Ganga Kalyana: ವ್ಯವಸಾಯ ಮಾಡುವ ರೈತರಿಗೆ ಸರ್ಕಾರದಿಂದ ಉಚಿತ ಬೋರ್ ವೆಲ್ ಘೋಷಣೆ, ಇಂದೇ ಅರ್ಜಿ ಸಲ್ಲಿಸಿ.

ವ್ಯವಸಾಯ ಮಾಡುವ ರೈತರಿಗೆ ಸರ್ಕಾರದಿಂದ ಉಚಿತ ಬೋರ್ ವೆಲ್, ಗಂಗಾ ಕಲ್ಯಾಣ ಯೋಜನೆ.

Ganga Kalyana Scheme 2023: ರಾಜ್ಯದಲ್ಲಿ ಈ ವರ್ಷ ಮಳೆ ಸರಿಯಾಗಿ ಬರದೇ ರೈತರ ಬೆಳೆ ಎಲ್ಲಾ ನಾಶ ಆಗಿರುವುದು ನಮಗೆ ತಿಳಿದಿರುತ್ತದೆ. ಮಳೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಳೆ ಇಲ್ಲದೆ ನೀರಾವರಿ ಸಮಸ್ಯೆಯನ್ನು ಎದುರಿಸುತ್ತಿರುವ ಪರಿಶಿಷ್ಟ ಜಾತಿಯ ಅರ್ಹ ರೈತರಿಗೆ ಈ ಯೋಜನೆಯ ಫಲ ದೊರೆಯಲಿದೆ.

ಗಂಗಾ ಕಲ್ಯಾಣ ಯೋಜನೆಯ (Ganga Kalyana Scheme) ಅಡಿಯಲ್ಲಿ ರೈತರಿಗೆ ಉಚಿತ ಬೋರ್‌ವೆಲ್‌ (Free borewell) ಕೊರೆಸಲು ಹಾಗು ಪಂಪ್ ಸೆಟ್ ಅಳವಡಿಸಲು ಸಹಾಯಧನ (subsidy) ನೀಡುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

Ganga Kalyana Scheme 2023
Image Credit: Sarkari Yojana

ಬೋರ್‌ವೆಲ್‌ ಹಾಗು ಪಂಪ್‌ಸೆಟ್ ಅಳವಡಿಸಲು ಸಹಾಯಧನ

ಸಮಾಜ ಕಲ್ಯಾಣ ಇಲಾಖೆ ವಿವಿಧ ನಿಗಮಗಳಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಕರೆದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಜಮೀನಿನಲ್ಲಿ ಬೋರ್‌ವೆಲ್‌ ಕೊರೆಸುವುದರ ಜತೆಗೆ ಪಂಪ್‌ಸೆಟ್ ಅಳವಡಿಸಿಕೊಳ್ಳಲು ಸರ್ಕಾರ ಸಹಾಯಧನವನ್ನು ನೀಡುತ್ತಿದೆ. ಒಟ್ಟು 1.5 ಲಕ್ಷ ರೂಪಾಯಿಯಿಂದ 3.50 ಲಕ್ಷ ರೂಪಾಯಿಗಳವರೆಗೆ ರೈತರು ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿದೆ. ಈ ಯೋಜನೆಯಿಂದ ಮುಂದಿನ ದಿನಗಳಲ್ಲಿ ನೀರಾವರಿ ಸಮಸ್ಯೆ ಅಷ್ಟಾಗಿ ಭಾದಿಸದು. ಇದರಿಂದ ಉತ್ತಮ ಬೆಳೆ ಪಡೆಯಬಹುದಾಗಿದ್ದು, ಆರ್ಥಿಕವಾಗಿಯೂ ಸ್ವಾವಲಂಬನೆ ಸಾಧಿಸಬಹುದು ಎಂಬ ನಿಟ್ಟಿನಲ್ಲಿ ಈ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆ ಹಾಗು ದಾಖಲೆಗಳು

ಗಂಗಾ ಕಲ್ಯಾಣ ಯೋಜನೆಗೆ ಪರಿಶಿಷ್ಟ ಜಾತಿ/ ಪಂಗಡದವರು ಅರ್ಜಿ ಹಾಕಬಹುದಾಗಿದೆ.ಕನಿಷ್ಠ 21 ವರ್ಷ ವಯೋಮಿತಿ ಆಗಿರಬೇಕು ಹಾಗು ಆದಾಯ ಮಿತಿ (ಗ್ರಾಮೀಣ ಪ್ರದೇಶವಾದರೆ 1.5 ಲಕ್ಷ ರೂ., ನಗರ ಪ್ರದೇಶವಾದರೆ 2 ಲಕ್ಷ ರೂ.) ಆಗಿರಬೇಕು. ಈ ಯೋಜನೆಗೆ ಅರ್ಜಿ ಹಾಕಲು , ಜಾತಿ ಪ್ರಮಾಣಪತ್ರ, ಸಣ್ಣ ಹಿಡುವಳಿದಾರರ ಪ್ರಮಾಣಪತ್ರ, ಇತ್ತೀಚಿನ ಪಹಣಿ, ಆದಾಯ ಪ್ರಮಾಣ ಪತ್ರ, ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.

Ganga Kalyana Yojana
Image Credit: India Filings

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕುವ ಕುರಿತು ಮಾಹಿತಿ

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಲು ನವೆಂಬರ್ 29 ಕೊನೆಯ ದಿನಾಂಕ ಆಗಿರುತ್ತದೆ. ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾ ಕೇಂದ್ರ ಇಲ್ಲವೇ ಸೇವಾಸಿಂಧು ಪೋರ್ಟಲ್‌ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆ ಬಗ್ಗೆ ಗೊಂದಲಗಳಿದ್ದರೆ, ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಲ್ಯಾಣ ಮಿತ್ರ 24×7 ಸಹಾಯವಾಣಿ 9482300400 ಅಥವಾ ಸೋಷಿಯಲ್‌ ಮೀಡಿಯಾ X ಖಾತೆ @SWDGok ಗೆ ಸಂಪರ್ಕ ಮಾಡಬಹುದು.

Leave A Reply

Your email address will not be published.