Fitbit Charge 6: 7 ದಿನ ಚಾರ್ಜ್ ಮಾಡುವ ಅಗತ್ಯ ಇಲ್ಲ ಮತ್ತು ಸಂಪೂರ್ಣ ಆರೋಗ್ಯ ಮಾಹಿತಿ, ಅಗ್ಗದ ವಾಚ್ ಗೆ ಜನರು ಫಿದಾ.

ಹೆಚ್ಚಿನ ವಿಶೇಷತೆಯೊಂದಿಗೆ, ಕೈ ಗೆಟಕುವ ಬೆಲೆಯಲ್ಲಿ ಫಿಟ್‌ಬಿಟ್ ಚಾರ್ಜ್ 6 ಲಾಂಚ್‌.

Fitbit Charge 6 Launch: ಫಿಟ್‌ನೆಸ್‌ ಪ್ರಿಯರಿಗೆ ಸದಾ ಇಷ್ಟವಾಗುವ ಬ್ರ್ಯಾಂಡ್‌ ಎಂದರೆ ಅದು ಫಿಟ್‌ಬಿಟ್, ಈಗಾಗಲೇ ಈ ಕಂಪೆನಿಯಿಂದ ಸಾಕಷ್ಟು ಸ್ಮಾರ್ಟ್‌ ಡಿವೈಸ್‌ಗಳನ್ನು ಅನಾವರಣ ಮಾಡಲಾಗಿದೆಯಾದರೂ ಈಗ ಲಾಂಚ್‌ ಮಾಡಲಾಗಿರುವ ಫಿಟ್‌ಬಿಟ್ ಚಾರ್ಜ್ 6 ಡಿವೈಸ್‌ ವಿಶೇಷ ಫೀಚರ್ಸ್‌ನೊಂದಿಗೆ ಪ್ರೀಮಿಯಂ ನೋಟ ಪಡೆದಿದೆ. ಅದರಲ್ಲೂ ಇದು ಆಲ್‌ವೇಸ್‌ ಆನ್ ಡಿಸ್ಪ್ಲೇ ಫೀಚರ್ಸ್‌ ನೊಂದಿಗೆ ಬರುತ್ತಿರುವುದು ಮತ್ತೊಂದು ವಿಶೇಷ.

ಸುಧಾರಿತ ಹೃದಯ ಬಡಿತ ಟ್ರ್ಯಾಕಿಂಗ್‌ ಫೀಚರ್ಸ್‌ನೊಂದಿಗೆ ಫಿಟ್‌ಬಿಟ್ ಚಾರ್ಜ್ 6 (Fitbit Charge 6) ಅನ್ನು ಅನಾವರಣ ಮಾಡಲಾಗಿದೆ. ಈ ಡಿವೈಸ್‌ ಜಿಪಿಎಸ್ ಬೆಂಬಲವನ್ನು ಹೊಂದಿದ್ದು, ಅದರಲ್ಲೂ ಮಹಿಳೆಯ ಆರೋಗ್ಯದ ಮೇಲೆ ಇನ್ನೂ ಹೆಚ್ಚಿನ ಗಮನಹರಿಸಲಿದೆ. ಹಾಗಿದ್ರೆ ಈ ಡಿವೈಸ್‌ನ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ವಿಚಾರ ಸೇರಿದಂತೆ ಅಗತ್ಯ ಮಾಹಿತಿಯನ್ನು ತಿಳಿಯೋಣ.

Fitbit Charge 6
Image Credit: 9to5google

ಅನೇಕ ಫೀಚರ್ಸ್‌ ಹೊಂದಿದ ಫಿಟ್‌ಬಿಟ್ ಚಾರ್ಜ್ 6

ಈ ಡಿವೈಸ್‌ ಅನ್ನು ಯುಎಸ್‌ ನಲ್ಲಿ ಲಾಂಚ್‌ ಮಾಡಲಾಗಿದೆ. ಇಂಡಿಯಾ ವೆಬ್‌ಸೈಟ್‌ನ ಪ್ರಕಾರ ಸ್ಮಾರ್ಟ್ ವೇರಬಲ್ ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗುವ ನಿರೀಕ್ಷೆಯಿದೆ. ಇದು ಆಗಸ್ಟ್ 2021 ರಲ್ಲಿ ಬಿಡುಗಡೆಯಾದ ಫಿಟ್‌ಬಿಟ್ ಚಾರ್ಜ್ 5 ಯ ಮುಂದಿನ ಸರಣಿಯಾಗಿದೆ. ಸ್ಮಾರ್ಟ್ ವಾಚ್ ಋತುಚಕ್ರದ ಟ್ರ್ಯಾಕರ್ ಸೇರಿದಂತೆ ಇತರ ಆರೋಗ್ಯ ಮೇಲ್ವಿಚಾರಣಾ ಫೀಚರ್ಸ್‌ ಆಯ್ಕೆ ಪಡೆದಿದ್ದು, ಅದರಲ್ಲೂ ಬಹು ಸ್ಪೋರ್ಟ್ಸ್‌ ಮೋಡ್‌ ಹೊಂದಿದೆ.

