Gattimela Serial: ಗಟ್ಟಿಮೇಳ ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್, ಸಂಕಷ್ಟದಲ್ಲಿ ಸುಹಾಸಿನಿ.
ಗಟ್ಟಿಮೇಲೆ ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್.
Gattimela Kannada Serial: ಗಟ್ಟಿಮೇಳ ಧಾರಾವಾಹಿ (Gattimela Serial) ದಿನದಿಂದ ದಿನಕ್ಕೆ ಬಿಗ್ ಟ್ವೀಸ್ಟ್ ನೀಡುತ್ತಿದೆ. ಒಂದು ಕಡೆ ಸುಹಾಸಿನಿ ಮತ್ತೆ ವೈದೇಹಿಯನ್ನು ಹೇಗೆ ತನ್ನ ಹಿಡಿತಕ್ಕೆ ತರಲಿ ಎಂದು ಪ್ಲಾನ್ ಮಾಡುತ್ತಿರುತ್ತಾಳೆ. ಅದೇ ಸಮಯಕ್ಕೆ ಒಂದು ಒಳ್ಳೆ ಪ್ಲಾನ್ ಮಾಡಿದ ಸುಹಾಸಿನಿ ವೈದೇಹಿ ಬಳಿ ಹೋಗಿ ಅವಳ ಗಂಡನ ವಿಡಿಯೋ ಅಂದರೆ ಸೂರ್ಯ ನಾರಾಯಣರ ವಿಡಿಯೋ ತೋರಿಸಿ ಹೆದರಿಸುತ್ತಾಳೆ.
ಆಗ ವೈದೇಹಿ ದಯಮಾಡಿ ತನ್ನ ಗಂಡನಿಗೆ ಏನು ಮಾಡಬೇಡ, ಅವರು ಎಲ್ಲಿದಾರೆ ನಾನು ಅವರನ್ನು ನೋಡಬೇಕು ಎಂದು ಅಂಗಲಾಚಿ ಬೇಡುತ್ತಾಳೆ. ಆಗ ಕೋಪದಿಂದ ಸುಹಾಸಿನಿ ಇಷ್ಟು ದಿನ ಅಷ್ಟು ಹಾರಾಡುತಿದ್ಯಲ್ಲ ಅನುಭವಿಸು ಎಂದು ಅವಳನ್ನು ಬೈಯುತ್ತಾಳೆ.

ವೈದೇಹಿ ಅಮ್ಮನಿಗೂ ಈ ಮನೆಗೂ ಏನೋ ಸಂಬಂಧವಿದೆ
ಅಮೂಲ್ಯ ರೂಮಿನಲ್ಲಿ ಯೋಚನೆ ಮಾಡುತ್ತಾ ಕುಳಿತಾಗ ಆರತಿ ಅಲ್ಲಿಗೆ ಬಂದಿದ್ದು ಅಮ್ಮು ಏನು ಯೋಚನೆ ಮಾಡುತ್ತಾ ಇದ್ದೀಯಾ ಎಂದು ಕೇಳಿದ್ದಾಳೆ. ಇದಕ್ಕೆ ಅಮೂಲ್ಯ ಈ ಮನೆಗೂ ಹಾಗೂ ವೈದೇಹಿ ಅಮ್ಮನಿಗೂ ಈ ಮನೆಗೂ ಏನೋ ಬಲವಾದ ಸಂಬಂಧವಿದೆ ಎಂದು ನನಗೆ ಅನ್ನಿಸುತ್ತಿದೆ. ಆದರೆ ಅಜ್ಜಿ ಹೇಳಿದ್ದು ಸರಿಯಾಗಿದೆ ಎಂದು ಅನಿಸುತ್ತಿದೆ. ಆದರೆ ಅದು ಸರಿಯಾಗಿ ಇಲ್ಲ ನಾನು ಈ ಮನೆಯಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡು ಹಿಡಿಯಬೇಕು ಎಂದು ಅಮೂಲ್ಯ ಹೇಳಿದ್ದಾಳೆ. ಆರತಿ ಅಮೂಲ್ಯ ಹೇಳುತ್ತಿರುವುದಕ್ಕೆ ಸರಿ ನಾವು ಕಂಡು ಹಿಡಿಯೋಣ ಎಂದು ಹೇಳಿದ್ದಾಳೆ.
ಸುಹಾಸಿನಿ ಮುಂದೆ ಅಂಗಲಾಚಿ ಬೇಡಿಕೊಂಡ ವೈದೇಹಿ
ಸೂರ್ಯನಾರಾಯಣರ ಫೋಟೋವನ್ನು ನೋಡಿ ವೈದೇಹಿ ಕಣ್ಣಲ್ಲಿ ನೀರು ಹರಿಯುತ್ತದೆ . 25 ವರ್ಷದ ಬಳಿಕ ತನ್ನ ಗಂಡನ ಮುಖವನ್ನು ನೋಡಿದ ವೈದೇಹಿಗೆ ಆದಷ್ಟು ಬೇಗ ತಾನು ತನ್ನ ಗಂಡನನ್ನ ನೋಡಬೇಕು ಎನಿಸಿದೆ. ಸುಹಾಸಿನಿಗೆ ಸೂರ್ಯನಾರಾಯಣರು ಎಲ್ಲಿದ್ದಾರೆ ಎಂಬುವುದು ತಿಳಿದಿದೆ ಎಂದು ಸುಹಾಸಿನಿಯ ಬಳಿ ತನ್ನ ಗಂಡ ಎಲ್ಲಿದಾರೆ ಎಂದು ವೈದೇಹಿ ಕೇಳಿದಾಗ ಇಷ್ಟು ದಿನ ನನ್ನನ್ನ ನೀನು ಆಟವಾಡಿಸುತ್ತಾ ಇದ್ದೆ ಈಗ ನನ್ನ ಸರದಿ ಎಂದು ಸುಹಾಸಿನಿ ವೈದೇಹಿಗೆ ಹೇಳಿದ್ದಾಳೆ.

