FD Scheme: ದೇಶದ ಹಿರಿಯ ನಾಗಕರಿಗೆ ಈ ಬ್ಯಾಂಕುಗಳಲ್ಲಿ FD ಯೋಜನೆ ಆರಂಭ, ಹಣ ಇತ್ತು ಹೆಚ್ಚಿನ ಬಡ್ಡಿ ಪಡೆದುಕೊಳ್ಳಿ.
ಪಿಕ್ಸೆಟ್ ಡೆಪಾಸಿಟ್ ಮಾಡುವ ಹಿರಿಯ ನಾಗರಿಕರಿಗೆ ಬಂಪರ್ ಬಡ್ಡಿಯನ್ನು ನೀಡುವ ಬ್ಯಾಂಕ್ ಗಳ ಬಗ್ಗೆ ತಿಳಿದುಕೊಳ್ಳಿ.
Fixed Deposit Scheme For Senior Citizens: ಇತ್ತೀಚಿಗೆ ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿ ನೀಡುವ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಹಲವಾರು ಬ್ಯಾಂಕ್ ಗಳು ಹಿರಿಯ ನಾಗರಿಕರಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇಂತಹ ವಿಶೇಷ ನಿಶ್ಚಿತ ಠೇವಣಿ ಯೋಜನೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ Fixed Deposit ಮಾಡುವ ಹಿರಿಯ ನಾಗರಿಕರಿಗೆ ಬಂಪರ್ ಬಡ್ಡಿಯನ್ನು ನೀಡುತ್ತದೆ.
ಇಂತಹ ವಿಶೇಷ ಎಫ್ ಡಿ ಯೋಜನೆಗಳನ್ನು ಪ್ರಾರಂಭಿಸಿದ ಬ್ಯಾಂಕ್ ಗಳೆಂದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹೆಚ್ ಡಿ ಎಫ್ ಸಿ, ಹಾಗೂ ಐಸಿಐಸಿಐ ಬ್ಯಾಂಕ್. ಇದೀಗ ಬ್ಯಾಂಕ್ ಗಳು ಆಕರ್ಷಕ ಬಡ್ಡಿ ದರಗಳ ಉಳಿತಾಯ ಯೋಜನೆಗಳ ಕುರಿತು ಈಗ ಪ್ರಚಾರ ಮಾಡುತ್ತಿವೆ.
SBI Wecare Deposit Sceheme
ಇತ್ತೀಚಿಗೆ ಎಸ್ ಬಿಐ ಹಿರಿಯ ನಾಗರಿಕರಿಗೆ Wecare Depositr Scheme ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಲ್ಲಿ 5 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯ FD ಅಲ್ಲಿ 50 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಲಾಗುತ್ತದೆ. ಎಸ್ ಬಿಐ ಇದರ ಗಡುವನ್ನು ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಿದೆ. ಇಂತಹ ಠೇವಣಿಗಳ ಮೇಲೆ ಎಸ್ ಬಿಐ 7 .50 ರಷ್ಟು ಬಡ್ಡಿಯನ್ನು ನೀಡುತ್ತದೆ.
HDFC Senior Citizen care FD Scheme
ಹಿರಿಯ ನಾಗರಿಕರಿಗೆ ಹೆಚ್ ಡಿ ಎಫ್ ಸಿ ಬ್ಯಾಂಕ್ 5 ವರ್ಷದಿಂದ 10 ವರ್ಷದ ವರೆಗೆ 25 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ನೊಂದಿಗೆ ವಿಶೇಷ ಸ್ಕೀಮ್ ಅನ್ನು ಶುರು ಮಾಡಿದೆ. ಇದರಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 7 .75 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಈ ಯೋಜನೆ ನವೆಂಬರ್ 7 2023 ರ ವರೆಗೆ ಮಾತ್ರ ಮಾನ್ಯವಾಗಿರುತ್ತದೆ.
ICICI Golden Year FD Scheme
ಹಿರಿಯ ನಾಗರಿಕರು ಗೋಲ್ಡನ್ ಇಯಾರ್ ಎಫ್ ಡಿ ಯಲ್ಲಿ ಹೂಡಿಕೆ ಮಾಡಿದರೆ ಶೇಕಡಾ 7 .5 ರಷ್ಟು ಬಡ್ಡಿಯನ್ನು ಪಡೆಯಬಹುದಾಗಿದೆ.
IDBI Amrit Mahostav FD
ಹಾಗೆ ಐಡಿಬಿಐ ಬ್ಯಾಂಕ್ ಸಹ ಹಿರಿಯ ನಾಗರಿಕರಿಗೆ ಸೀಮಿತ ಅವಧಿಗೆ ಹೊಸ ಯೋಜನೆ ಯನ್ನು ಪ್ರಾರಂಭಿಸಿದೆ. ಈ ಯೋಜನೆ 375 ದಿನಗಳ ವರೆಗೆ ಇರುತ್ತದೆ. ಇದರಲ್ಲಿ ಹಿರಿಯ ನಾಗರಿಕರು 375 ದಿನ ಶೇಕಡಾ 7 .60 ಬಡ್ಡಿ ಮತ್ತು 444 ದಿನಗಳು ಶೇಕಡಾ 7 .65 ರಷ್ಟು ಬಡ್ಡಿಯನ್ನು ಪಡೆಯುತ್ತಾರೆ.