iPhone 14 Offer: ಐಫೋನ್ ಪ್ರಿಯರಿಗೆ ಇದೊಂದು ಉತ್ತಮ ಆಫರ್, ಅರ್ಧಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಐಫೋನ್ 14.
ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಐಫೋನ್ 14 ಕಡಿಮೆ ಬೆಲೆಗೆ ಖರೀದಿಸಿ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ,
Flipkart Big Billion Days iPhone 14 Offer: ಫ್ಲಿಪ್ ಕಾರ್ಟ್ (Flipkart) ಬಿಗ್ ಬಿಲಿಯನ್ ಡೇ ಅ. 8ರಿಂದ 15 ರ ವರೆಗೆ ನಡೆಯಲಿದೆ. ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ಒಂದು ದಿನ ಮೊದಲೇ ಅಂದರೆ ಅ.7 ರಿಂದಲೇ ಇದರ ಪ್ರಯೋಜನ ಹೊಂದಲಿದ್ದಾರೆ.
ಬಿಗ್ ಬಿಲಿಯನ್ ಡೇಸ್ 10ನೇ ವರ್ಷದ ಮಾರಾಟ ಮೇಳ ಇದಾಗಿದೆ. ಭಾರತೀಯ ಗ್ರಾಹಕರು ಬಹಳ ನಿರೀಕ್ಷೆಯಿಂದ ಎದುರು ನೋಡುವ ವರ್ಷಕ್ಕೊಮ್ಮೆ ಮಾತ್ರ ಬರುವ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳಕ್ಕೆ ಕ್ಷಣಗಣನೆ ಆರಂಭ.

ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಏನೆಲ್ಲ ಖರೀದಿಸಬಹುದು?
ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಮೊಬೈಲ್ ಫೋನ್, ಲ್ಯಾಪ್ ಟಾಪ್, ಸ್ಮಾರ್ಟ್ ವಾಚ್ ಸೇರಿದಂತೆ ನಾನಾ ಗ್ಯಾಜೆಟ್ ಗಳು, ಗೃಹೋಪಯೋಗಿ ಉಪಕರಣಗಳು, ಎಲೆಕ್ಟ್ರಾನಿಕ್ಸ್ ಗಳು, ಉಡುಪುಗಳು ಸೇರಿದಂತೆ ನಾನಾ ವಿಭಾಗಗಳ ಉತ್ಪನ್ನಗಳ ಮೇಲೆ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ದೊರಕುತ್ತದೆ. ಇದಲ್ಲದೇ ವಾಶಿಂಗ್ ಮೆಷಿನ್ ಗಳು, ಏರ್ ಟಿಕಟ್ ಗಳು, ಇಯರ್ ಬಡ್ ಗಳು, ಗ್ರೋಸರಿ ಪದಾರ್ಥಗಳು ರಿಯಾಯಿತಿ ದರದಲ್ಲಿ ದೊರಕಲಿವೆ. ಫ್ಲಿಪ್ ಕಾರ್ಟ್ ನಲ್ಲಿ ಮಾಮೂಲಿ ದಿನಗಳಲ್ಲಿ ದೊರಕುವ ವಸ್ತುಗಳ ಬೆಲೆ ಕ್ಕಿಂತ, ಬಿಗ್ ಬಿಲಿಯನ್ ದಿನಗಳಲ್ಲಿ ಕಡಿಮೆ ಬೆಲೆ ಇರುತ್ತದೆ.
ಭರ್ಜರಿ ರಿಯಾಯಿತಿಯೊಂದಿಗೆ ಐಫೋನ್ 14 ಖರೀದಿಸಿ
ಐಫೋನ್ 14 ಪ್ಲಸ್ ದರ 128 ಜಿಬಿ ಮಾದರಿಗೆ ಈಗ 74 ಸಾವಿರ ರೂ. ಇದೆ. ಈ ಮಾದರಿಯು 50 ರಿಂದ 60 ಸಾವಿರದೊಳಗೆ ದೊರಕುವ ಸೂಚನೆಯನ್ನು ನೀಡಲಾಗಿದೆ. ಐಫೋನ್ 12 ಮಾದರಿ 32,999 ರೂ.ಗೆ ದೊರಕಲಿದೆ. ಈಗ ಇದರ 64 ಜಿಬಿ ಮಾದರಿಯ ದರ 49 ಸಾವಿರ ರೂ. ಇದೆ! ಬಿಬಿಡಿ ಸೇಲ್ ನಲ್ಲಿ ಐಫೋನ್ 14 ಅನ್ನು ಇದುವರೆಗಿನ ಅತ್ಯಂತ ಕಡಿಮೆ ಬೆಲೆಗೆ ನೀಡುವುದಾಗಿ Flipkart Website ತಿಳಿಸಿದೆ. 40 ಸಾವಿರದಿಂದ 50 ಸಾವಿರದೊಳಗೆ ಅದರ ದರ ಇರಲಿದೆ. ಈಗ ಐಫೋನ್ 14ನ 128 ಜಿಬಿ ಆವೃತ್ತಿಯ ದರ 65 ಸಾವಿರ ರೂ. ಇದೆ.

ಬ್ಯಾಂಕ್ ಗಳಿಂದ ಬಿಗ್ ಆಫರ್ ಗಳು ಲಭ್ಯ
ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಉಳ್ಳವರಿಗೆ ಶೇ. 5ರಷ್ಟು ತಕ್ಷಣದ ರಿಯಾಯಿತಿ ಮತ್ತು ಶೇ. 5ರಷ್ಟು ಅನ್ ಲಿಮಿಟೆಟ್ ಕ್ಯಾಶ್ ಬ್ಯಾಕ್ ದೊರಕಲಿದೆ. ಪ್ರಮುಖ ಬ್ಯಾಂಕ್ ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಿಗೆ ಬಡ್ಡಿ ರಹಿತ ಇಎಂಐ ಸೌಲಭ್ಯ ಇರಲಿದೆ.
ಮಾತ್ರವಲ್ಲದೇ ಈ ಬಾರಿ ಐಸಿಐಸಿಐ ಬ್ಯಾಂಕ್ ಮತ್ತು ಕೊಟಕ್ ಮಹಿಂದ್ರಾ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳ ಮೂಲಕ ಖರೀದಿಸಿದರೆ ಶೇ. 10ರಷ್ಟು ತಕ್ಷಣದ ರಿಯಾಯಿತಿ ದೊರಕಲಿದೆ. ಅಲ್ಲದೇ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಶೇ. 10ರಷ್ಟು ರಿಯಾಯಿತಿ ಲಭ್ಯವಾಗಲಿದೆ. EMI ಖರೀದಿಗಳಿಗೂ ಶೇ. 10 ರ ರಿಯಾಯಿತಿ ದೊರಕುತ್ತದೆ.