Gas Cylinder: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಪಡೆಯುವವರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಸಬಿಸಿ ಹಣ 300 ರೂ ಗೆ ಏರಿಕೆ.
ಇನ್ನುಮುಂದೆ ಸಿಲಿಂಡರ್ ಸಬ್ಸಿಡಿಯಲ್ಲಿ ಬಾರಿ ಏರಿಕೆ, ಗ್ರಾಹಕರು ಕುಶ್.
Gas Cylinder Subsidy Hike: ಸಿಲಿಂಡರ್ ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ಇಲ್ಲಿದೆ ಸಿಹಿ ಸುದ್ದಿ. ದಸರಾ ಹಬ್ಬಕ್ಕೆ ಮೋದಿ ಸರ್ಕಾರ ಉಜ್ವಲ ಯೋಜನೆಯ (Ujjwala Yojana) ಫಲಾನುಭವಿಗಳಿಗೆ ದೊಡ್ಡ ಉಡುಗೊರೆ ನೀಡಿದೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈಗ 200 ರೂ.ಗಳ ಸಬ್ಸಿಡಿಯನ್ನ ಮತ್ತೆ 100 ರೂಪಾಯಿ ಹೆಚ್ಚಿಸಲಾಗಿದ್ದು, ಈಗ 300 ರೂಪಾಯಿ ಪಡೆಯಲಿದ್ದಾರೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಅಂದಹಾಗೆ ರಕ್ಷಾಬಂಧನ ಮತ್ತು ಓಣಂ ಸಂದರ್ಭದಲ್ಲಿ ಕೇಂದ್ರ ಸಚಿವ ಸಂಪುಟವು ಎಲ್ಪಿಜಿಯಲ್ಲಿ 200 ರೂ.ಗಳ ಕಡಿತವನ್ನು ಘೋಷಿಸಿದೆ ಎಂದು ಅನುರಾಗ್ ಠಾಕೂರ್ ಹೇಳಿದರು. ಇಂದು, ಉಜ್ವಲ ಯೋಜನೆಯ ಫಲಾನುಭವಿಯನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲಾಗಿದೆ.

200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಲಭ್ಯ
ಕ್ಯಾಬಿನೆಟ್ ಸಭೆಯ ನಂತ್ರ ಮಾತನಾಡಿದ ಸಚಿವರು ಉಜ್ವಲ ಯೋಜನೆಯಡಿ ಸಹೋದರಿಯರು ಈಗ 300 ರೂ.ಗಳ ಸಬ್ಸಿಡಿ ಪಡೆಯಲಿದ್ದಾರೆ ಎಂದು ಹೇಳಿದರು. ಉಜ್ವಲ ಯೋಜನೆ ಮಹಿಳೆಯರ ಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದ್ದರಿಂದ, ಈಗ 200 ರೂ.ಗಳ ಬದಲು, 300 ರೂ.ಗಳ ಸಬ್ಸಿಡಿ ಲಭ್ಯವಿರುತ್ತದೆ. ಈ ಹಿಂದೆ ಉಜ್ವಲ ಯೋಜನೆಯಡಿ, ಜನರು ಸಿಲಿಂಡರ್ನಲ್ಲಿ 200 ರೂ.ಗಳ ಸಬ್ಸಿಡಿಯನ್ನು ಪಡೆಯುತ್ತಿದ್ದರು” ಎಂದರು.