, ವಂಚನೆಯಿಂದ ದೂರ ಸರಿಯಬಹುದಾಗಿದೆ.

ಆಧಾರ್ ಕಾರ್ಡ್ ಅನ್ನು ಪರಿಶೀಲಿಸುವುದು ಹೇಗೆ?

ನೀವು ಮನೆಯಲ್ಲಿ ಕುಳಿತು ಆಧಾರ್ ಕಾರ್ಡ್ ಪರಿಶೀಲಿಸುದಾದರೆ, ಇದಕ್ಕಾಗಿ ನೀವು ಎಂ-ಆಧಾರ್ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಆಪ್‌ನಲ್ಲಿ ಆಧಾರ್ ಕಾರ್ಡ್ ಪರಿಶೀಲನೆಗೆ ಎರಡು ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಇದರಲ್ಲಿ ಆಧಾರ್ QR ಕೋಡ್ ಸ್ಕ್ಯಾನರ್ ಮತ್ತು ಆಧಾರ್ ಸಂಖ್ಯೆಯ ಮೂಲಕ ಪರಿಶೀಲನೆ ಮಾಡಬಹುದು.

Aadhar Card Lock And Unlock Latest
Image Credit: Indian Spost

QR ಕೋಡ್ ಅನ್ನು ಸರಳವಾಗಿ ಸ್ಕ್ಯಾನ್ ಮಾಡುವ ಮೂಲಕ, ನೀವು ಆಧಾರ್ ಕಾರ್ಡ್ ನಕಲಿ ಅಥವಾ ಅಸಲಿ ಎಂಬುದನ್ನು ಕಂಡುಹಿಡಿಯಬಹುದು ಹಾಗು ಯುಐಡಿಎಐ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಯಾರೊಬ್ಬರ ಆಧಾರ್ ಕಾರ್ಡ್ ಅನ್ನು ಪರಿಶೀಲಿಸಬಹುದು. ಆಧಾರ್ ಕಾರ್ಡ್ ಅನ್ನು ಪರಿಶೀಲಿಸಲಾಗದಿದ್ದರೆ ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಪರಿಶೀಲಿಸಿ. UIDAI ಕೇಂದ್ರದಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಲು 15 ರಿಂದ 18 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Leave A Reply

Your email address will not be published.