Fire-Boltt: ರಗಡ್ ಲುಕ್ ನಲ್ಲಿ ಬಂತು ಅಗ್ಗದ ಬೆಲೆಯ ಸ್ಮಾರ್ಟ್ ವಾಚ್, ಆಪಲ್ ವಾಚ್ ಗಿಂತ ಹೆಚ್ಚು ಫೀಚರ್.

ರಗಡ್ ಲುಕ್ ನಲ್ಲಿ ಬಂತು ಅಗ್ಗದ ಬೆಲೆಯ ಸ್ಮಾರ್ಟ್ ವಾಚ್.

Fire-Boltt Shark Smart Watch: ಇತೀಚಿನ ದಿನಗಳಲ್ಲಿ ಮೊಬೈಲ್ ಗಳಂತೆ ಹಲವು ವಿಶೇಶತೆ ಹೊಂದಿರುವ ವಾಚ್ ಗಳನ್ನೂ ಸಹ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಮೊಬೈಲ್ ಫೀಚರ್ ಇರುವ ವಾಚ್ ಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಜನರು ವಾಚ್ ನತ್ತ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ.

ಸ್ಟೈಲ್ ಲುಕ್ ಗೆ ಈಗ ವಾಚ್ ಕೂಡ ಬಹಳ ಮುಖ್ಯ ಆಗಿದ್ದು, ವಾಚ್ ನಲ್ಲಿ ಫೈರ್-ಬೋಲ್ಟ್ ಸಂಸ್ಥೆಯು ಅಗ್ರಸ್ಥಾನದಲ್ಲಿದೆ. ಈ ಕಂಪನಿಯ ಸ್ಮಾರ್ಟ್‌ ವಾಚ್‌ ಉತ್ಪನ್ನಗಳ ಮೂಲಕ ಟೆಕ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. Fire-Boltt ಕಂಪನಿಯ Fire-Boltt Shark ವಾಚ್ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸಳೆದಿದ್ದು , ಈಗ ಬಾರಿ ರಿಯಾತಿಯಲ್ಲಿ ಈ ಸ್ಮಾರ್ಟ್‌ ವಾಚ್‌ ಅನ್ನು ಖರೀದಿ ಮಾಡಬಹುದಾಗಿದೆ.

Fire-Boltt Shark Smart Watch Price
Image Credit: e24bollywood

ಫೈರ್-ಬೋಲ್ಟ್ ಶಾರ್ಕ್ (Fire-Boltt Shark) ವಾಚ್ ನ ರಚನೆ
ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ 1.83 ಇಂಚಿನ HD ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಸ್ಕ್ರೀನ್ 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಅನ್ನು ಇದು ಹೊಂದಿದೆ. ಅಲ್ಲದೇ ಈ ವಾಚ್‌ ಶಾಕ್ ಪ್ರೂಫ್, ಸ್ಕ್ರಾಚ್ ರೆಸಿಸ್ಟೆಂಟ್ ನಂತಹ ಆಯ್ಕೆಗಳನ್ನು ಪಡೆದಿದೆ.

ಫೈರ್-ಬೋಲ್ಟ್ ಶಾರ್ಕ್ (Fire-Boltt Shark) ವಾಚ್ ನ ವೈಶಿಷ್ಟತೆಗಳು

ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್‌ ಸಿರಿಯಂತಹ AI ವಾಯ್ಸ್‌ ಅಸಿಸ್ಟೆಂಟ್‌ ಸೌಲಭ್ಯಗಳನ್ನು ಸಪೋರ್ಟ್ ಮಾಡುತ್ತದೆ. ಬ್ಲೂಟೂತ್‌ ಕಾಲಿಂಗ್‌ ಸೌಲಭ್ಯ ಇರುವುದರಿಂದ ಬಳಕೆದಾರರಿಗೆ ಸ್ಮಾರ್ಟ್‌ವಾಚ್‌ ಮೂಲಕವೇ ಫೋನ್ ಕರೆಗಳನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಆಯ್ಕೆ ದೊರೆಯುತ್ತದೆ.