ಇನ್ನು ಈ ಡಿಸ್‌ಪ್ಲೇ ಆಯತಾಕಾರದ ಬಣ್ಣದ ಟಚ್‌ಸ್ಕ್ರೀನ್‌ನೊಂದಿಗೆ ಕಾಣಿಸಿಕೊಂಡಿದ್ದು, ಇದರ ಬಾಡಿಯನ್ನು ಅಲ್ಯೂಮಿನಿಯಂ ಮತ್ತು ರಾಳದಿಂದ (resin) ನಿರ್ಮಿಸಲಾಗಿದೆ. ಆದರೆ ಬ್ಯಾಂಡ್‌ ಅನ್ನು ಸಿಲಿಕೋನ್‌ ಹಾಗೂ ಅಲ್ಯೂಮಿನಿಯಂ ಬಕಲ್ ಮೂಲಕ ತಯಾರು ಮಾಡಲಾಗಿದೆ. ಮೊದಲೇ ಹೇಳಿದಂತೆ ಈ ಸ್ಮಾರ್ಟ್ ವಾಚ್ 40 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಬೆಂಬಲಿಸುತ್ತದೆ.

Fitbit Charge 6 price
Image Credit: Mezha

ಆರೋಗ್ಯ ಸ್ಥಿತಿಯನ್ನು ಪರೀಕ್ಷಿಸಿಕೊಳ್ಳಲು ಸಹಕಾರಿ

ಆಪ್ಟಿಕಲ್ ಹಾರ್ಟ್ ರೇಟ್ ಮಾನಿಟರ್, 3-ಆಕ್ಸಿಸ್ ಅಕ್ಸೆಲೆರೊಮೀಟರ್, ಆಕ್ಸಿಜನ್ ಸ್ಯಾಚುರೇಶನ್ ಮಾನಿಟರ್, ತಾಪಮಾನ ಸೆನ್ಸರ್‌ ಮತ್ತು ಇಸಿಜಿ (ಎಲೆಕ್ಟ್ರೋಕಾರ್ಡಿಯೋಗ್ರಾಮ್) ಆಪ್‌ ಮತ್ತು ಇಡಿಎ (ಎಲೆಕ್ಟ್ರೋಡರ್ಮಲ್ ಚಟುವಟಿಕೆ) ಗೆ ಹೊಂದಿಕೆಯಾಗುವ ವಿವಿಧೋದ್ದೇಶ ವಿದ್ಯುತ್ ಸೆನ್ಸರ್‌ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಬಳಕೆದಾರರಿಗೆ ಸುಲಭವಾಗಿ ಅತ್ಯುತ್ತಮವಾದ ಮಾಹಿತಿಯನ್ನು ನೀಡುತ್ತದೆ.

ಇತರ ಫಿಟ್‌ನೆಸ್ ಟ್ರ್ಯಾಕರ್‌ಗಳಂತೆ, ಹೊಸ ಫಿಟ್‌ಬಿಟ್ ಚಾರ್ಜ್ 6 ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಉಸಿರಾಟದ ರೇಟ್, ಒತ್ತಡ ನಿರ್ವಹಣೆ ಮತ್ತು ಬಳಕೆದಾರರ ಚರ್ಮದ ತಾಪಮಾನವನ್ನು ಸಹ ಟ್ರ್ಯಾಕ್ ಮಾಡುವ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಮಹಿಳೆಯರ ಋತುಚಕ್ರದ ಟ್ರ್ಯಾಕರ್ ಅನ್ನು ಸಹ ನೀಡಲಿದ್ದು, ಈ ಮೂಲಕ ಮಹಿಳೆಯರ ಇತರೆ ಆರೋಗ್ಯದ ಮೇಲೂ ಸದಾ ಕಣ್ಣಿಟ್ಟಿರುತ್ತದೆ.

Fitbit Charge 6 Launch
Image Credit: Business-standard

ಉತ್ತಮ ಬ್ಯಾಟರಿ ಬ್ಯಾಕಪ್‌ ಹೊಂದಿದೆ

ಈ ಫಿಟ್‌ಬಿಟ್‌ ಚಾರ್ಜ್ 6 ಸ್ಮಾರ್ಟ್ ವೇರಬಲ್ ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೆರಡಕ್ಕೂ ಹೊಂದಿಕೊಳ್ಳಲಿದ್ದು, ಏತನ್ಮಧ್ಯೆ, ಫಿಟ್‌ಬಿಟ್‌ ಚಾರ್ಜ್ 6, 5 ಎಟಿಎಮ್ ರೇಟಿಂಗ್ ಅನ್ನು ನೀಡುತ್ತದೆ ಮತ್ತು ಏಳು ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ನೀಡಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಫಿಟ್‌ಬಿಟ್‌ ಚಾರ್ಜ್ 6 ಬೆಲೆ

ಅಬ್ಸಿಡಿಯನ್ ಮತ್ತು ಪಿಂಗಾಣಿ ಬಣ್ಣದ ಆಯ್ಕೆಗಳಲ್ಲಿ ಈ ವಾಚ್‌ ಕಾಣಿಸಿಕೊಂಡಿದ್ದು, ಈ ವಾಚ್‌ 13,300ರೂ.ಗಳಿಗೆ ಖರೀದಿ ಮಾಡಬಹುದು. ಇದು ಯುಎಸ್‌ ಬೆಲೆಯಾಗಿದೆ. ಆದರೆ, ಭಾರತದಲ್ಲಿ ಈ ವಾಚ್‌ ಅನ್ನು ಇನ್ನೂ ಲಾಂಚ್‌ ಮಾಡಲಾಗಿಲ್ಲ. ಇದು ಪ್ರಸ್ತುತ ಫಿಟ್‌ಬಿಟ್ ವೆಬ್‌ಸೈಟ್ ಮೂಲಕ ಮುಂಗಡ-ಆರ್ಡರ್‌ಗಳಿಗೆ ಲಭ್ಯವಿದ್ದು, ಅಕ್ಟೋಬರ್ 12 ರಿಂದ ಮಾರಾಟವಾಗಲಿದೆ.

Leave A Reply

Your email address will not be published.