ದ್ರುವನ ಎಂಟ್ರಿ ಗೆ ಸುಹಾಸಿನಿ ಶಾಕ್
ಸುಹಾಸಿನಿಯ ಕಾಲಿಗೆ ವೈದೇಹಿ ಬೀಳಲು ಹೋಗುವಾಗ ದ್ರುವ ಅಮ್ಮನನ್ನು ತಡೆಯುತ್ತಾನೆ ಧ್ರುವನನ್ನು ನೋಡಿ ಸುಹಾಸಿನಿ ಶಾಕ್ ಆಗಿದ್ದಾಳೆ. ವೈದೇಹಿಯ ಬಳಿ ಬಂದ ಧ್ರುವ ಅಮ್ಮ ನೀನು ಮೇಲೆ ಎದ್ದೇಳು. ಅನ್ಯಾಯ ಮಾಡಿದವರ ಕಾಲಿಗೆ ಬೀಳುವುದು ಸರಿಯಲ್ಲ ಎಂದು ವೈದೇಹಿಯನ್ನ ಮೇಲಕ್ಕೆ ಎತ್ತಿದ್ದಾನೆ. ಇನ್ನು ವೈದೇಹಿ ದ್ರುವನನ್ನ ನೋಡಿ ತುಂಬಾ ಸಂತೋಷವನ್ನ ಪಟ್ಟಿದ್ದಾಳೆ.
ಆದರೆ ಸುಹಾಸಿನಿ ಧ್ರುವ ಮಾತನಾಡುತ್ತಿರುವುದಕ್ಕೆ ಆತಂಕದಲ್ಲಿದ್ದಾಳೆ. ಏನು ಮದರ್ ಇಂಡಿಯಾ ಚೆನ್ನಾಗಿದ್ದೀರಾ ಎಂದು ಧ್ರುವ ಹೇಳಿದರೆ ಸುಹಾಸಿನಿ ಚೆನ್ನಾಗಿ ಇದ್ದೇನೆ. ನೀನು ಮಾತನಾಡುತ್ತಾ ಇದ್ದೀಯಾ ಎಂದು ಕೇಳಿದ್ದಾಳೆ. ಇದಕ್ಕೆ ಧ್ರುವ ನನಗೆ ಹಾಗೂ ನನ್ನ ಅಮ್ಮನಿಗೆ ತೊಂದರೆ ನೀಡಿದರೆ ಚೆನ್ನಾಗಿ ಇರೋದಿಲ್ಲ ಎಂದು ವಾರ್ನಿಂಗ್ ಮಾಡಿದ್ದಾನೆ. ಸುಹಾಸಿನಿ ಧ್ರುವನ ಮಾತನ್ನ ಕೇಳಿ ಭಯ ಬೀತಳಾಗಿದ್ದಾಳೆ ಯಾಕೆಂದರೆ ಅವನಿಗೆ ವೈದೇಹಿ ತನ್ನ ಅಮ್ಮ ಎಂಬುದು ಗೊತ್ತಾಗಿದೆ ಇಬ್ಬರು ಸೇರಿ ಏನಾದರೂ ಪ್ಲಾನ್ ಮಾಡಿದರೆ ಎಂದು ಯೋಚಿಸಿದ್ದಾಳೆ.

ಹಳೆಯ ನೆನಪು ಬಾರದೆ ಒದ್ದಾಡುತ್ತಿರುವ ಸೂರ್ಯನಾರಾಯಣರು
ಸೂರ್ಯನಾರಾಯಣರು ತನ್ನ ಹೆಂಡತಿಯ ಮುಖ ತೋರಿಸಿ ಎಂದು ಅಗ್ನಿ ಬಳಿ ಕೇಳಿಕೊಳ್ಳುತ್ತಾರೆ. ಆಗ ಅಗ್ನಿ ನೀವೇ ನೆನಪಿಸಿಕೊಳ್ಳಿ ಇದೇ ಇವತ್ತು ನಾನು ನಿಮಗೆ ಕೊಡುತ್ತಿರುವ ಟಾಸ್ಕ್ ಎಂದು ಹೇಳಿದ್ದಾನೆ. ಸೂರ್ಯನಾರಾಯಣರು ತಮ್ಮ ಹೆಂಡತಿಯ ಮುಖವನ್ನು ನೆನಪಿಸಿಕೊಳ್ಳಲು ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಹಳೆಯ ನೆನಪು ಯಾವುದು ಬರುತ್ತಿಲ್ಲ. ಇದರಿಂದ ಅಗ್ನಿ ತುಂಬಾ ಖುಷಿಯನ್ನ ಪಟ್ಟಿದ್ದಾನೆ. ಹೀಗೆ ನೀವು ನೋವು ಅನುಭವಿಸಿ ಸಾಯಬೇಕು ಎಂದು ಹೇಳಿದ್ದಾನೆ.