Gas Cylinder: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಮಹತ್ವದ ಘೋಷಣೆ.
ಗ್ಯಾಸ್ ಸಿಲಿಂಡರ್ ಮೇಲೆ ಮಹತ್ವದ ನಿಯಮ ಜಾರಿಗೆ ಮುಂದಾದ ಕೇಂದ್ರ ಸರ್ಕಾರ.
Gas Cylinder Price Down: ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ ಎಂದು ಹೇಳಬಹುದು. ಹೌದು ಜನರು ಪ್ರತಿನಿತ್ಯ ಬಳಕೆ ಮಾಡುವ ಬಹುತೇಕ ಎಲ್ಲಾ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ಜನರು ಸರ್ಕಾರಕ್ಕೆ ಹಿಡಿ ಶಾಪವನ್ನ ಹಾಕುವುದು ನಾವು ನೀವೆಲ್ಲ ನೋಡಬಹುದಾಗಿದೆ. ಸದ್ಯ ತಿಂಗಳ ಆರಂಭದಲ್ಲಿ ವಾಣಿಜ್ಯ ಗ್ಯಾಸ್ ಬೆಲೆ ಕೊಂಚ ಇಳಿಕೆ ಕಾಣುವುದರ ಮೂಲಕ ಜನರ ಮುಖದಲ್ಲಿ ಮಂದಹಾಸ ಮಾಡಿತ್ತು.
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1100 ರೂಪಾಯಿ ಗಡಿಯನ್ನ ದಾಟಿದ್ದು ಜನರು ಗ್ಯಾಸ್ ಬೆಲೆಗೆ ತತ್ತರಿಸಿ ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಸದ್ಯ ಇದರ ಬೆನ್ನಲ್ಲೇ ದೇಶದ ಜನರಿಗೆ ಸಂತಸದ ಸುದ್ದಿ ಬಂದಿದೆ ಎಂದು ಹೇಳಬಹುದು. ಹಾಗಾದರೆ ಏನದು ಸಂತಸದ ಸುದ್ದಿ ಎಂದು ತಿಳಿಯೋಣ ಬನ್ನಿ.

ದೇಶದಲ್ಲಿ ದುಬಾರಿಯಾದ ಗ್ಯಾಸ್ ಸಿಲಿಂಡರ್
ಹೌದು ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಬಹಳ ದುಬಾರಿಯಾಗಿದೆ ಎಂದು ಹೇಳಬಹುದು. ಗ್ಯಾಸ್ ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು ವಾಣಿಜ್ಯ ಉದ್ದೇಶಕ್ಕೆ ಮತ್ತು ಗೃಹ ಬಳಕೆಗೆ ಬಳಸುವ ಗ್ಯಾಸ್ ಸಿಲಿಂಡರ್ ಜನರ ಜೇಬಿಗೆ ಕತ್ತರಿ ಬೀಳುವಂತೆ ಮಾಡಿದೆ. ಇದರ ಬೆನ್ನಲ್ಲೇ ಈಗ ಕೇಂದ್ರ ಸರ್ಕಾರದ ಮಹತ್ವದ ತೀರ್ಮಾನವನ್ನ ಮಾಡಿದ್ದು ಇದು ಜನರ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ಗ್ಯಾಸ್ ಬೆಲೆ ಇಳಿಕೆ ಮಾಡಲು ನಿರ್ಧಾರ ಮಾಡಿದ ಕೇಂದ್ರ
ಹೌದು ಕೇಂದ್ರ ಸರ್ಕಾರ ಈಗ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಲು ತೀರ್ಮಾನವನ್ನ ಮಾಡಿದೆ. ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆಮಾಡಲು ಬದ್ಧವಾಗಿದೆ ಎಂದು ಸಚಿವರು ಮಾಹಿತಿಯನ್ನ ನೀಡಿದ್ದಾರೆ, ಜನರ ಆರ್ಥಿಕ ಹೊರೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಸಚಿವರಾದ ಹರ್ದೀಪ್ ಸಿಂಗ್ ಪುರಿ ಅವರು ಹೇಳಿದ್ದಾರೆ.

ಸದ್ಯ ಹಿಂದುಳಿದ ವರ್ಗದವರು ಗ್ಯಾಸ್ ಸಿಲಿಂಡರ್ ಗೆ ಸಬ್ಸಿಡಿಯನ್ನ ಪಡೆಯುತ್ತಿರುವುದರ ಬಗ್ಗೆ ಕೂಡ ಸಚಿವರು ಮಾತನಾಡಿದ್ದಾರೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಅಗ್ಗವಾಗಲಿದೆ ಎಂದು ಮಾಧ್ಯಮಗಳ ಮುಂದೆ ಸಚಿವರು ಹೇಳಿಕೆಯನ್ನ ನೀಡಿದ್ದಾರೆ.