FID Card: ಎಲ್ಲಾ ರೈತರಿಗೆ ರಾಜ್ಯ ಸರ್ಕಾರದ ಇನ್ನೊಂದು ಆದೇಶ, FID ಕಾರ್ಡ್ ಇದ್ದರೆ ಮಾತ್ರ ಸಿಗಲಿದೆ ಹಣ

ಬರ ಪರಿಹಾರ ಹಣ ಪಡೆಯಬೇಕಾದರೆ ರೈತರಿಗೆ Unique Farmer Id ಕಡ್ಡಾಯ

FID Mandatory For Farmers: ರೈತರೇ ಗಮನವಿಟ್ಟು ಈ ಮಾಹಿತಿಯನ್ನು ತಿಳಿದುಕೊಳ್ಳಿ, ಯಾಕೆಂದರೆ ಈ ಸುದ್ದಿ ನಿಮಗೆ ಬಹಳ ಉಪಯುಕ್ತಕರ ಹಾಗು ಅವಶ್ಯಕ ಕೂಡ ಹೌದು. ಬೆಳೆ ನಾಶ, ಬೆಳೆಗೆ ಸಂಬಂಧಿಸಿದ ಸಾಲ ಸೌಲಭ್ಯ ಹಾಗು ಸರಕಾರದಿಂದ ಸಿಗುವ ಇನ್ನಿತರ ಸಹಾಯಧನ ಪಡೆಯಲು ಇನ್ನು ಮುಂದೆ ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಕಡ್ಡಾಯವಾಗಿದೆ.

ಪ್ರತಿಯೊಬ್ಬ ರೈತನು ಈ ಗುರುತಿನ ಸಂಖ್ಯೆಯನ್ನು ಹೊಂದಿರತಕ್ಕದ್ದು, ಅಷ್ಟೇ ಅಲ್ಲದೆ ಈಗಾಗಲೇ ಈ ಗುರುತಿನ ಸಂಖ್ಯೆಯನ್ನು ಹೊಂದಿರುವವರು ತಮ್ಮ ಗುರುತಿನ ಸಂಖ್ಯೆಗೆ ತಮ್ಮ ಸರ್ವೇ ನಂಬರ್ ಜೋಡಣೆ ಮಾಡಿಕೊಳ್ಳುವುದು ಮುಖ್ಯ ಆಗಿದೆ.

FID Mandatory For Farmers
Image Credit: Hindustan Times

ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಕಡ್ಡಾಯ

ಪ್ರತಿಯೊಬ್ಬ ರೈತನು ಎಫ್‍ಐಡಿ ಸಂಖ್ಯೆ ಹೊಂದಿರುವುದು ಮುಖ್ಯ ಆಗಿದೆ, ಕನಿಷ್ಟ ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಮಾಡಲು, ಬೆಳೆ ವಿಮೆ ನೋಂದಣಿಗೆ,ಬೆಳೆ ಸಾಲ ಪಡೆಯಲು, ಬೆಳೆ ಹಾನಿಗೆ ಪರಿಹಾರ ಪಡೆಯಲು ಹಾಗೂ ಇತರೆ ಸೌಲಭ್ಯ ಪಡೆಯಲು FID Card ಕಡ್ಡಾಯವಾಗಿದೆ. ಎಫ್.ಐ.ಡಿ. ಈಗಾಗಲೇ ಆಗಿದ್ದಲ್ಲಿ ನಿಮಗೆ ಸಂಬಂಧಿಸಿದ ಎಲ್ಲಾ ಸರ್ವೆ ನಂಬರ್‌ಗಳು ಜೋಡಣೆಯಾಗಿದೆಯೋ ಅಥವಾ ಇಲ್ಲವೋ ಎಂದು ಕೂಡಲೇ ಪರಿಶೀಲಿಸಿಕೊಳ್ಳಿ. ಜಂಟಿ ಖಾತೆದಾರರಾಗಿದ್ದಲ್ಲಿ ಪ್ರತಿಯೊಬ್ಬ ಖಾತೆದಾರರ ಪ್ರತ್ಯೇಕವಾಗಿ ಎಫ್.ಐ.ಡಿ. ಮಾಡಿಕೊಳ್ಳಬೇಕು.

ಎಫ್.ಐಡಿ ಮಾಡಿಸಿಕೊಳ್ಳಲು ಬೇಕಾದ ದಾಖಲೆಗಳು

ರೈತರ ಗುರುತಿನ ಸಂಖ್ಯೆ (ಎಫ್‍ಐಡಿ) ಮಾಡಿಸಲು ಆಧಾರ್ ಕಾರ್ಡ್,ಬ್ಯಾಂಕ್ ಪಾಸ್ ಪುಸ್ತಕ, ಆರ್ ಟಿ. ಸಿ, ಮೊಬೈಲ್ ನಂಬರ್ ಅನ್ನು ತಮ್ಮ ವ್ಯಾಪ್ತಿಗೆ ಬರುವ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸತಕ್ಕದ್ದು.

FID Card
Image Credit: Rosenet

ಸರ್ವೇ ನಂಬರ್ ಗೆ ಎಫ್.ಐ.ಡಿ. ಜೋಡಣೆ ಆಗದಿದ್ದಲ್ಲಿ ಪರಿಹಾರ ಹಣ ದೊರೆಯುವುದಿಲ್ಲ 

ರೈತರು ತಮಗೆ ಸಂಬಂಧಿಸಿದ ಎಲ್ಲಾ ಸ.ನಂಗಳನ್ನು ಎಫ್.ಐ.ಡಿ. ಮಾಡಿಸದಿದ್ದಲ್ಲಿ ಸರ್ಕಾರ ವತಿಯಿಂದ ಬರುವಂತಹ ಯಾವುದೇ ಪರಿಹಾರ ಹಣವು ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ. ಇದಕ್ಕೆ ನೀವೇ ಹೊಣೆಯಾಗಿರುತ್ತೀರಿ. ಆದ್ದರಿಂದ ಎಲ್ಲಾ ರೈತರು ನಿಮ್ಮ ಹೆಸರಿನಲ್ಲಿ ಎಲ್ಲಾ ಸ.ನಂ.ಗಳನ್ನು ಎಫ್.ಐ.ಡಿ. ಮಾಡಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ನಿಮ್ಮ ವ್ಯಾಪ್ತಿಯ ಗ್ರಾಮ ಆಡಳಿತ ಅಧಿಕಾರಿಗಳು ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸತಕ್ಕದ್ದು.

Leave A Reply

Your email address will not be published.