ಈ ವಾಚ್ ಅತ್ಯಾಕರ್ಷಕ ಹೆಲ್ತ್‌ ಫೀಚರ್ಸ್‌ಗಳನ್ನು ಕೂಡ ಪಡೆದುಕೊಂಡಿದ್ದು, SpO2 ಮಾನಿಟರಿಂಗ್, ಹಾರ್ಟ್‌ಬೀಟ್‌ ಸೆನ್ಸಾರ್‌ಗಳು, ಇದಲ್ಲದೆ ಅಥ್ಲೆಟಿಕ್ಸ್, ಆಟೋ ರೇಸಿಂಗ್ ಸೇರಿದಂತೆ 120ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲ ಲಭ್ಯ. ಈ ಫೀಚರ್ಸ್‌ಗಳೊಂದಿಗೆ Fire-Boltt Shark Smart Watch ಇನ್‌ಬಿಲ್ಟ್‌ ಗೇಮ್ಸ್‌, ರಿಮೋಟ್ ಕ್ಯಾಮೆರಾ ಕಂಟ್ರೋಲ್‌, ಸ್ಟಾಪ್‌ವಾಚ್, ವೆದರ್‌ ಅಪ್ಡೇಟ್‌, ಅಲಾರಾಂ, ಟೈಮರ್, ಸಿಟ್ಟಿಂಗ್‌ ರಿಮೈಂಡರ್‌ ಗಳಂತಹ ಕೆಲವು ಉಪಯುಕ್ತ ಆಯ್ಕೆಗಳನ್ನು ಪಡೆದುಕೊಂಡಿದೆ.

Fire-Boltt Shark Smart Watch
Image Credit: Gadgets360

ಫೈರ್-ಬೋಲ್ಟ್ ಶಾರ್ಕ್ (Fire-Boltt Shark) ವಾಚ್ ನ ಬ್ಯಾಟರಿ ಸಾಮರ್ಥ್ಯ
ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಅತ್ಯುತ್ತಮ ಬ್ಯಾಟರಿ ಪಡೆದಿದ್ದು, ಇದು ಸಾಮಾನ್ಯ ಬಳಕೆಯಲ್ಲಿ ಎಂಟು ದಿನಗಳ ಬ್ಯಾಟರಿ ಅವಧಿ ಅನ್ನು ಒದಗಿಸಲಿದೆ. ಇನ್ನು ಬ್ಲೂಟೂತ್ ಕರೆಯೊಂದಿಗೆ ಐದು ದಿನಗಳ ಬ್ಯಾಟರಿ ಬಾಳಿಕೆ ನೀಡಲಿದೆ.

ಇನ್ನು ಬಳಕೆದಾರರು ವಾಚ್‌ ಅನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಬಳಸಿದರೆ 25 ದಿನಗಳ ಬ್ಯಾಟರಿ ಬಾಳಿಕೆ ಸೌಲಭ್ಯ ಪಡೆದಿದೆ. ಈ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್ ವಾಚ್ ಕಪ್ಪು ಕ್ಯಾಮೌ, ಕಪ್ಪು, ಹಸಿರು ಹಳದಿ ಮತ್ತು ಕಪ್ಪು ಹಳದಿ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಫ್ಲಿಪ್‌ಕಾರ್ಟ್ ತಾಣದ ಮೂಲಕ ಹಾಗೂ ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್ ಮೂಲಕ ಖರೀದಿಸಬಹುದು.

ಫೈರ್-ಬೋಲ್ಟ್ ಶಾರ್ಕ್ (Fire-Boltt Shark) ವಾಚ್ ನ ಬೆಲೆ ಹಾಗು ಆಫರ್

ಫೈರ್‌ ಬೋಲ್ಟ್‌ ವೆಬ್‌ಸೈಟ್‌ ನಲ್ಲಿ ಫೈರ್-ಬೋಲ್ಟ್ ಶಾರ್ಕ್ ಸ್ಮಾರ್ಟ್‌ ವಾಚ್‌ ಬೊಂಬಾಟ್‌ ರಿಯಾಯಿತಿ ಬೆಲೆಗೆ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ ವಾಚ್‌ ಬೆಲೆ 18,999 ರೂ. ಆಗಿದ್ದು, ಇದೀಗ 1,399ರೂ. ಗಳ ಕೊಡುಗೆಯ ಬೆಲೆಯಲ್ಲಿ ಗ್ರಾಹಕರು ಖರೀದಿ ಮಾಡಬಹುದಾಗಿದೆ. ಇದರೊಂದಿಗೆ ಆಯ್ದ ಕೆಲವು ಬ್ಯಾಂಕ್‌ಗಳಿಂದ ಹೆಚ್ಚುವರಿ ಡಿಸ್ಕೌಂಟ್‌ ಕೂಡಾ ಸಿಗಲಿದೆ.

Leave A Reply

Your email address will not be published.