Free Electricity: ಮನೆಗಳಿಗೆ ಮಾತ್ರವಲ್ಲದೆ ಇಂತಹ ಕೆಲಸ ಮಾಡುವವರಿಗೂ ಕೂಡ 250 ಯೂನಿಟ್ ಕರೆಂಟ್ ಉಚಿತ, ಇನ್ನೊಂದು ಘೋಷಣೆ.
ಈ ಕೆಲಸ ಮಾಡುವವರಿಗೆ 250 ಯೂನಿಟ್ ಉಚಿತ ಕರೆಂಟ್ ನೀಡಲು ನಿರ್ಧಾರ ಮಾಡಿದ ಕಾಂಗ್ರೆಸ್ ಸರ್ಕಾರ.
Free Electricity Scheme For Weavers: ನೇಕಾರರಿಗಾಗಿ ರಾಜ್ಯ ಸರ್ಕಾರ ಒಂದು ಮಹತ್ವದ ಹೇಳಿಕೆ ನೀಡಿದೆ. ದಸರಾ ಹಾಗು ದೀಪಾವಳಿ ಹಬ್ಬದ ಪ್ರಯುಕ್ತ ನೇಕಾರರಿಗೆ ಶುಭ ಸುದ್ದಿ ನೀಡಿದೆ. ನೇಕಾರರಿಗೆ ವಿದ್ಯುತ್ ಬಹಳ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಹೆಚ್ಚಿಗೆ ಉಚಿತ ವಿದ್ಯುತ್ ನೀಡುವುದಾಗಿ ಸರ್ಕಾರ ಈಗಾಗಲೇ ಭರವಸೆ ನೀಡಿದ್ದು, ಈಗ ಜಾರಿಗೆ ತರುತ್ತಿದೆ ಎನ್ನಲಾಗಿದೆ.
ನೇಕಾರರಿಗೆ ಸರ್ಕಾರದ ಈ ಯೋಜನೆ ಬಹಳ ಅನುಕೂಲಕರವಾಗಲಿದ್ದು, ಪ್ರತಿಯೊಬ್ಬ ನೇಕಾರನು ಈ ಯೋಜನೆಯ ಪ್ರಯೋಜನ ಪಡೆಯತಕ್ಕಾದ್ದು ಎಂದು ಈ ಮೂಲಕ ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ನೇಕಾರರಿಗೆ ಉಚಿತ ವಿದ್ಯುತ್
ನೇಕಾರರಿಗಾಗಿ ಸರಕಾರ ಉಚಿತ ವಿದ್ಯುತ್ ಹೆಚ್ಚಳ ಬಗ್ಗೆ ಆದೇಶ ಹೊರಡಿಸಿದ್ದು, ಇದರಿಂದ 35 ರಿಂದ 40 ಸಾವಿರ ನೇಕಾರರ ಕುಟುಂಬಗಳಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎನ್ನಲಾಗಿದೆ. ಈ ಯೋಜನೆಗೆ 2,129 ರಿಂದ 2,149 ಕೋಟಿವರೆಗೆ ಈ ಯೋಜನೆ ಅನುಷ್ಠಾನಕ್ಕೆ ವೆಚ್ಚವಾಗಲಿದೆ. ದೊಡ್ಡ ನೇಕಾರರಿಗೂ 500 ಯುನಿಟ್ ವರೆಗೆ 71.25 ನಂತೆ ರಿಯಾಯ್ತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.ಎಂದು ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಹೇಳಿದ್ದಾರೆ.

ನೇಕಾರರ ಕುಟುಂಬಕ್ಕೆ ಈ ಯೋಜನೆ ಬಹಳ ಉಪಯುಕ್ತವಾಗಿದೆ
ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು ನಮ್ಮ ಪಕ್ಷ ಚುನಾವಣೆ ಸಂದರ್ಭದಲ್ಲಿ ನೇಕಾರರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಘೋಷಣೆಯನ್ನು ಅನುಷ್ಠಾನಗೊಳಿಸಲು ಶುಕ್ರವಾರ ಸರ್ಕಾರ ಆದೇಶ ಹೊರಡಿಸಿದೆ ಎಂದರು. ರಾಜ್ಯದಲ್ಲಿ 1 ರಿಂದ 10ರಷ್ಟು ಎಚ್ಪಿಹೊಂದಿದ ನೇಕಾರರು ಶೇ.80 ರಷ್ಟು ಇದ್ದಾರೆ. ಶೇ.20 ರಷ್ಟು ದೊಡ್ಡ ನೇಕಾರರಿದ್ದಾರೆ. ಶೇ. 80ರಷ್ಟು ನೇಕಾರರಿಗೆ ಉಚಿತ ವಿದ್ಯುತ್ ಪ್ರಯೋಜನ ಪಡೆಯಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.