Sewing Machine: ನಿರುದ್ಯೋಗಿ ಮಹಿಳೆಯರಿಗೆ ಬಿಗ್ ನ್ಯೂಸ್, ಕೇಂದ್ರ ಸರ್ಕಾರದ ಉಚಿತ ಹೊಲಿಗೆ ಯಂತ್ರಕ್ಕೆ ಇಂದೇ ಅರ್ಜಿ ಸಲ್ಲಿಸಿ.
ಉಚಿತ ವಿದ್ಯುತ್ ಚಾಲಿತ ಹೋಲಿಗೆ ಯಂತ್ರ ಪಡೆಯಲು ಇಂದೇ ಅರ್ಜಿ ಹಾಕಿ.
Free Sewing Machine: ಎಷ್ಟೋ ಮಹಿಳೆಯರು ಮನೆಯಲ್ಲೇ ಇದ್ದು ನಿರುದ್ಯೋಗಿಗಳಾಗಿರುತ್ತಾರೆ. ಕೆಲವು ಅನಿವಾರ್ಯ ಕಾರಣಗಳಿಂದ ಅವರಿಗೆ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಅಸಾಧ್ಯವಾಗಿರುತ್ತದೆ. ಅನೇಕ ಕಾರಣಗಳಿಂದ ಮನೆಯಲ್ಲೇ ಸುಮ್ಮನೆ ಕೂತಿರುವ ಮಹಿಳೆಯರಿಗೆ ಇಲ್ಲಿದೆ ಒಂದು ಉತ್ತಮ ಅವಕಾಶ.
ನೀವು ಕೂಡ ಹಣ ಸಂಪಾದನೆ ಮಾಡಬೇಕೆಂಬ ಆಸೆ ಹೊಂದಿದರೆ ಅರ್ಜಿ ಸಲ್ಲಿಸಿ.ಸದ್ಯ ಮಹಿಲ್ಯರಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನ ಘೋಷಣೆ ಮಾಡಲಾಗಿದ್ದು ಅರ್ಹ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ವಾಸವಾಗಿರುವ ಹೋಲಿಗೆ ವೃತ್ತಿ ಗೊತ್ತಿರುವ ಮಹಿಳೆಯರಿಗೆ ಹೋಲಿಗೆ ಯಂತ್ರ ಉಚಿತವಾಗಿ ನೀಡುವುದರ ಮೂಲಕ ನಿರುದ್ಯೋಗ ಮಹಿಳೆಯರು ಕೂಡ ಉದ್ಯೋಗ ಹೊಂದಿದ ಮಹಿಳೆಯರಾಗಬಹುದಾಗಿದೆ.
ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು
ಜಿಲ್ಲಾ ಪಂಚಾಯತಿಯ ಕೈಗಾರಿಕಾ ವಿಭಾಗದಿಂದ ಜಿಲ್ಲಾ ವಲಯದ ಯೋಜನೆಯಡಿ ಮಹಿಳೆಯರು ಉಚಿತ ಹೋಲಿಗೆ ಯಂತ್ರ ಪಡೆಯಲು ಅರ್ಜಿ ಸಲ್ಲಿಸಬೇಕಾದರೆ ಈ ನಿಯಮಗಳು ಅನ್ವಯ ಆಗುತ್ತದೆ. ಮೊದಲೆನೆದಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವ ಮಹಿಳೆಯರಿಗೆ ಮಾತ್ರ ಅರ್ಜಿ ಹಾಕಲು ಅವಕಾಶ. 01 -09 -2023 ಕ್ಕೆ ವಯೋಮಿತಿ 21 ವರ್ಷದಿಂದ 45 ವರ್ಷದ ಒಳಗಿನವರು ಈ ಯೋಜನೆಯಡಿ ಅರ್ಜಿ ಹಾಕಬಹುದಾಗಿದೆ.
ಕನಿಷ್ಠ 10 ನೇ ತರಗತಿ ಉತ್ತೀರ್ಣ ಆದವರು ಮಾತ್ರ ಅರ್ಜಿ ಹಾಕಬಹುದು, ಹಾಗೆಯೆ ಒಂದು ಕುಟುಂಬಕ್ಕೆ ಒಂದೇ ಅರ್ಜಿ ಹಾಕುವಂತೆ ಕಡ್ಡಾಯ ನಿಯಮ ಮಾಡಲಾಗಿದೆ. ಈಗಾಗಲೇ ಈ ಯೋಜನೆಯಡಿ ಉಚಿತ ಹೋಲಿಗೆ ಯಂತ್ರ ಪಡೆದಿದ್ದರೆ ಮತ್ತೆ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ, ಸರ್ಕಾರಿ ನೌಕರರು ಹಾಗು ಅವರ ಅವಲಂಭಿತರು ಈ ಯೋಜನೆಗೆ ಅರ್ಜಿ ಹಾಕಲು ಅರ್ಹರಲ್ಲ ಎಂದು ಕೈಗಾರಿಕಾ ಹಾಗು ವಾಣಿಜ್ಯ ಇಲಾಖೆಯ ಉಪನಿರ್ದೇಶಕ ಅಬ್ದುಲ್ ಅಜೀಮ್ ಅವರು ತಿಳಿಸಿದ್ದಾರೆ.
ಉಚಿತ ಹೋಲಿಗೆ ಯಂತ್ರ ಪಡೆಯಲು ಅರ್ಜಿ ಹಾಕುವ ವಿಧಾನ :
ಉಚಿತ ಹೋಲಿಗೆ ಯಂತ್ರ ಪಡೆಯಲು ಆಸಕ್ತಿ ಇರುವ ಮಹಿಳೆಯರು https://kalaburagi.nic.in ಅಥವಾ https://zpkalaburagi .karnataka.gov.in website ನಲ್ಲಿ ಅವಶ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. ಸಂಬಂಧ ಪಟ್ಟ ಪೂರಕ ದಾಖಲೆಗಳನ್ನು ಸ್ವಯಂ ಧ್ರಡೀಕೃತ ಪ್ರತಿಗಳೊಂದಿಗೆ ಅಪ್ಲೋಡ್ ಮಾಡುವ ಮೂಲಕ 2023 ರ್ ಸೆಪ್ಟೆಂಬರ್ 31 ರ್ ಒಳಗೆ online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅಷ್ಟೇ ಅಲ್ಲದೆ ಹೆಚ್ಚಿನ ಮಾಹಿತಿಗಾಗಿ website ಅಥವಾ ಆಯಾಯ ಜಿಲ್ಲೆಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. ಸದ್ಯ ಕುಲಬುರಗಿಯಲ್ಲಿ ಅರ್ಜಿ ಕರೆಯಲಾಗಿದ್ದು ಅಲ್ಲಿನ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ರಾಜ್ಯದ ವಿವಾದ ಜಿಲ್ಲೆಗಳಲ್ಲಿ ಅರ್ಜಿ ಕರೆಯಲಾಗುತ್ತದೆ.